ಮಹಿಳೆಯರ ಉಚಿತ ಪ್ರಯಾಣಕ್ಕೆ ಗುಡ್ ನ್ಯೂಸ್: ದಾಖಲೆಯ ಜೆರಾಕ್ಸ್ ಪ್ರತಿ, ಡಿಜಿಲಾಕರ್‌ನಲ್ಲಿರೋ ಸಾಫ್ಟ್‌ಕಾಪಿ ತೋರ್ಸಿದ್ರೂ ಸಾಕು
ರಾಜ್ಯದ ಸಾರಿಗೆ ಬಸ್‌ನಲ್ಲಿ ಪ್ರಯಾಣ ಮಾಡುವ ಮಹಿಳೆಯರು ಮೊಬೈಲ್‌ನ ಡಿಜಿಲಾಕರ್‌ನಲ್ಲಿರುವ ಭಾವಚಿತ್ರವಿರುವ ಯಾವುದೇ ಸರ್ಕಾರಿ ಗುರುತಿನ ಚೀಟಿಯನ್ನು ತೋರಿಸಿದರೂ ಬಸ್‌ನಲ್ಲಿ ಉಚಿತ ಪ್ರಯಾಣ ಮಾಡಬಹುದು.
ಬೆಂಗಳೂರು (ಜೂ.12): ರಾಜ್ಯದ ಸಾರಿಗೆ ಬಸ್‌ನಲ್ಲಿ ಪ್ರಯಾಣ ಮಾಡುವ ಮಹಿಳೆಯರು ಮೊಬೈಲ್‌ನ ಡಿಜಿಲಾಕರ್‌ನಲ್ಲಿರುವ ಭಾವಚಿತ್ರವಿರುವ ಯಾವುದೇ ಸರ್ಕಾರಿ ಗುರುತಿನ ಚೀಟಿಯನ್ನು ತೋರಿಸಿದರೂ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸರ್ಕಾರದಿಂದ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಭಾನುವಾರದಿಂದ ಕಾಂಗ್ರೆಸ್ ಸರ್ಕಾರವು ಮಹಿಳೆಯರ ಉಚಿತ ಪ್ರಯಾಣಕ್ಕೆ ಶಕ್ತಿ ಯೋಜನೆಯನ್ನು ಜಾರಿಗೊಳಿಸಿದೆ. ಆದರೆ, ಬಸ್ ನಿರ್ವಾಹಕರು ನೀವು ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿಯ ಒರಿಜಿನಲ್ (ಮೂಲ) ಪ್ರತಿಯನ್ನೇ ತೋರಿಸಬೇಕು ಎಂದು ಹೇಳಿದ್ದರು. ಇದಕ್ಕಾಗಿ ಕೆಲವು ಮಹಿಳೆಯರಿಂದ ಟಿಕೆಟ್‌ಗೆ ಹಣ ಪಡೆದರೆ, ಇನ್ನು ಕೆಲವಡೆ ಮಹಿಳೆಯರನ್ನು ಬಸ್‌ನಿಂದ ಕೆಳಗಿಳಿಸಲಾಗಿದೆ. ಆದರೆ, ಈ ಗೊಂದಲಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ಸರ್ಕಾರದಿಂದ ನೀಡಲಾದ ಮೊಬೈಲ್‌ನ ಡಿಜಿಲಾಕರ್‌ನಲ್ಲಿದ್ದ ಭಾವಚಿತ್ರವಿರುವ ಹಾಗೂ ಮೂಲ ದಾಖಲೆಯ ಜೆರಾಕ್ಸ್ ಪ್ರತಿಯನ್ನು ತೋರಿಸಿದರೂ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆದೇಶ ಹೊರಡಿಸಿದೆ.
