ಭಾರತೀಯರು ದೇಶದ ಯಾವ ಭಾಗದಿಂದ ಬೇಕಾದರೂ ಪಾಸ್‌ಪೋರ್ಟ್‌ಗೆ ಈ ಆ್ಯಪ್ ಮೂಲಕ ಅರ್ಜಿ ಸಲ್ಲಿಸಬಹುದು. ಪಾಸ್‌ಪೋರ್ಟ್‌ಗೆ ಸಂಬಂಧಿತ ಶುಲ್ಕಗಳನ್ನು ಇದರಲ್ಲಿ ಪಾವತಿಸಬಹುದು. ಸಂಬಂಧಿತ ಅಪಾಯಿಂಟ್‌ಮೆಂಟ್ ಫಿಕ್ಸ್ ಮಾಡೋ, ಬದಲಾಯಿಸೋದು ಅಥವಾ ಕ್ಯಾನ್ಸಲ್ ಮಾಡೋದನ್ನೂ ಮಾಡಬಹುದು.

ಮೊಬೈಲ್ ಮೂಲಕವೇ ಪಾಸ್‌ಪೋರ್ಟ್‌ಗೆ ಅಪ್ಲೈಮಾಡುವ ಹೊಸ ಸೇವೆ ಆರಂಭವಾಗಿದೆ. ಎಂಪಾಸ್‌ಪೋರ್ಟ್ ಸೇವಾ ಆ್ಯಪ್ mPassportSevaApp  ಅನ್ನು ಇದಕ್ಕೋಸ್ಕರವೇ ಅಭಿವೃದ್ಧಿಪಡಿಸಲಾಗಿದೆ. ಈ ತಿಂಗಳ ಆರಂಭದಿಂದಲೇ ಮೊಬೈಲ್ ಪ್ಲೇ ಸ್ಟೋರ್‌ನಲ್ಲಿ ಈ ಆ್ಯಪ್ ಲಭ್ಯವಾಗುತ್ತಿದೆ.

2013 ರಲ್ಲೇ ಇದು ಬಿಡುಗಡೆಯಾಗಿತ್ತು. ಪಾಸ್ ಪೋರ್ಟ್‌ಗೆ ಅರ್ಜಿ ಸಲ್ಲಿಸುವ ವಿಧಾನ, ಸಲ್ಲಿಕೆಯಾದ ಪಾಸ್‌ಪೋರ್ಟ್ ಅರ್ಜಿಯನ್ನು ಟ್ರೇಸ್ ಮಾಡುವುದು, ವಿವಿಧ ಹಂತಗಳ ಅವಲೋಕನ ಮೊದಲಾದ ಸೇವೆ ಇದರಲ್ಲಿ ಲಭ್ಯವಿತ್ತು. ಆದರೆ ಈ ಬದಲಾದ 3.0 ವರ್ಶನ್‌ನ ಎಂಪಾಸ್‌ಪೋರ್ಟ್ ಸೇವಾ ಆ್ಯಪ್‌ನಲ್ಲಿ ಇದಕ್ಕಿಂತ ಹೆಚ್ಚಿನ ಸೇವೆಗಳು ಲಭ್ಯವಿದೆ.

ಹೊಸ ಆ್ಯಪ್‌ನಲ್ಲೇನಿದೆ?
ಭಾರತೀಯರು ದೇಶದ ಯಾವ ಭಾಗದಿಂದ ಬೇಕಾದರೂ ಪಾಸ್‌ಪೋರ್ಟ್‌ಗೆ ಈ ಆ್ಯಪ್ ಮೂಲಕ ಅರ್ಜಿ ಸಲ್ಲಿಸಬಹುದು. ಪಾಸ್‌ಪೋರ್ಟ್‌ಗೆ ಸಂಬಂಧಿತ ಶುಲ್ಕಗಳನ್ನು ಇದರಲ್ಲಿ ಪಾವತಿಸಬಹುದು. ಸಂಬಂಧಿತ ಅಪಾಯಿಂಟ್‌ಮೆಂಟ್ ಫಿಕ್ಸ್ ಮಾಡೋ, ಬದಲಾಯಿಸೋದು ಅಥವಾ ಕ್ಯಾನ್ಸಲ್ ಮಾಡೋದನ್ನೂ ಮಾಡಬಹುದು.

ಈಗಾಗಲೇ ಪಾರ್ಟ್‌ಪೋರ್ಟ್ ಹೊಂದಿರುವವರು ವೈಯುಕ್ತಿಕ ವಿವರ ಬದಲಾವಣೆ ಬೇಕಿದ್ದಾಗ, ಅವಧಿ ಮುಕ್ತಾಯವಾಗಿದ್ದಾಗ, ಪಾಸ್‌ಪೋರ್ಟ್ ಹಾಳಾಗಿದ್ದರೆ, ಕಳೆದುಹೋಗಿದ್ದರೆ ಪಾಸ್‌ಪೋರ್ಟ್‌ನ ಮರು ನೋಂದ ಣಿಯನ್ನೂ ಈ ಆ್ಯಪ್‌ನಲ್ಲೇ ಮಾಡಬಹುದು. 

