1996 ರಿಂದ ಸತತವಾಗಿ ಬೆಂಗಳೂರು ದಕ್ಷಿಣದಿಂದ ಗೆದ್ದಿದ್ದ ಅನಂತಕುಮಾರ್‌ ಸಾವಿನ ನಂತರ ಮುಂದಿನ ಚುನಾವಣೆಯಲ್ಲಿ ಅವರ ಪತ್ನಿ ತೇಜಸ್ವಿನಿ ನಿಲ್ಲುತ್ತಾರಾ ಎಂಬ ಚರ್ಚೆ ದಿಲ್ಲಿ ಬಿಜೆಪಿ ವಲಯದಲ್ಲೂ ನಡೆಯುತ್ತಿದೆ. 

6 ಬಾರಿ ಬೆಂಗಳೂರು ದಕ್ಷಿಣದಿಂದ ಗೆದ್ದಿದ್ದ ಅನಂತಕುಮಾರ್‌ ಮಣಿ​ಸಲು ಕಾಂಗ್ರೆಸ್‌ ಮಾಜಿ ಮುಖ್ಯ​ಮಂತ್ರಿ ಗುಂಡೂ​ರಾವ್‌ ಅವರ ಪತ್ನಿ ವರ​ಲಕ್ಷ್ಮೀ ಗುಂಡೂ​ರಾವ್‌ ಅವರಿಂದ ಮೊದಲುಗೊಂಡು ಐಟಿ ದಿಗ್ಗಜ ನಂದನ್‌ ನಿಲೇ​ಕಣಿವರೆಗೂ ಹಲ​ವು ದಿಗ್ಗ​ಜರನ್ನು ಕಣ​ಕ್ಕಿ​ಳಿಸಿತ್ತು. ಆದರೆ ಅನಂತ್ ಕುಮಾರ್ ನಾಯಕತ್ವದೆದುರು ಇವರೆಲ್ಲರೂ ಮಂಡಿಯೂರಿದ್ದರು. ಆದರೀಗ ಅನಂತ್ ಕು​ಮಾರ್‌ ಅಸ್ತಂಗ​ತ​ರಾ​ಗಿ​ದ್ದು, ಬೆಂಗ​ಳೂರು ದಕ್ಷಿಣ ಲೋಕ​ಸಭಾ ಕ್ಷೇತ್ರಕ್ಕೆ ಸೀಮಿ​ತ​ವಾ​ದಂತೆ ಅವರ ಸ್ಥಾನ​ವನ್ನು ಯಾರು ತುಂಬ ಬೇಕು ಎಂಬ ಗೊಂದಲ ಬಿಜೆ​ಪಿ​ಯ​ಲ್ಲಿದೆ. ಹೀಗಿರುವಾಗ ಸದ್ಯ ಎಲ್ಲರ ದೃಷ್ಟಿ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿಯವರ ಮೇಲಿದೆ. 

ಇದನ್ನೂ ಓದಿ: ಸಹಪಾಠಿಯನ್ನೇ ಬಾಳ ಸಂಗಾತಿ ಮಾಡಿಕೊಂಡ ಅನಂತ್

1996 ರಿಂದ ಸತತವಾಗಿ ಬೆಂಗಳೂರು ದಕ್ಷಿಣದಿಂದ ಗೆದ್ದಿದ್ದ ಅನಂತಕುಮಾರ್‌ ಸಾವಿನ ನಂತರ ಮುಂದಿನ ಚುನಾವಣೆಯಲ್ಲಿ ಅವರ ಪತ್ನಿ ತೇಜಸ್ವಿನಿ ನಿಲ್ಲುತ್ತಾರಾ ಎಂಬ ಚರ್ಚೆ ದಿಲ್ಲಿ ಬಿಜೆಪಿ ವಲಯದಲ್ಲೂ ನಡೆಯುತ್ತಿದೆ. ಗಂಡನಿಗೆ ಸದಾ ಬೆನ್ನೆಲುಬಾಗಿ ನಿಂತಿದ್ದ ತೇಜಸ್ವಿನಿ ಅನಂತ್ ಕುಮಾರ್‌ಗೆ ಟಿಕೆಟ್ ನೀಡುವುದೇ ಒಳ್ಳೆಯದು, ಈ ಮೂಲಕ ಸುಲಭವಾಗಿ ಗೆಲುವು ಸಾಧಿಸಬಹುದು ಎಂಬುವುದು ಆರ್‌ಎಸ್‌ಎಸ್‌ ಮತ್ತು ದಿಲ್ಲಿ ಬಿಜೆಪಿ ನಾಯಕರ ಅಭಿಪ್ರಾಯವಾಗಿದೆ.

ಇದನ್ನೂ ಓದಿ:ಮೂರು ತಿಂಗಳ ಕಾಯಕ ನಂತರ ಕೈಲಾಸ: ಅನಂತ್ ಮಾತು!

ಸಾಮಾ​ಜಿಕ ಕಾರ್ಯ​ಗ​ಳಲ್ಲಿ ಸಕ್ರಿ​ಯ​ರಾ​ಗಿರುವ ತೇಜ​ಸ್ವಿನಿ ತಮಗೆ ರಾಜಕೀಯ ಸೇರುವುದು ಇಷ್ಟವಿದೆಯೋ ಇಲ್ಲವೋ ಎಂದು ಯಾರಿಗೂ ಹೇಳಿಲ್ಲ. ಅದರೆ ಬಿಜೆಪಿ ಮಾತ್ರ ಬೆಂಗಳೂರು ದಕ್ಷಿಣದಲ್ಲಿ ಗೆಲ್ಲಲು ಅವರ ಮನವೊಲಿಸಲು ಯತ್ನಿಸುವುದರಲ್ಲಿ ಅನುಮಾನವಿಲ್ಲ. ಹೀಗಿದ್ದರೂ ತೇಜಸ್ವಿನಿ ಬರಲು ಇಚ್ಛಿ​ಸ​ದಿ​ದ್ದರೆ ಯಾರನ್ನು ಕಣಕ್ಕೆ ಇಳಿ​ಸ​ಬೇಕು ಎಂಬ ವಿಚಾರ ಬಿಜೆಪಿಗೆ ಮತ್ತೆ ತಲೆನೋವಾಗಲಿದೆ.

[ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ]