Asianet Suvarna News Asianet Suvarna News

9 ಜಿಲ್ಲೆ ರೈತರಿಗೆ ಬೀಜಗಳ ವಿತರಣೆ : ಅರಣ್ಯ ಅಭಿವೃದ್ಧಿಗೆ ಹೆಚ್ಚು ಒತ್ತು

 ನೈಸರ್ಗಿಕ ಸಂಪತ್ತನ್ನ ಉಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಅರಣ್ಯ ದಿನಾಚರಣೆಯಲ್ಲಿ  ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದರು. ಅರಣ್ಯ ಉಳಿಸಲು  ಪ್ರತ್ಯೇಕ ಹಣ ಮೀಸಲಿಡಲಾಗಿದೆ ಎಂದು ಸಿಎಂ ಹೇಳಿದರು. 

World Forest Day Celebrated in Bengaluru snr
Author
Bengaluru, First Published Mar 21, 2021, 1:59 PM IST

ಬೆಂಗಳೂರು (ಮಾ.21):  ಸಸ್ಯ ಸಂಪತ್ತು ಹಾಗೂ ಅರಣ್ಯ ಉಳಿಸುವ ನಿಟ್ಟಿನಲ್ಲಿ ಅರಣ್ಯ ದಿನ ಮಹತ್ವ ಪಡೆದಿದೆ.  ನೈಸರ್ಗಿಕ ಸಂಪತ್ತನ್ನ ಉಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದರು.

 ಬೆಂಗಳೂರಿನ ಅರಮನೆ ಮೈದಾನದಲ್ಲಿ  ಹಮ್ಮಿಕೊಂಡಿದ್ದ  ಇಶಾ ಫೌಂಡೇಷನ್ ವತಿಯಿಂದ ಕಾವೇರಿ ಕಾಲಿಂಗ್ ಅಭಿಯಾನಕ್ಕೆ ಒಂದು ವರ್ಷ ಪೂರ್ತಿಗೊಂಡ ಹಿನ್ನೆಲೆ ನಡೆದ ಕಾರ್ಯಕ್ರಮ ಹಾಗೂ ಅರಣ್ಯ ದಿನದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಎಲ್ಲರಿಗೂ ಅರಣ್ಯ ದಿನದ ಶುಭಾಶಯ ಕೋರಿದರು. 

ಅರಣ್ಯ ಉಳಿಸಲು  ಪ್ರತ್ಯೇಕ ಹಣ ಮೀಸಲಿಡಲಾಗಿದೆ. ಎರಡು ಅರಣ್ಯ ಪ್ರದೇಶದ ನಡುವೆ ಕಾರಿಡಾರ್ ರಸ್ತೆಯ ನಿರ್ಮಾಣ ಮಾಡಲಾಗುತ್ತದೆ. ಅರಣ್ಯ ಸ್ಯಾಟಲೈಟ್ ನಕ್ಷೆ ತಯಾರಿಸಿ, ವೈಜ್ಞಾನಿಕ ಪದ್ಧತಿ ಅಳವಡಿಕೆ ಮಾಡಲಾಗುತ್ತದೆ. ಸಂಸ್ಕೃತಿ, ಪರಂಪರೆ ರಕ್ಷಣೆಗೆ 2,900ಕೋಟಿ ರು. ಮೀಸಲಿಡಲಾಗಿದೆ. 9 ಜಿಲ್ಲೆಗಳಲ್ಲಿ ರೈತರಿಗೆ ಬೀಜಗಳನ್ನು ನೀಡಲಾಗುವುದು. ಹಣ್ಣು ಬಿಡುವ ಮರಗಳನ್ನ ಹೆಚ್ಚು ಬೆಳಸಲಾಗುವುದು. ಉತ್ತರ ಕನ್ನಡದಲ್ಲಿ ಶೀಘ್ರವೇ ಅಪ್ಸರಕೊಂಡ ಆಭಯಾರಣ್ಯ  ಉದ್ಘಾಟನೆ ಮಾಡಲಾಗುವುದು ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದರು. 

ಬೆಂಗಳೂರಿನಲ್ಲಿ ಪರಿಸರ ಸ್ನೇಹಿ E-ವಾಹನ ಶೋ ರೂಂ ಉದ್ಘಾಟಿಸಿದ ತೇಜಸ್ವಿ ಸೂರ್ಯ! ..

ಕಾವೇರಿ ಜಲಾನಯನ ಪ್ರದೇಶದಲ್ಲಿರೋ ಅರಣ್ಯ ಮತ್ತು ರೈತರ ಭೂ ಪ್ರದೇಶದ ಅಭಿವೃದ್ಧಿಗೆ ಸರ್ಕಾರ ಹೆಚ್ಚು ಒತ್ತು ನೀಡಲಿದೆ ಎಂದು ಈ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಹೇಳಿದರು. 

ಬೆಂಗಳೂರು ಹಾಡಿ ಹೊಗಳಿದ ಅರಣ್ಯ ಸಚಿವ 

ನಮ್ಮ ದೇಶದ ಹಸಿರು ನಗರಗಳಲ್ಲಿ ಬೆಂಗಳೂರು ಒಂದು.  ಗಾರ್ಡನ್ ಸಿಟಿ ಬೆಂಗಳೂರಲ್ಲಿ ನಾನು  ಉಳಿದುಕೊಂಡರೆ ಬೆಳಗ್ಗೆ ಕಬ್ಬನ್ ಪಾರ್ಕ್ ನಲ್ಲಿ  ವಾಯುವಿಹಾರ ಮಾಡುತ್ತೇನೆ ಎಂದು  ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು. 

ನಗರಗಳಲ್ಲಿ ಪಾರ್ಕ್ ಗಳು ಇರಲೇಬೇಕು. ಪಾರ್ಕ್ ಗಳು ನಗರ ಅರಣ್ಯದ ಒಂದು ಭಾಗ. ಕಬ್ಬನ್ ಪಾರ್ಕ್ ನಲ್ಲಿ ವಾಕ್ ಮಾಡುತ್ತಿದ್ದರೆ ನಗರದಲ್ಲಿ ಅರಣ್ಯಗಳು ಎಷ್ಟು ಮುಖ್ಯ ಅಂತ ಅನ್ನಿಸುತ್ತದೆ.  ದೇಶದ 200 ನಗರಗಳಲ್ಲಿ ನಗರ ಅರಣ್ಯೀಕರಣದ ಪ್ರಕ್ರಿಯೆ ಆರಂಭವಾಗಿದೆ. ದೇಶದಲ್ಲೇ ಕರ್ನಾಟಕ ಸಹ ಸಮೃದ್ಧವಾದ ಅರಣ್ಯ ಪ್ರದೇಶ  ಹೊಂದಿದೆ ಎಂದು ಪ್ರಕಾಶ್ ಜಾವಡೇಕರ್ ಹೇಳಿದರು. 

ಇನ್ನು ಈ ಕಾರ್ಯಕ್ರಮದಲ್ಲಿ ಪರಿಸರ ಕ್ಷೇತ್ರದಲ್ಲಿ ಸಾಧನೆ ಮೆರೆದವರಿಗೆ ಸಿಎಂ ಬಿಎಸ್ ವೈ ಹಾಗೂ ಈಶಾ ಫೌಂಡೇಶನ್ ನ ಸದ್ಗುರು ಜಗ್ಗಿ ವಾಸುದೇವ್ ಸನ್ಮಾನ ಮಾಡಿದರು. 

Follow Us:
Download App:
  • android
  • ios