ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂದು ಕೇಂದ್ರ ಸಚಿವೆ ಅನ್ನಪೂರ್ಣಾದೇವಿ ಆರೋಪಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಪದೇ ಪದೇ ದೌರ್ಜನ್ಯ  ಪ್ರಕರಣಗಳು ನಡೆಯುತ್ತಿವೆ ಮತ್ತು ಕರ್ನಾಟಕದಲ್ಲೂ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.

ಬೆಳಗಾವಿ (ಜೂ.29): ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳಲ್ಲಿ ಮಹಿಳೆಯರಿಗೆ ಸುರಕ್ಷಿತೆ ಇಲ್ಲ ಎಂದು ಕೇಂದ್ರ ಸಚಿವೆ ಅನ್ನಪೂರ್ಣಾದೇವಿ ಆರೋಪ ಮಾಡಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಇರುವ ರಾಜ್ಯಗಳಲ್ಲಿ ಹಣ ಕೊಡದ ಹೊರತು ಜನ ಸಾಮಾನ್ಯರ ಕೆಲಸಗಳು ಆಗುತ್ತಿಲ್ಲ. ಮೋದಿ ಆಡಳಿತವನ್ನ ಹಿಟ್ಲರ್ ಶಾಹಿ ಎನ್ನುವ ಕಾಂಗ್ರೆಸ್‌ ನಾಯಕರು ತುರ್ತು ಪರಿಸ್ಥಿತಿ ನೆನಪಿಸಿಕೊಳ್ಳಲಿ. ಮಹಿಳಾ ಸಿಎಂ ಇರುವ ಪಶ್ಚಿಮ ಬಂಗಾಳದಲ್ಲೂ ಪದೇ ಪದೇ ಲೈ*ಗಿತ ದೌರ್ಜನ್ಯ ಕೇಸ್‌ಗಳು ಆಗುತ್ತಿದ್ದು, ಮನಸ್ಸಿಗೆ ಘಾಸಿ ತರುತ್ತವೆ. ಅದೇ ರೀತಿ ಕರ್ನಾಟಕದಲ್ಲೂ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗಿದೆ ಎಂದು ಆಪಾದನೆ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರ 11 ವರ್ಷ ಸಾಮಾನ್ಯ ಜನರಿಗಾಗಿ ಆಡಳಿತ ನೀಡಿದೆ. ಯುವಕರು, ಮಹಿಳೆಯರು, ರೈತರು, ಬಡವರ ಪ್ರಗತಿಗೆ ಯೋಜನೆ ತಂದಿದೆ. ಆಪರೇಷನ್ ಸಿಂದೂರ ಸೇರಿದಂತೆ ಕಾಂತ್ರಿಕಾರಿ ತೀರ್ಮಾನಗಳು ಆಗಿವೆ ಎಂದರು.