ಬೆಂಗಳೂರಿನಲ್ಲಿ ಪರಿಸರ ಸ್ನೇಹಿ E-ವಾಹನ ಶೋ ರೂಂ ಉದ್ಘಾಟಿಸಿದ ತೇಜಸ್ವಿ ಸೂರ್ಯ!
ದೇಶದಲ್ಲಿ ಪರಿಸರ ಸ್ನೇಹಿ ವಾಹನಗಳಾದ ಎಲೆಕ್ಟ್ರಿಕ್ ವೆಹಿಕಲ್ ಬಳಕೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚಿನ ಉತ್ತೇಜನ ನೀಡುತ್ತಿದೆ. ಇದರ ಬೆನ್ನಲ್ಲೇ ಇದೀಗ ಪರಿಸರ ಸ್ನೇಹಿ ಇ ವಾಹನ ಶೋ ರೂಂ ಬೆಂಗಳೂರಿನಲ್ಲಿ ತಲೆ ಎತ್ತಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ಪರಿಸರ ಸ್ನೇಹಿ ಇ-ವಾಹನಗಳ ಬಳಕೆಯನ್ನು ಹೆಚ್ಚಿಸಿ ದೇಶದ ಪರಿಸರದ ಜತೆಗೆ ಗ್ರಾಹಕರ ಹಣ ಮತ್ತು ಸಮಯ ಉಳಿತಾಯ ಮಾಡುವ ಉದ್ದೇಶದಿಂದ ಜಿತೇಂದ್ರ ಇವಿ ಟೆಕ್ ಸಂಸ್ಥೆಯು ಅತಿಯಾಸ್ ಮೊಬಿಲಿಟಿ ಸಹಯೋಗದಲ್ಲಿ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಶೋ ರೂಂ ಬೆಂಗಳೂರಿನಲ್ಲಿ ಉದ್ಘಾಟಿಸಿದೆ. ಗ್ಲೋಬಲ್ ಎಲೆಕ್ಟ್ರಿಫಿಕೆಷನ್ ಮೊಮೆಂಟ್ ಪರಿಕಲ್ಪನೆಗೆ ಉತ್ತೇಜನವನ್ನು ನೀಡುವ ದಿಕ್ಕಿನಲ್ಲಿ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ.
ಈ ಸಂದರ್ಭದಲ್ಲಿ ಸಂಸದರಾದ ತೇಜಸ್ವಿ ಸೂರ್ಯ ಅವರು ಗೌರವ ಅತಿಥಿಯಾಗಿ ಆಗಮಿಸಿ ಶುಭಾ ಹಾರೈಸಿದರು. ಹೊಸ ಅತ್ಯಾಧುನಿಕ ಶೋ ರೂಂ ಗೆ ಚಾಲನೆ ನೀಡುವ ಮೂಲಕ ಬ್ಯಾಟರಿ ಚಾಲಿತ ವಾಹನಗಳನ್ನು ಪ್ರಮೋಟ್ ಮಾಡಲು ಜಿತೇಂದ್ರ ಇವಿ ಟೆಕ್ ಸಂಸ್ಥೆಯು ಕರ್ನಾಟಕದಲ್ಲಿ ತನ್ನ ಹೆಜ್ಜೆಯನ್ನು ಇಟ್ಟಿದೆ. ಭಾರತೀಯ ರಸ್ತೆಗಳಿಗೆ ಅನುಗುಣವಾಗಿ ಇ-ವಾಹನಗಳ ತಯಾರಿಕೆ ಮಾಡಲಾಗಿದ್ದು ಇದರಿಂದ ಗ್ರಾಹಕರಿಗೆ ಹಣ ಮತ್ತು ಸಮಯದ ಉಳಿತಾಯವಾಗುತ್ತದೆ. ಜತೆಗೆ ಪರಿಸರ ಸಂರಕ್ಷಣೆಗೆ ಕೂಡ ತನ್ನದೆ ಆದ ಕೊಡುಗೆಯನ್ನು ಇ-ವಾಹನಗಳು ನೀಡಲಿವೆ.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಪರಿಕಲ್ಪನೆಯ ಅಡಿಯಲ್ಲಿ ಗ್ಲೋಬಲ್ ಎಲೆಕ್ಟ್ರಿಫಿಕೆಷನ್ ಮೊಮೆಂಟ್ ಅನ್ನು ಪ್ರಮೋಟ್ ಮಾಡುವ ಉದ್ದೇಶವನ್ನು ಸಂಸ್ಥೆ ಹೊಂದಿದೆ. ಈ ಸಂಸ್ಥೆಯು ಐಎಸ್ಒ 9001 ಪ್ರಮಾಣಿಕೃತವಾಗಿದೆ. ಸಂಸ್ಥೆಯ ಉತ್ಪನ್ನಗಳನ್ನು ಐಸಿಎಟಿ (ICAT) / ಎಆರ್ಎಐ (ARAI) ದೃಢೀಕರಿಸಿವೆ.
