ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದ ಘಟನೆಯಲ್ಲಿ ನೀರಿನಲ್ಲಿ ಯೋಗ ಮಾಡುತ್ತಿದ್ದ ೭೮ ವರ್ಷದ ವ್ಯಕ್ತಿಯೊಬ್ಬರು ಹಠಾತ್ ಮೃತಪಟ್ಟಿದ್ದಾರೆ. ನಾಗರಾಜು ಎಂಬ ಯೋಗಪಟು ಕಾವೇರಿ ನದಿಯಲ್ಲಿ ಯೋಗ ಮಾಡುವಾಗ ಈ ದುರ್ಘಟನೆ ಸಂಭವಿಸಿದೆ.
ಚಾಮರಾಜನಗರ (ಫೆ.16): ಯಾರಿಗೆ ಯಾವ ರೀತಿಯಲ್ಲಿ ಸಾವು ಬರುತ್ತದೆ ಹೇಳಲು ಬರುವುದಿಲ್ಲ. ಹಾಡುತ್ತಲೇ ಕುಸಿದು ಬಿದ್ದು ಮೃತಪಟ್ಟರು, ಆರೋಗ್ಯವಾಗಿದ್ದರೂ ಕಾರಣವಿಲ್ಲದೆ ಮೃತಪಟ್ಟವರು ದಿನಾ ಇಂಥ ಸುದ್ದಿ, ವಿಡಿಯೋಗಳು ನೋಡುತ್ತಲೇ ಇರುತ್ತೇವೆ. ಇದೀಗ ಅಂಥದ್ದೇ ಘಟನೆ ನಡೆದಿದೆ. ನೀರಿನಲ್ಲಿ ಯೋಗ ಮಾಡುತ್ತಲೇ ಯೋಗಪಟುವೊಬ್ಬರು ಹಠಾತ್ ಮೃತಪಟ್ಟ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ದಾಸನಪುರ ಬಳಿ ಹರಿಯುವ ಕಾವೇರಿ ನದಿಯಲ್ಲಿ ನಡೆದಿದೆ.
ಲಕ್ಷ್ಮಿನಾರಾಯಣ ದೇವಸ್ಥಾನ ಬಡಾವಣೆಯ ನಾಗರಾಜು(78) ಮೃತ ದುರ್ದೈವಿ. ಯೋಗಪಟುವಾಗಿರುವ ಮೃತರು. ಪ್ರತಿದಿನ ತೀರ್ಥ ಸ್ನಾನಕ್ಕೆ ಕಾವೇರಿ ನದಿಗಿಳಿಯುತ್ತಿದ್ದರು. ನೀರಿನಲ್ಲಿ ಕೆಲವೊತ್ತು ಯೋಗ ಮಾಡುತ್ತಿದ್ದರು. ಎಂದಿನಂತೆ ತೀರ್ಥಸ್ನಾನಕ್ಕೆ ನದಿಗೆ ಇಳಿದಿದ್ದ ನಾಗರಾಜು. ನದಿ ನೀರಿನಲ್ಲಿ ತೇಲುತ್ತಾ ಯೋಗ ಮಾಡಿದ್ದಾರೆ.
ಇದನ್ನೂ ಓದು: ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ 23 ವರ್ಷದ ಯುವತಿ ಹಠಾತ್ ಸಾವು
ಆದರೆ ಎಷ್ಟು ಹೊತ್ತಾದರೂ ಹಾಗೇ ತೇಲುವ ಸ್ಥಿತಿಯಲ್ಲೇ ಮಲಗಿದ್ದ ನಾಗರಾಜು. ಜೊತೆಗಿದ್ದ ಗೆಳೆಯರು ಮೊದಲು ಇದು ಯೋಗ ಮಾಡುತ್ತಿದ್ದಾರೆ ಎಂದು ಮೇಲೇಳುವವರಿಗೆ ಕಾದಿದ್ದಾರೆ. ಬಳಿಕ ಎಷ್ಟೊತ್ತಾದ್ರೂ ಎದ್ದೇಳದ, ಮಿಸುಕಾಡದಿರುವುದು ಅನುಮಾನ ಬಂದಿದೆ. ಹತ್ತಿರ ಹೋಗಿ ನೋಡಿದಾಗ ನಾಗರಾಜು ಮೃತಪಟ್ಟಿರುವುದು ಗೊತ್ತಾಗಿದೆ.
ಮೃತ ನಾಗರಾಜು ಯೋಗಪಟುವಾಗಿದ್ದು. ಯೋಗಮಾಡುತ್ತಲೇ ಕೊನೆಯುಸಿರೆಳೆದಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಸದ್ಯ ಪೊಲೀಸರು ಭೇಟಿ ನೀಡಿದ್ದು ಮೃತದೇಹ ಮರಣೋತ್ತರ ಪರೀಕ್ಷೆ ಬಳಿಕ ಕಾರಣ ಏನೆಂಬುದು ಗೊತ್ತಾಗಲಿದೆ.
