ಭದ್ರತಾ ಲೋಪ: ಅಮಿತ್ ಶಾ ಕಾರಿಗೆ ಬೈಕಲ್ಲಿ ಅಡ್ಡ ಬಂದ ಯುವಕರು!
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜ್ಯ ಭೇಟಿ ಹೆಚ್ಚಾಗಿದೆ. ಈ ನಡುವೆ ಅವರು ಭೇಟಿ ನೀಡಿದ ಕಡೆ ಭದ್ರತಾ ಲೋಪಗಳು ಮರುಕಳಿಸುತ್ತಿವೆ. ಭಾನುವಾರ ರಾತ್ರಿ ಅಮಿತ್ ಶಾ ಅವರು ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ತೆರಳುವಾಗ ಭದ್ರತಾಲೋಪವಾಗಿದೆ.
ಬೆಂಗಳೂರು (ಮಾ.27) : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜ್ಯ ಭೇಟಿ ಹೆಚ್ಚಾಗಿದೆ. ಈ ನಡುವೆ ಅವರು ಭೇಟಿ ನೀಡಿದ ಕಡೆ ಭದ್ರತಾ ಲೋಪಗಳು ಮರುಕಳಿಸುತ್ತಿವೆ. ಭಾನುವಾರ ರಾತ್ರಿ ಅಮಿತ್ ಶಾ(Amit shah) ಅವರು ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ತೆರಳುವಾಗ ಭದ್ರತಾಲೋಪವಾಗಿದೆ.
ಭಾನುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಮಿತ್ ಶಾ ರಾತ್ರಿ 10.45ರ ಸುಮಾರಿಗೆ ದೆಹಲಿಗೆ ವಾಪಸ್ ತೆರಳುತ್ತಿದ್ದರು. ಹೀಗಾಗಿ ರಾಜಭವನ(Rajbhavana road) ರಸ್ತೆಯಿಂದ ಎಚ್‌ಎಎಲ್ ವಿಮಾನ ನಿಲ್ದಾಣ(HAL Airport)ಕ್ಕೆ ಹೋಗುವ ಮಾರ್ಗ ಮಧ್ಯೆ ಮಣಿಪಾಲ್ ಸೆಂಟರ್(Manipal center) ಎದುರು ಏಕಾಏಕಿ ನಾಲ್ವರು ಯುವಕರು ಬೈಕ್‌ನಲ್ಲಿ ಅಮಿತ್ ಶಾ ವಾಹನಕೆæ್ಕ ಅಡ್ಡ ಬಂದಿದ್ದಾರೆ. ಕೂಡಲೇ ಭದ್ರತಾ ಸಿಬ್ಬಂದಿ ಲಾಠಿ ಪ್ರಹಾರ ನಡೆಸಿ, ಎಳೆಯಲು ಯತ್ನಿಸಿದ್ದಾರೆ. ಬಳಿಕ ಮೂವರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಶನಿವಾರ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ದಾವಣಗೆರೆಯಲ್ಲಿ ರೋಡ್ ಶೋ ಮಾಡುವಾಗ ಯುವಕನೊಬ್ಬ ಏಕಾಏಕಿ ಪ್ರಧಾನಿ ಅವರ ಕಾರು ಬಳಿ ತೆರಳಲು ಓಡಿದ್ದನ್ನು ಇಲ್ಲಿ ಸ್ಮರಿಸಬಹುದು.
ವಿಧಾನಸೌಧದೆದುರು ಬಸವಣ್ಣ, ಕೆಂಪೇಗೌಡ ಪ್ರತಿಮೆ ಅನಾವರಣಗೊಳಿಸಿದ ಅಮಿತ್ ಶಾ