Asianet Suvarna News Asianet Suvarna News

2 ದಿನ 15 ಜಿಲ್ಲೆಗಳಲ್ಲಿ ಮಳೆಯ ‘ಯೆಲ್ಲೋ ಅಲರ್ಟ್‌’

  • ರಾಜ್ಯದ ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಅಕ್ಟೋಬರ್‌ 29 ಮತ್ತು 30ರಂದು ಹಿಂಗಾರು ಮಾರುತಗಳು ಪ್ರಬಲ
  • ಹಿಂಗಾರು ಮಾರುತಗಳು ಪ್ರಬಲವಾಗಲಿದ್ದು, ಗುಡುಗು ಸಹಿತ ಮಳೆಯಾಗಲಿದೆ
Yellow alert in 15 districts  heavy rain expected in Karnataka snr
Author
Bengaluru, First Published Oct 27, 2021, 6:23 AM IST

ಬೆಂಗಳೂರು (ಅ.27): ರಾಜ್ಯದ ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ (Coastal) ಅಕ್ಟೋಬರ್‌ 29 ಮತ್ತು 30ರಂದು ಹಿಂಗಾರು ಮಾರುತಗಳು ಪ್ರಬಲವಾಗಲಿದ್ದು, ಗುಡುಗು ಸಹಿತ ಮಳೆಯಾಗಲಿದೆ (Rain). 

ಈ ಹಿನ್ನೆಲೆಯಲ್ಲಿ ಬೆಂಗಳೂರು (Bengaluru) ನಗರ ಸೇರಿದಂತೆ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ‘ಯೆಲ್ಲೋ ಅಲರ್ಟ್‌’ (Yellow Alert) ಘೋಷಿಸಲಾಗಿದೆ. 

ಅ.29ಕ್ಕೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ (kolar), ಚಿಕ್ಕಬಳ್ಳಾಪುರ (Chikkaballapura), ಚಾಮರಾಜನಗರ (Chamarajanagar), ಮೈಸೂರು, ಕೋಲಾರ, ಮಂಡ್ಯ (Mandya), ರಾಮನಗರ (Ramanagara), ಶಿವಮೊಗ್ಗ (shivamogga), ದಾವಣಗೆರೆ, ತುಮಕೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಯಲ್ಲಿ ‘ಯೆಲ್ಲೋ ಅಲರ್ಟ್‌’ ಎಚ್ಚರಿಕೆ ನೀಡಲಾಗಿದೆ. 

ಕೇರಳ ಮಳೆ ಭೀಕರತೆ: ತಬ್ಬಿದ ಸ್ಥಿತಿಯಲ್ಲಿ ತಾಯಿ, ಮಗು ಶವಪತ್ತೆ!

ಅ.30ಕ್ಕೆ ಈ ಜಿಲ್ಲೆಗಳ ಜೊತೆಗೆ ಕರಾವಳಿಯ ಉತ್ತರ ಕನ್ನಡ, ಉಡುಪಿ (Udupi), ದಕ್ಷಿಣ ಕನ್ನಡ ಜಿಲ್ಲೆಗೂ ‘ಯೆಲ್ಲೋ ಅಲರ್ಟ್‌’ ಘೋಷಿಸಲಾಗಿದೆ. ಅ.27 ಮತ್ತು ಅ.28ರಂದು ಮಳೆಯ ಅಬ್ಬರ ಇರುವುದಿಲ್ಲ. ಉತ್ತರ ಕರ್ನಾಟಕದಲ್ಲಿ ಒಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಲಾಗಿದೆ.

ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ಕಳೆದ 24 ಗಂಟೆ ಅವಧಿಯಲ್ಲಿ ಬೀದರ್‌ನಲ್ಲಿ (Bidar) ಕನಿಷ್ಠ 12 ಡಿಗ್ರಿ ಸೆಲ್ಸಿಯಸ್‌ ಮತ್ತು ಶಿರಾಲಿಯಲ್ಲಿ ಗರಿಷ್ಠ 33.7 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಉಷ್ಣತೆ ವರದಿಯಾಗುತ್ತಿದ್ದು ಚಳಿಯ ವಾತಾವರಣ ಇದೆ.

ಬೆಳಗಾವಿಯ ಲೋಂಡಾ, ಶಿವಮೊಗ್ಗದ ಆಗುಂಬೆಯಲ್ಲಿ ತಲಾ 5 ಸೆಂ.ಮಿ. ಉತ್ತರ ಕನ್ನಡದ ಜಗಲ್‌ಬೆಟ್‌, ಮೈಸೂರಿನ ಕೆಆರ್‌ ನಗರ ತಲಾ 4, ದಕ್ಷಿಣ ಕನ್ನಡದ ಪುತ್ತೂರು, ಮೈಸೂರಿನ ಬಿಳಿಕೆರೆ, ಕೊಡಗಿನ ನಾಪೊಕ್ಲು, ಚಿಕ್ಕಮಗಳೂರಿನ ಕಳಸದಲ್ಲಿ ತಲಾ 3 ಸೆಂಮೀ ಮಳೆಯಾಗಿದೆ.

ಹಿಮಾಲಯ ತಪ್ಪಲಿಗೆ ತಲ್ಲಣ

ಉತ್ತರಾಖಂಡ(Uttarakhand) ಹಾಗೂ ಕೇರಳದ(Kerala) ಬಳಿಕ ಈಗ ಮಳೆ ಆರ್ಭಟದ ಸರದಿ ಸಿಕ್ಕಿಂ(Sikkim) ಹಾಗೂ ಪಶ್ಚಿಮ ಬಂಗಾಳದ್ದು(West Bengal). ಹಿಮಾಲಯದ ತಪ್ಪಲಿನ ರಾಜ್ಯವಾದ ಸಿಕ್ಕಿಂನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ಭಾರೀ ಭೂಕುಸಿತ(Landslide) ಸಂಭವಿಸಿವೆ. ಇನ್ನು ಚಹಾ ಬೆಳೆಯುವ ಪಶ್ಚಿಮ ಬಂಗಾಳದ ಉತ್ತರ ಭಾಗದಲ್ಲೂ ಮೇಘಸ್ಫೋಟ(Cloudburst) ಸಂಭವಿಸಿದ ಪರಿಣಾಮ ಭೂಮಿ ಕುಸಿದು, ಸಿಕ್ಕಿಂಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ(National Highway) 10ರಲ್ಲಿ ಭೂಕುಸಿತ ಉಂಟಾಗಿ ರಸ್ತೆ ಸಂಪರ್ಕ ಕಡಿತವಾಗಿದೆ. ವಿಮಾನ, ರೈಲು ಸಂಚಾರ ಕೂಡ ವ್ಯತ್ಯಯವಾಗಿದೆ.

ಇದೇ ವೇಳೆ, ಬಂಗಾಳದ ಡಾರ್ಜೀಲಿಂಗ್‌(Darjeeling), ಕಲಿಂಪಾಂಗ್‌ ಮತ್ತು ಅಲಿಪುರದೌರ್‌ ಜಿಲ್ಲೆಗಳಲ್ಲಿ ಗುರುವಾರದವರೆಗೆ ಭಾರಿ ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆ ರೆಡ್‌ ಅಲರ್ಟ್‌(Red Alert) ಘೋಷಿಸಿದೆ. ಈವರೆಗೆ ಬಂಗಾಳದಲ್ಲಿ ಸಾವಿನ 1 ಪ್ರಕರಣ ಮಾತ್ರ ವರದಿಯಾಗಿದೆ.

ಇನ್ನೊಂದೆಡೆ ಉತ್ತರಾಖಂಡದಲ್ಲಿ ಮಳೆ ಕಡಿಮೆಯಾಗಿದ್ದರೂ, ಮತ್ತೆ 5 ಶವಗಳು ಅವಶೇಷಗಳ ಅಡಿ ಸಿಕ್ಕಿವೆ ಹಾಗೂ ಸಾವಿನ ಸಂಖ್ಯೆ 47ಕ್ಕೆ ಏರಿದೆ. 11 ಜನ ನಾಪತ್ತೆಯಾಗಿದ್ದಾರೆ. ಭೂಕುಸಿತದಿಂದಾಗಿ ನೈನಿತಾಲ್‌ ಬಳಿಕ ಅಮ್ರೋಹಾ ಹಾಗೂ ರಾಣಿಖೇತ್‌ಗಳಿಗೆ ಸಂಪರ್ಕ ಕಡಿತವಾಗಿದೆ. ಹೀಗಾಗಿ ಸರಕು ಸಾಗಣೆ ಸ್ಥಗಿತವಾಗಿದ್ದು, ಅಗತ್ಯ ಇದ್ದವರಿಗೆ ಮಾತ್ರ ಪೆಟ್ರೋಲ್‌ ವಿತರಣೆ ನಡೆದಿದೆ.

  • ರಾಜ್ಯದ ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ (Coastal) ಅಕ್ಟೋಬರ್‌ 29 ಮತ್ತು 30ರಂದು ಹಿಂಗಾರು ಮಾರುತಗಳು ಪ್ರಬಲ
  • ಈ ಹಿನ್ನೆಲೆಯಲ್ಲಿ ಬೆಂಗಳೂರು (Bengaluru) ನಗರ ಸೇರಿದಂತೆ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ‘ಯೆಲ್ಲೋ ಅಲರ್ಟ್‌’ (Yellow Alert) ಘೋಷಿಸಲಾಗಿದೆ. 
Follow Us:
Download App:
  • android
  • ios