ಹಣ-ಹೆಂಡ ಕಂಡ್ರೆ ಹಿಂಗ್ ಮಾಡಿ ಭೇಷ್ ಎನಿಸಿಕೊಳ್ಳಿ!

ಕರ್ನಾಟಕದಲ್ಲಿ 14 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಏ.18 (ಗುರುವಾರ), ಇನ್ನುಳಿದ 14 ಕ್ಷೇತ್ರಗಳಿಗೆ 2ನೇ ಹಂತದಲ್ಲಿ ಏ. 23 (ಮಂಗಳವಾರ) ಮತದಾನ; ನೀತಿ ಸಂಹಿತೆ ಉಲ್ಲಂಘನೆ ವಿರುದ್ಧ ಚುನಾವಣಾ ಆಯೋಗದಿಂದ ಆ್ಯಪ್ ಮೂಲಕ ಹದ್ದಿನ ಕಣ್ಣು; ನೀತಿ ಸಂಹಿತೆ ಉಲ್ಲಂಘನೆ ಆಗ್ತಿದಿಯಾ? ಹಾಗಾದ್ರೆ ಹೀಗೆ ಮಾಡಿ.... 

Election Commission Poll Code Violation cVIGIL Mobile App

ಬೆಂಗಳೂರು: ಲೋಕಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಸ್ವಚ್ಛ ಮತ್ತು ಪಾರದರ್ಶಕ ಚುನಾವಣೆ ನಡೆಸುವ ಜವಾಬ್ದಾರಿ ಬರೇ ಚುನಾವಣಾ ಆಯೋಗದ್ದು ಮಾತ್ರವಲ್ಲ; ಇದರಲ್ಲಿ ಮತದಾರರ ಸಹಕಾರವೂ ಅಷ್ಟೇ ಮುಖ್ಯ. 

ಚುನಾವಣಾ ಅಕ್ರಮಗಳನ್ನು ತಡೆಯಲು ಚುನಾವಣಾ ಆಯೋಗವು ಸರ್ವ ಪ್ರಯತ್ನಗಳನ್ನು ನಡೆಸುತ್ತಿದೆ. ದೇಶಾದ್ಯಂತ ಚುನಾವಣಾ ನೀತಿ ಸಂಹಿತೆಯು ಜಾರಿಯಾಗಿದೆ. ಅವುಗಳನ್ನು ಪಾಲಿಸುವುದು ಎಲ್ಲರ ಕರ್ತವ್ಯ. 

ಇದನ್ನೂ ಓದಿ: ಮತದಾರರೇ ಗಮನಿಸಿ... ಈ ನಂಬರ್ ನೋಟ್ ಮಾಡಿಕೊಳ್ಳಿ

ಯಾವುದೇ ಪಕ್ಷ ಅಥವಾ ವ್ಯಕ್ತಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸುವುದು ನಿಮ್ಮ ಗಮನಕ್ಕೆ ಬಂದರೆ, ನೀವು ಅದನ್ನು ಆಯೋಗದ ಗಮನಕ್ಕೆ ತರಬಹುದು. ಅದಕ್ಕಾಗಿ ನೀವು ಮಾಡಬೇಕಾದುದು ಇಷ್ಟೇ. ಗೂಗಲ್ ಪ್ಲೇ ಸ್ಟೋರ್‌ಗೆ ಭೇಟಿ ನೀಡಿ cVIGIL ಮೊಬೈಲ್ ಆ್ಯಪನ್ನು ಡೌನ್ ಲೋಡ್ ಮಾಡಿಕೊಳ್ಳಿ. 

ಈ ಆ್ಯಪ್‌ನಲ್ಲಿ ನೀವು ಫೋಟೋ ಹಾಗೂ ವಿಡಿಯೋಗಳನ್ನು ಅಪ್ಲೊಡ್ ಮಾಡೋ ಮೂಲಕ ದೂರನ್ನು ದಾಖಲಿಸಬಹುದಾಗಿದೆ. ಅಷ್ಟೇ ಅಲ್ಲ, ಈ ಮೂಲಕ ದಾಖಲಿಸಿರುವ ದೂರಿಗೆ, 100 ನಿಮಿಷದೊಳಗೆ ಸ್ಪಂದಿಸುವುದಾಗಿ ಆಯೋಗವು ಭರವಸೆ ನೀಡಿದೆ.

ಇದನ್ನೂ ಓದಿ: ಮತದಾರರು ಮಾಡಬಾರದ ವಿಷಯಗಳು ತಿಳಿಬೇಕಾ?

ದೇಶದಲ್ಲಿ  ಏ.11 ರಿಂದ ಆರಂಭವಾಗಿ ಮೇ 19ರವರೆಗೆ ಒಟ್ಟು 7 ಹಂತಗಳಲ್ಲಿ 17ನೇ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಮೇ 23 ರಂದು ಫಲಿತಾಂಶ ಪ್ರಕಟವಾಗಲಿದೆ. 

ಕರ್ನಾಟಕದಲ್ಲಿ 14 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಏ. 18 (ಗುರುವಾರ), ಇನ್ನುಳಿದ 14 ಕ್ಷೇತ್ರಗಳಿಗೆ 2ನೇ ಹಂತದಲ್ಲಿ ಏ. 23 (ಮಂಗಳವಾರ)  ಮತದಾನ ನಡೆಯಲಿದೆ.

Latest Videos
Follow Us:
Download App:
  • android
  • ios