ಸಂಸ್ಥೆಯು ದ್ವಿಚಕ್ರ ಸ್ಕೂಟರ್, ಮೋಟರ್ ಸೈಕರ್ ಮತ್ತು ತ್ರಿಚಕ್ರ ವಾಹನಗಳನ್ನು ಉತ್ಪಾದಿಸುತ್ತದೆ. ಹೈಸ್ಪೀಡ್ ವಾಹನವಾದ ಜೆಎಂಟಿ 1000 ಎಚ್‌ಎಸ್ ಒಂದು ಪ್ರಮುಖ ಮಾದರಿಯಾಗಿದ್ದು ಮತ್ತು ಸಾಗಾಣಿಕೆ ಉದ್ದೇಶದಿಂದ ಉತ್ಪಾದನೆ ಮಾಡಲಾಗಿದ್ದು ಕಾರ್ಗೋ ಅನುಮೋದನೆಯನ್ನು ಸಹ ಪಡೆದಿದೆ. ಜೆಎಂಟಿ 100 ಎಚ್ಎಸ್ ವಾಹನವು ಬಿ2ಬಿ ವ್ಯವಹಾರದಲ್ಲಿ ತೊಡಗಿಸಿಕೊಂಡ ಮತ್ತು ಲಾಜಿಸ್ಟಿಕ್ಸ್ ಸಂಸ್ಥೆಗಳ ಜನಪ್ರಿಯ ಆಯ್ಕೆ ಆಗಿದೆ.
ಸದ್ಯದಲ್ಲೆ ಸಂಸ್ಥೆಯು ಜೆಇಟಿ 320 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಸ್ಕೂಟರ್ ಅಂತರಾಷ್ಟ್ರಿಯ ಲುಕ್ ಮತ್ತು ಫೀಲ್ ಹೊಂದಿದೆ. ಇದರ ಜತೆಗೆ ಸಂಸ್ಥೆಯು 90 ಕಿಮೀ ಪ್ರತಿ ಗಂಟೆಗೆ ಚಲಿಸುವ ಕ್ಲಾಸೋ (Klasoo) ಹೈ ಸ್ಪೀಡ್ ಮೋಟರ್ ಸೈಕಲ್ ಅನ್ನು ಸಹ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗಿದೆ. ಇದು ಡಿಜಿಟಲ್ ಡಿಸ್ಪ್ಲೈ, ಐಒಟಿ ಆಧಾರಿತ ಕ್ಲಸ್ಟರ್ ಹೊಂದಿದ್ದು 120 ಕಿಮೀ ಮೈಲೆಜ್ ನೀಡುತ್ತದೆ. ಪ್ಯಾಸೆಂಜರ್ ಮತ್ತು ಲೋಡರ್ ವಿಭಾಗದಲ್ಲಿ ಎಲ್3 ಮತ್ತು ಎಲ್5 ತ್ರಿಚಕ್ರ ವಾಹನವನ್ನು ಸಹ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಂಸ್ಥೆಯು ಸಜ್ಜಾಗಿದೆ.
ದೇಶದ ವಿವಿಧ ರಾಜ್ಯಗಳಲ್ಲಿ ಸಂಸ್ಥೆಯು ನೆಟ್ ವರ್ಕ್ ಅನ್ನು ಈಗಾಗಲೇ ಹೊಂದಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಸ್ಥೆಯು ಈಗಾಗಲೇ ಕಿನ್ಯಾ, ಉಗಾಂಡ ಮತ್ತು ಕ್ವಾತರ್ ದೇಶಗಳ ಜೊತೆಗೆ ಎಂಒಯು (MOU) ಮಾಡಿಕೊಂಡಿದೆ. ಯೂರೋಪಿನ ಒಂದು ದೊಡ್ಡ ಸಂಸ್ಥೆಯ ಜತೆಗೆ ಜಾಯಿಂಟ್ ವೆಂಚರ್ ಮಾಡಲು ಮುಂದಾಗಿದ್ದು ಇದು ಯಶಸ್ವಿಯಾಗುವ ಕೊನೆಯ ಹಂತದಲ್ಲಿದೆ.
ಇತ್ತೀಚೆಗೆ ಕಂಪನಿಯು ತನ್ನ ಪ್ರಮುಖ ಮಾದರಿ ಜೆಎಂಟಿ 1000 ಎಚ್‌ಎಸ್‌ಗಾಗಿ ರೂ .5000 / - ಮೌಲ್ಯದ ಉಚಿತ ಇ-ಇಂಧನವನ್ನು ಘೋಷಿಸಿದೆ. ಇದು ಭಾರತೀಯ ಗ್ರಾಹಕರನ್ನು ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಯಿಸಲು ಪ್ರೇರೇಪಿಸುವ ಉದ್ಯಮದ ಮೊದಲ ಹೆಚ್ಚೆಯಾಗಿದೆ. ಈ ಕೊಡುಗೆ 2021 ಮಾರ್ಚ್ 31 ರವರೆಗೆ ಚಾಲ್ತಿಯಲ್ಲಿರುತ್ತದೆ.