ಬೆಳಗಾವಿ ಘಟನೆ ಸಂಬಂಧ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ನೀಡುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ ತಿಳಿಸಿದ್ದಾರೆ.
ಬೆಂಗಳೂರು (ಮಾ.02): ಬೆಳಗಾವಿ ಘಟನೆ ಸಂಬಂಧ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ನೀಡುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ ತಿಳಿಸಿದ್ದಾರೆ. ವಾಟಾಳ್ ಅವರ ಮೇಲೆ ತುಂಬಾ ಗೌರವವಿದೆ. ಆದರೆ ಈ ಹಿಂದೆ ಹಲವು ಬಂದ್ ಮಾಡಿದ್ದರೂ ಯಾವುದೂ ಯಶಸ್ವಿಯಾಗಿಲ್ಲ. ಬಂದ್‌ನಿಂದ ಸರ್ಕಾರ ಹಾಗೂ ಜನರಿಗೆ ನಷ್ಟವಾಗುತ್ತದೆ. ಪ್ರತಿ ಪೈಯ ಬಂದ್‌ಗೆ ನನ್ನ ಬೆಂಬಲ ಇಲ್ಲ. ಎಲ್ಲದಕ್ಕೂ ಬಂದ್ ಎಂದರೆ ಹೇಗೆ ಎಂದು ಪ್ರಶ್ನಿಸಿದರು. ಶನಿವಾರ ಸುದ್ದಿಗಾರರ ಜೊತೆ ಮಾತ ನಾಡಿ, ಮಹಾರಾಷ್ಟ್ರಗಡಿಗೆ ಹೋಗೋಣ ಅಲ್ಲಿಗೆ ಬನ್ನಿ ಎಂದು ಹೋರಾಟಗಾರರಿಗೆ ಮನವಿ ಮಾಡಿದ ಅವರು, ಬೆಳಗಾವಿ ಬಸ್ ನಿರ್ವಾಹಕನ ಮೇಲೆ ನಡೆದ ಹಲ್ಲೆ ಸಂಬಂಧ ಮಂಗಳವಾರ ಬೆಳಗಾವಿಯಲ್ಲಿ ದೊಡ್ಡ ಸ್ವರೂಪದ ಚಳವಳಿ ನಡೆಸಿದ್ದೇವೆ.
ನಿರ್ವಾಹಕನ ಮೇಲೆ ಹೂಡಲಾಗಿದ್ದ ಸುಳ್ಳು ಪೋಕೋ ದೂರನ್ನು ಹಿ೦ಪಡೆಯಲಾಗಿದೆ. ಮೊಕದ್ದಮೆ ಇನ್ಸ್‌ಪೆಕ್ಟರ್ ವರ್ಗಾವಣೆ ಮಾಡಲಾಗಿದೆ. ಬೆಳಗಾವಿ ಪೊಲೀಸ್ ಕಮಿಷನರ್ ಎಡಾ ಮಾರ್ಟಿನ್ ಕನ್ನಡಿಗರ ಮೇಲೆ ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ದೌರ್ಜನ್ಯ ನಡೆಯದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಮೊದಲಿನಿಂದ ಕರವೇ ತೀರಾ ಅನಿವಾರ್ಯ ಸಂದರ್ಭ ಹೊರತುಪಡಿಸಿ 'ಕರ್ನಾಟಕ ಬಂದ್' ಕರೆಗಳಿಗೆ ಕೈಜೋಡಿಸಿಲ್ಲ. ಬಂದ್‌ನಿಂದ ಜನಸಾಮಾನ್ಯರಿಗೆ, ದಿನಗೂಲಿಗಳಿಗೆ, ಬಡವರಿಗೆ ತೊಂದರೆಯಾಗುತ್ತದೆ. ಹೀಗಾಗಿ ಬಂದ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ಕರವೇ ಆಕ್ರೋಶ: ಬೆಳಗಾವಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿರುವ ಎಂಇಎಸ್ ಶಿವಸೇನೆ ಪುಂಡರ ದೌರ್ಜನ್ಯ ಖಂಡಿಸಿ, ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಪಟ್ಟಣದ ವಿವಿಧೆಡೆ ಮೆರವಣಿಗೆಯಲ್ಲಿ ಸಾಗಿಬಂದ ಕರವೇ ಕಾರ್ಯಕರ್ತರು, ರೈತ ಸಂಘದ ಮುಖಂಡರು ಎಂಇಎಸ್ ಮತ್ತು ಶಿವಸೇನೆಯ ಪುಂಡರ ಹಾವಳಿ ಹೆಚ್ಚಾಗುತ್ತಿದ್ದು ಕನ್ನಡಿಗರ ಮೇಲೆ ಹಲ್ಲೆ ನಡೆಸುತ್ತಲೇ ಬಂದಿದ್ದಾರೆ, ಕಂಡಕ್ಟರ್ ಮೇಲೂ ದೌರ್ಜನ್ಯ ಎಸಗಿರುವುದು ಖಂಡನೀಯ. ಕೂಡಲೆ ಸರ್ಕಾರ ಇಂತಹ ಪುಂಡರ ಹೆಡೆಮುರಿ ಕಟ್ಟಬೇಕು, ಹಲ್ಲೆಗೈದವರ ಮೇಲೆ ಶಿಸ್ತು ಕ್ರಮ ಆಗಬೇಕು ಎಂದರು.
ಕಲ್ಲಂಗಡಿ ತಿನ್ನೋ ಮುನ್ನ ಹುಷಾರ್.. ಹಣ್ಣಿನಲ್ಲಿ ಕೃತಕ ಕೆಂಪು ಬಣ್ಣ ಪತ್ತೆ: ಕುಣಿಗಲ್‌ನಲ್ಲಿ ಘಟನೆ!
ಈ ವೇಳೆ ರೈತ ಸಂಘದ ಅಧ್ಯಕ್ಷ ನಾಗರಾಜು, ಲಕ್ಷ್ಮಣಮೂರ್ತಿ, ರಾಮಕೃಷ್ಣ, ದಶರಥ್, ಚಿನ್ನಸ್ವಾಮಿ ಮಾಳಿಗೆ, ವೀರಭದ್ರಸ್ವಾಮಿ, ಮೊಳೆ ರಾಜಣ್ಣ, ಸೋಮಣ್ಣ, ಕರವೇ (ನಾರಾಯಣ ಗೌಡ ಬಣದ) ತಾಲೂಕು ಅಧ್ಯಕ್ಷ ಅಯಾಜ್ , ಜೆ.ನಿಂಗರಾಜು, ಇದ್ರೀಸ್ ಪಾಷ, ಇರ್ಪಾನ್, ನವೀನ್, ಮದು, ಕುಮಾರ, ಸುರೇಶ್, ಮಹಮ್ಮದ್ ಸಮೀರ್, ಮೂರ್ತಿ ಶಾಸ್ತ್ರೀ, ಬಿ.ಬಸವರಾಜು, ಸಬೀರ್, ಮಹೇಂದ್ರ, ಸತ್ಯರಾಜ್, ತೊಸೀಫ್, ರಾಜಪ್ಪ, ಮಹಿಳಾ ಘಟಕ ಜಿಲ್ಲಾಧ್ಯಕ್ಷರು ಭಾಗ್ಯಲಕ್ಷ್ಮೀ, ಮಹಿಳಾ ಘಟಕ ತಾಲ್ಲೂಕು ಅಧ್ಯಕ್ಷರು ವಿಜಯರಾಣಿ, ಕಾರ್ಯದರ್ಶಿ ಸುಮಾ, ನಿಶಾರ್ ಅಹಮದ್, ಇಸ್ಮಾಯಿಲ್, ನವಾಜ್ ಇನ್ನಿತರರಿದ್ದರು.