'ಶಕ್ತಿ ಯೋಜನೆ ಸ್ಮಾರ್ಟ್ ಕಾರ್ಡ್' ಪಡೆದ ಮೊದಲ ಮಹಿಳೆ ಇವರೇ! ಉಚಿತ ಪ್ರಯಾಣವನ್ನೂ ಮಾಡಿದ್ರು
ಮೂಲ ದಾಖಲೆಯ ನಕಲು ಪ್ರತಿ ತೋರಿಸಿದ್ರೂ ಸಾಕು: ರಾಜ್ಯದ ಎಲ್ಲ ಮಹಿಳೆಯರಿಗೂ ಅನುಕೂಲ ಆಗಲಿದೆ. ಜೊತೆಗೆ, ರಾಜ್ಯ ಸರ್ಕಾರದಿಂದ ಮುಂದಿನ ಮೂರು ತಿಂಗಳಲ್ಲಿ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡುವ ಕಾರ್ಯವನ್ನು ಪೂರ್ಣಗೊಳಿಸಲಿದ್ದು, ನಂತರ ಮಹಿಳೆಯರು ಸರ್ಕಾರ ನೀಡಿದ ಕಾರ್ಡ್ ತೋರಿಸಿ ಪ್ರಯಾಣ ಮಾಡಬೇಕಾಗುತ್ತದೆ. ಅಲ್ಲಿಯವರೆಗೂ ರಾಜ್ಯದ ಎಲ್ಲ ಮಹಿಳೆಯರು ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ, ಕೆಕೆಆರ್‌ಟಿಸಿ ಹಾಗೂ ಬಿಎಂಟಿಸಿ ಸಾರಿಗೆ ಬಸ್‌ಗಳಲ್ಲಿ ಸರ್ಕಾರ ನೀಡಿರುವ ಯಾವುದೇ ಭಾವಚಿತ್ರವಿರುವ ಕಾರ್ಡ್ಗಳನ್ನು ತೋರಿಸಿ ಪ್ರಯಾಣ ಮಾಡಬಹುದು. ಕಾರ್ಡ್‌ಗಳ ಮೂಲ ಪ್ರತಿ, ನಕಲು ಪ್ರತಿ, ಡಿಜಿಲಾಕರ್ ಸಾಫ್ಟ್ ಕಾಪಿ ತೋರಿಸಿ ಉಚಿತವಾಗಿ ಪ್ರಯಾಣ ಮಾಡಬಹುದು ಎಂದು ಆದೇಶ ಹೊರಡಿಸಿದೆ. ಈ ಮೂಲಕ ಮಹಿಳೆಯರಿಗೆ ದಾಖಲೆಗಳನ್ನು ತೆಗೆದುಕೊಂಡು ಹೋಗುವ ಗೊಂದಲಕ್ಕೂ ತೆರೆ ಎಳೆದಿದೆ.
ಅರ್ಧ ದಿನದಲ್ಲಿ 5.71 ಲಕ್ಷ ಮಹಿಳೆಯರ ಪ್ರಯಾಣ: ಇನ್ನು ರಾಜ್ಯದಲ್ಲಿ ಭಾನುವಾರ ಮಧ್ಯಾಹ್ನ 1 ಗಂಟೆಯಿಂದ ಶಕ್ತಿ ಯೋಜನೆ ಅಧಿಕೃತವಾಗಿ ಚಾಲನೆಗೊಂಡ ನಂತರ ಮೊದಲ ಅರ್ಧ ದಿನದಲ್ಲಿ ಬರೋಬ್ಬರಿ 5,17,023 ಮಹಿಳೆಯರು ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ. ಈ ಮೂಲಕ ಮಹಿಳೆಯರ ಪ್ರಯಾಣದಿಂದ 1.40 ಕೋಟಿ ರೂ. ಆದಾಯ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಇನ್ನು ಸರ್ಕಾರದಿಂದ ಇದನ್ನು ಸಾರಿಗೆ ನಿಗಮಗಳಿಗೆ ಸರ್ಕಾರವೇ ಹಣ ಮರುಪಾವತಿ ಮಾಡಲಿದೆ.
ಶಕ್ತಿ ಯೋಜನೆ ಜಾರಿ ಬೆನ್ನಲ್ಲೇ ಬಸ್ ಫುಲ್ ರಶ್: ಬಾಗಿಲ ಬಳಿ ನಿಂತ ವಿದ್ಯಾರ್ಥಿನಿ ಆಯತಪ್ಪಿ ಬಿದ್ದು ಸಾವು
ನಿಗಮ - ಪ್ರಯಾಣಿಕರ ಸಂಖ್ಯೆ - ಪ್ರಯಾಣಿಸಿದ ಮೌಲ್ಯ (ರೂಪಾಯಿ ಗಳಲ್ಲಿ)
ಕೆಎಸ್‌ಆರ್‌ಟಿಸಿ (KSRTC) - 193831 - 5816178
ಬಿಎಂಟಿಸಿ (BMTC) - 201215 - 2619604
ಎನ್‌ಡಬ್ಲ್ಯೂಕೆಆರ್‌ಟಿಸಿ (NWKRTC) - 122354 - 3617096
ಕೆಕೆಆರ್‌ಟಿಸಿ (KKRTC) - 53623 - 1970000