Asianet Suvarna News Asianet Suvarna News

ಶಾಸಕರ ಭವನದ ಕೊಠಡಿಯಲ್ಲಿ ಮಹಿಳೆ ಹೈಡ್ರಾಮಾ..!

*  ಕನಕಗಿರಿ ಶಾಸಕರ ವಿರುದ್ಧದ ಅನ್ಯಾಯದ ಆರೋಪ

*  ಬಸವರಾಜ ದಡೇಸುಗೂರು ಅವರಿದ್ದ ಶಾಸಕರ ಭವನದ ಕೊಠಡಿಗೆ ದಿಢೀರ್‌ ಪ್ರವೇಶಿಸಿದ ಮಹಿಳೆ

*  ಶಾಸಕರ ಜತೆ ಜಗಳ ಮಾಡಿದ ಮಹಿಳೆ

Woman Created High Drama in Shasakara Bhavan in Bengaluru grg
Author
Bengaluru, First Published Jun 7, 2022, 10:21 AM IST

ಬೆಂಗಳೂರು(ಜೂ.07):  ಕನಕಗಿರಿ ಬಿಜೆಪಿ ಶಾಸಕ ಬಸವರಾಜ ದಡೇಸುಗೂರು ಅವರಿದ್ದ ಶಾಸಕರ ಭವನದ ಕೊಠಡಿಗೆ ದಿಢೀರ್‌ ಪ್ರವೇಶಿಸಿದ ಮಹಿಳೆಯೊಬ್ಬರು ಶಾಸಕರ ಜತೆ ವಾಗ್ವಾದ ನಡೆಸಿ ಕೆಲ ಕಾಲ ಹೈಡ್ರಾಮಾ ಸೃಷ್ಟಿಸಿರುವ ಘಟನೆ ಜರುಗಿದೆ.

ಶಾಸಕರ ಭವನದ 3ನೇ ಅಂತಸ್ತಿನ ಕೊಠಡಿಗೆ ಸಂಖ್ಯೆ 350ಕ್ಕೆ ಸೋಮವಾರ ಬೆಳಗ್ಗೆ ಬಂದಿದ್ದ ಮಹಿಳೆ, ಶಾಸಕರ ಜತೆ ಜಗಳ ಮಾಡಿದ್ದಾರೆ. ನಿಮ್ಮಿಂದ ನನಗೆ ಅನ್ಯಾಯವಾಗಿದೆ ಎಂದು ರಂಪಾಟ ಮಾಡಿದ್ದಾರೆ. ಈ ಮಹಿಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಎನ್ನಲಾಗಿದೆ. ಈಕೆಯ ವರ್ತನೆಯಿಂದ ಶಾಸಕರು ಮುಜುಗರ ಅನುಭವಿಸಿದರು. ಬಳಿಕ ಕೊಠಡಿಯಿಂದ ಹೊರ ನಡೆದರು ಎನ್ನಲಾಗಿದೆ.

ಕೊಪ್ಪಳ ಸಂಸದರ 10 ಲಕ್ಷ ಅನುದಾನ ವಾಪಸ್‌..!

ಇದಕ್ಕೂ ಮುನ್ನ ಶಾಸಕರ ಕೊಠಡಿಯಲ್ಲಿ ಮಹಿಳೆಯ ಕಿರುಚಾಟ ಜೋರಾದ್ದರಿಂದ ಶಾಸಕರ ಭವನ ಭದ್ರತೆಗೆ ನಿಯೋಜನೆಯಾಗಿದ್ದ ಪೊಲೀಸರು, ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಮಹಿಳೆಯನ್ನು ಸಮಾಧಾನಪಡಿಸಿ ಶಾಸಕರ ಭವನದಿಂದ ಹೊರಗೆ ಕಳುಹಿಸಿದರು. ಬಳಿಕ ಆ ಮಹಿಳೆ ನಾನು ಮುಖ್ಯಮಂತ್ರಿಗಳಿಗೆ ನನ್ನ ಅಳಲು ಹೇಳಿಕೊಳ್ಳುವುದಾಗಿ ನಡೆದುಕೊಂಡೇ ಶಾಸಕರ ಭವನದ ಆವರಣದಿಂದ ಹೊರ ಹೋದರು ಎನ್ನಲಾಗಿದೆ. ಇಂತಹ ಘಟನೆ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ವಿಧಾನಸೌಧ ಠಾಣೆ ಪೊಲೀಸರು ತಿಳಿಸಿದ್ದಾರೆ.

Follow Us:
Download App:
  • android
  • ios