ವೆಬ್‌ಸೈಟ್‌ನಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ರೀತಿಯೇ ಇಲ್ಲೂ ಇರುತ್ತೆ. ಉಳಿದೆಲ್ಲ ಹಂತಗಳಲ್ಲೂ ವೆಬ್‌ಸೈಟ್‌ಗೂ ಇದಕ್ಕೂ ವ್ಯತ್ಯಾಸ ಇರಲ್ಲ. ಆದರೆ ಒಂದೇ ಉಪಯೋಗ ಅಂದರೆ ಅಲ್ಲಿಗಿಂತ ಬೇಗ ಇಲ್ಲಿ ಪಾಸ್‌ಪೋರ್ಟ್‌ಗೆ ಅಪ್ಲೈ ಮಾಡಬಹುದು. ಮೊದಲು ಗೂಗಲ್ ಪ್ಲೇ ಸ್ಟೋರ್‌ನಲ್ಲಿ mPassportSevaApp  ಡೌನ್‌ಲೋಡ್ ಮಾಡಿಕೊಳ್ಳಿ.

ಸ್ಟೆಪ್ 1: ಬಳಕೆದಾರರಾಗಿ (ನ್ಯೂ ಯೂಸರ್) ರಿಜಿಸ್ಟ್ರೇಶನ್ ಮಾಡಿಕೊಳ್ಳಿ.

ಸ್ಟೆಪ್ 2: ನಿಮ್ಮ ಸಿಟಿಯಲ್ಲಿರುವ ಪಾಸ್‌ಪೋರ್ಟ್ ಆಫೀಸ್‌ಅನ್ನು ಸೆಲೆಕ್ಟ್ ಮಾಡಿ. ಇದು ನೀವು ನೀಡುವ ಅಧಿಕೃತ ವಿಳಾಸದ ಸಮೀಪದಲ್ಲೇ ಇರುವ ಆಫೀಸ್ ಆಗಬೇಕು. ಒಂದು ವೇಳೆ ನೀವಿರುವ ಸಿಟಿಯಲ್ಲಿ ಪಾಸ್‌ಪೋರ್ಟ್ ಆಫೀಸ್ ಇಲ್ಲದಿದ್ದರೆ ನೀವಿರುವ ಜಾಗಕ್ಕೆ ಯಾವ ಪಾಸ್‌ಪೋರ್ಟ್ ಆಫೀಸ್ ನಿಗದಿಪಡಿಸಿದ್ದಾರೆ ಅನ್ನುವುದನ್ನು ಖಚಿತ ಪಡಿಸಿ ಇದರಲ್ಲಿ ನೊಂದಾಯಿಸಿ.

ಸ್ಟೆಪ್ 3: ನಿಮ್ಮ ಹೆಸರು, ಈಮೇಲ್ ವಿಳಾಸ, ಹುಟ್ಟಿದ ದಿನಾಂಕ ಇತ್ಯಾದಿ ವಿವರಗಳನ್ನು ತುಂಬಬೇಕು.

ಸ್ಟೆಪ್ 4: ಬಳಕೆಯ ಹೆಸರು (ಯೂಸರ್ ನೇಮ್) ಸೃಷ್ಟಿಸಿಕೊಳ್ಳಿ. ಹಾಗೇ ಹೊಸ ಪಾಸ್‌ವರ್ಡ್‌ಅನ್ನೂ ಕ್ರಿಯೇಟ್ ಮಾಡಿ.

ಸ್ಟೆಪ್ 5: ಸೆಕ್ಯುರಿಟಿ ಪ್ರಶ್ನೆಗಳಿಗೆ ಉತ್ತರಿಸಿ. ನಿಮ್ಮ ಪಾಸ್‌ವರ್ಡ್ ಮರೆತು ಹೋದಾಗ ಇದು ಉಪಯೋಗಕ್ಕೆ ಬರುತ್ತದೆ.

ಸ್ಟೆಪ್ 6: ಪರಿಶೀಲನೆಗಾಗಿ ಇಅಇಏಅ ಪ್ರಕಟವಾಗುತ್ತದೆ.

ಸ್ಟೆಪ್ 7: ಈಗ ಆ್ಯಪ್‌ನಿಂದ ಎಕ್ಸಿಟ್ ಆಗಿ ಇಮೇಲ್ ಅನ್ನು ಚೆಕ್ ಮಾಡಿ. ಪರಿಶೀಲನೆಗೆ ಬೇಕಾದ ಲಿಂಕ್ ಬಂದಿರುತ್ತೆ. ಆ ಲಿಂಕ್‌ಗೆ ಹೋಗಿ ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಳಿಸಿ.

ಸ್ಟೆಪ್ 8: ಪರಿಶೀಲನಾ ಪ್ರಕ್ರಿಯೆಗಳು ಮುಗಿದ ಬಳಿಕ ಅಗತ್ಯವಿರುವ ದಾಖಲೆಗಳಾದ ಆಧಾರ್, ಗುರುತಿನ ಚೀಟಿ, ಚಲನಾ ಪರವಾನಗಿ ಇತ್ಯಾದಿ ದಾಖಲೆಗಳನ್ನು ಅಪ್‌ಲೋಡ್ ಮಾಡಿ.

ಸ್ಟೆಪ್ 9: ಎಲ್ಲ ಪ್ರಕ್ರಿಯೆಗಳೂ ಮುಗಿದ ಬಳಿಕ ಸಬ್ ಮಿಟ್ ಮಾಡಿ. ಸ್ಟೆಪ್

ಸ್ಟೆಪ್ 10: ಒಂದು ಕೋಡ್ ಸಿಗುತ್ತೆ. ಆ ಮೂಲಕ ನೀವು ಮುಂದಿನ ಪ್ರಕ್ರಿಯೆಗಳ ವಿವರ ಪಡೆಯಬಹುದು.