ಬೆಂಗಳೂರು(ಜು.04): ಈ ಹಿಂದೆ ಲಾಕ್‌ಡೌನ್‌ ಸಂದರ್ಭದಲ್ಲಿ ಆಗಿದ್ದ ಕ್ರಮಗಳು ಯಥಾ ಪ್ರಕಾರ ಜಾರಿಯಾಗಲಿವೆ ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌ ಹೇಳಿದ್ದಾರೆ.

ಇತ್ತೀಚೆಗೆ ಕೊರೋನಾ ಸೋಂಕಿನಿಂದ ಹುತಾತ್ಮರಾದ ಐವರು ಅಧಿಕಾರಿ-ಸಿಬ್ಬಂದಿಗೆ ಇನ್ಫೆಂಟ್ರಿ ರಸ್ತೆಯಲ್ಲಿರುವ ಆಯುಕ್ತರ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ಬಳಿಕ ಅವರು ಮಾತನಾಡಿದರು.

ಸೋಂಕಿತ ಕಡೂರು ಶಿಕ್ಷಕ ಶವಕ್ಕೆ ಬೀರೂರಲ್ಲಿ ಅಂತ್ಯಸಂಸ್ಕಾರ: ಆಕ್ರೋಶ

ಸಾರ್ವಜನಿಕರು ಅನಗತ್ಯವಾಗಿ ಯಾರು ಹೊರಗೆ ಬರಬೇಡಿ. ಅಗತ್ಯ ತುರ್ತು ಸೇವೆಗಳಿಗೆ ಮಾತ್ರ ಅವಕಾಶ ಇರಲಿದೆ. ಲಾಕ್‌ಡೌನ್‌ನನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು. ಇನ್ನು ಕೊರೋನಾದಿಂದಾಗಿ ನಗರದಲ್ಲಿ ಐವರು ಅಧಿಕಾರಿ-ಸಿಬ್ಬಂದಿಯನ್ನು ಕಳೆದುಕೊಂಡಿರುವುದು ಬಹಳ ದುಃಖದ ವಿಚಾರ ಎಂದರು.

5 ಕೊರೋನಾ ಕೇಸ್‌ ಬಂದಾಗ್ಲೇ ಎಚ್ಚೆತ್ತ ಜನ: ಗ್ರಾಮ ಸಂಪೂರ್ಣ ಲಾಕ್‌ಡೌನ್ ಮಾಡಿದ ಗ್ರಾಮಸ್ಥರು

ಹೆಚ್ಚುವರಿ ಪೊಲೀಸ್‌ ಆಯುಕ್ತರಾದ ಹೇಮಂತ್‌ ನಿಂಬಾಳ್ಕರ್‌, ಸೌಮೇಂದು ಮುಖರ್ಜಿ, ಎಸ್‌.ಮುರುಗನ್‌, ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ಹಾಗೂ ಇತರೆ ಅಧಿಕಾರಿ-ಸಿಬ್ಬಂದಿ ಐದು ನಿಮಿಷ ಮೌನಾಚರಣೆ ಮೂಲಕ ಅಗಲಿದವರಿಗೆ ಗೌರವ ಸಲ್ಲಿಸಿದರು.