1 ಕೋಟಿ ಸೋಶಿಯಲ್ ಮೀಡಿಯಾ ಖಾತೆಗಳ ಮೇಲೆ ಕಣ್ಣು; ಯಾಮಾರಿದ್ರೆ ಕಥೆ ಅಷ್ಟೇ!
ಸೋಶಿಯಲ್ ಮೀಡಿಯಾದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಅಂಕುಶ ಹಾಕಲು ಮುಂದಾದ ಚುನಾವಣಾ ಆಯೋಗ; ರಾಜ್ಯದ ಒಂದು ಕೋಟಿ ಖಾತೆಗಳ ಮೇಲೆ ಕಣ್ಣು!
ಬೆಂಗಳೂರು: 2019ರ ಲೋಕಸಭಾ ಚುನಾವಣೆಯು ತಂತ್ರಜ್ಞಾನದ ದೃಷ್ಟಿಯಿಂದಲೂ ಒಂದು ದೊಡ್ಡ ಸವಾಲಾಗಿ ಹೊರಹೊಮ್ಮಿದೆ. ಸೋಶಿಯಲ್ ಮೀಡಿಯಾ ಯುಗದಲ್ಲಿ ಡಿಜಿಟಲ್ ಸ್ಪೇಸ್‌ನ್ನು ಕೂಡಾ ಸ್ವಚ್ಛವಾಗಿಡುವುದು ಪಾರದರ್ಶಕ ಚುನಾವಣೆಯ ಇಂದಿನ ಬೇಡಿಕೆಯಾಗಿದೆ.
ಚುನಾವಣೆ ಸಂದರ್ಭದಲ್ಲಿ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಿಗೆ ಅನ್ವಯವಾಗುವ ನೀತಿ ಸಂಹಿತೆ ರೂಪಿಸಲಾಗಿದೆ. ಆದರೆ ಪ್ರತಿಯೊಬ್ಬ ಬಳಕೆದಾರರನು ‘ಪ್ರಕಾಶಕ/ ಪ್ರಸಾರಕ’ನಾಗಿರುವ ಸೋಶಿಯಲ್ ಮೀಡಿಯಾವನ್ನು ತಹಬದಿಗೆ ತರುವುದು ಹೇಗೆ? ಎಂಬುವುದು ಆಯೋಗದ ಮುಂದಿರುವ ಬೃಹದಾಕಾರದ ಸವಾಲು.
ಚುನಾವಣೆಗಳ ಮೇಲೆ ಸೋಶಿಯಲ್ ಮೀಡಿಯಾಗಳು ಬೀರುವ ಪ್ರಭಾವವನ್ನು ಗಮನದಲ್ಲಿಟ್ಟುಕೊಂಡು, ರಾಜ್ಯದಲ್ಲಿ ಸೋಶಿಯಲ್ ಮೀಡಿಯಾ ಖಾತೆಗಳ ಮೇಲೆ ನಿಗಾ ಇಡಲು ಆಯೋಗ ಮುಂದಾಗಿದೆ.
ಇದನ್ನೂ ಓದಿ: ವಾಟ್ಸಪ್ ಹೊಸ ಫೀಚರ್: ಸುಳ್ಸುದ್ದಿ ಹರಡೋರಿಗೆ ಕಲಿಸಲಿದೆ ಬುದ್ಧಿ!
ಹಾಗಾಗಿ, ಅದಕ್ಕಾಗಿ ನಿಯೋಜಿಸಲಾದ ಸಿಬ್ಬಂದಿಗಳು ಫೇಸ್ಬುಕ್, ಟ್ವಿಟರ್, ಮತ್ತು ವಾಟ್ಸಪ್ ಗ್ರೂಪ್‌ಗಳ ಭಾಗವಾಗಿ, ಅಲ್ಲಿ ನಡೆಯುವ ರಾಜಕೀಯ ಚರ್ಚೆಗಳ ಮೇಲೆ ನಿಗಾ ಇಡಲಿದ್ದಾರೆ. ಅಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಯಾಗುತ್ತಿದೆಯಾ? ಅಥವಾ ದ್ವೇಷ ಹರಡುವ ಕೆಲಸ ನಡಿಯುತ್ತಿದೆಯೇ? ಎಂಬಿತ್ಯಾದಿ ವಿಷಯಗಳ ಗಮನಿಸಲಿದ್ದಾರೆ ಎಂದು ಆಂಗ್ಲ ದೈನಿಕವೊಂದು ವರದಿ ಮಾಡಿದೆ.
ಬರೇ ಕಾಂಗ್ರೆಸ್- ಬಿಜೆಪಿಯಂತಹ ದೊಡ್ಡ ಪಕ್ಷಗಳು ಮಾತ್ರವಲ್ಲ, ಇತರ ಪಕ್ಷಗಳ ಸೋಶಿಯಲ್ ಮೀಡಿಯಾ ಖಾತೆಗಳ ಮೆಲೂ ಕೂಡಾ ಕಣ್ಣಿಡಲಾಗುತ್ತದೆ. ಸೋಶಿಯಲ್ ಮೀಡಿಯಾ ಬಳಕೆ ಹೆಚ್ಚಾಗಿ ನಗರ ಕೇಂದ್ರಿತವಾಗಿದ್ದು, ಒಂದು ಕೋಟಿ ಬಳಕೆದಾರರ ಪೈಕಿ ಸುಮಾರು 70 ಲಕ್ಷ ಬೆಂಗಳೂರಿನಲ್ಲೇ ಇದ್ದಾರೆ ಎಂದು ಅಧಿಕಾರಿಗಳ ಲೆಕ್ಕಾಚಾರ.
ಸೈಬರ್ ಅಪರಾಧಗಳಿಗೆ ಈಗಾಗಲೇ ಕಾನೂನು ಕಟ್ಟಳೆಗಳಿವೆ. ಸೋಶಿಯಲ್ ಮೀಡಿಯಾದಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ನಾವು ಅಷ್ಟೇ ಜಾಗೃತರಾಗಿದ್ದೇವೆ, ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಹಣ-ಹೆಂಡ ಕಂಡ್ರೆ ಹಿಂಗ್ ಮಾಡಿ ಭೇಷ್ ಎನಿಸಿಕೊಳ್ಳಿ!
ಭಾರತದ ಮಟ್ಟಿಗೆ ಹೇಳುವುದಾದರೆ, 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋಶಿಯಲ್ ಮೀಡಿಯಾ ಪ್ರಭಾವಶಾಲಿ ಮಾಧ್ಯಮವಾಗಿ ಹೊರಹೊಮ್ಮಿತ್ತು.