ಬೆಂಗಳೂರು (ಫೆ.05):  ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಫೆ.8ರವರೆಗೂ ಒಣಹವೆ ವಾತಾವರಣ ಮುಂದುವರಿಯಲಿದ್ದು, ಬೀದರ್‌ನಲ್ಲಿ ರಾಜ್ಯದ ಕನಿಷ್ಠ ತಾಪಮಾನ ದಾಖಲಾಗಿದೆ

ಉತ್ತರ ಒಳನಾಡಿನ ಬೀದರ್‌ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ತಾಪಮಾನ ಇಳಿಕೆಯಾಗಿ ಚಳಿ ಹೆಚ್ಚಾಗಿದೆ. ಗುರುವಾರ ಬೀದರ್‌ನಲ್ಲಿ ರಾಜ್ಯದ ಕನಿಷ್ಠ 8 (ಗರಿಷ್ಠ 28.6) ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಫೆ.3ರಂದು 8.2 ಡಿ.ಸೆ. ತಾಪಮಾನ ದಾಖಲಾಗಿತ್ತು.

ಉಳಿದಂತೆ ಹಾಸನದಲ್ಲಿ 11.4, ವಿಜಯಪುರ 12, ಧಾರವಾಡ 13, ಬೆಳಗಾವಿ ವಿಮಾನ ನಿಲ್ದಾಣ 14, ದಾವಣಗೆರೆ 14.3 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ರಾಜ್ಯದ ಗರಿಷ್ಠ ತಾಪಮಾನ 36.1 ಡಿಗ್ರಿ ಸೆಲ್ಸಿಯಸ್‌ ಕಾರವಾರದಲ್ಲಿ ದಾಖಲಾಗಿದೆ.

ಮೆಂತ್ಯ, ಈರುಳ್ಳಿ ಬಳಸಿ ಈ ಚಳಿಗಾಲದಲ್ಲಿ ಕೂದಲಿನ ಅರೋಗ್ಯ ಹೆಚ್ಚಿಸಿ .

ರಾಜ್ಯದಲ್ಲಿ ಫೆ.8ರವರೆಗೂ ಬಹುತೇಕ ಪ್ರದೇಶಗಳಲ್ಲಿ ಈಗಿರುವ ಒಣಹವೆ ವಾತಾವರಣವೇ ಮುಂದುವರಿಯಲಿದೆ. ಕೆಲವು ಕಡೆಗಳಲ್ಲಿ ಬೆಳಗ್ಗೆ ಮಂಜು ಕವಿದ ವಾತಾ​ವ​ರಣ ಇರ​ಲಿದ್ದು, ಗರಿಷ್ಠ ತಾಪ​ಮಾನ 28ರಿಂದ 30 ಡಿಗ್ರಿ ಸೆಲ್ಸಿ​ಯಸ್‌ ಹಾಗೂ ಕನಿಷ್ಠ ತಾಪ​ಮಾನ 17ರಿಂದ 19 ಡಿಗ್ರಿ ಸೆಲ್ಸಿ​ಯಸ್‌ ಇರ​ಲಿದೆ ಎಂದು ಹವಾ​ಮಾನ ಇಲಾಖೆ ವರದಿ ತಿಳಿಸಿದೆ.