Asianet Suvarna News Asianet Suvarna News

ವಾಟ್ಸಪ್‌ನಿಂದಾಗಿ ಮದುವೆಯೇ ನಿಂತೋಯ್ತು!

ಪ್ರಿಯತಮನೊಬ್ಬ ವಧು ಜತೆಗಿರುವ ಫೋಟೋ ವರನಿಗೆ ಕಳುಹಿಸಿದ್ದು, ಅದನ್ನು ನೋಡಿದ ವರ ತಾನು ತಾಳಿ ಕಟ್ಟಲ್ಲ ಎಂದು ಹೊರನಡೆದಿದ್ದನೆ. ಹೀಗಗಿ ಪ್ರಿಯತಮನ ಜತೆಗೇ ವಧುವಿನ ಮದುವೆಯಗಿದೆ.

whatsapp photos broke the marriage
Author
Hassan, First Published Nov 30, 2018, 10:04 AM IST
  • Facebook
  • Twitter
  • Whatsapp

ಹಾಸನ[ನ.30]: ಇನ್ನೇನು ತಾಳಿ ಕಟ್ಟಲು ಕೆಲವೇ ನಿಮಿಷಗಳು ಬಾಕಿ ಇದ್ದಾಗ ಬಂದ ವಾಟ್ಸಾಪ್‌ ಸಂದೇಶದಿಂದ ಹಿರಿಯರು ನಿಶ್ಚಯಿಸಿದ್ದ ಮದುವೆಯೊಂದು ಮುರಿದು ಬಿದ್ದರೆ, ವಧು ತನ್ನ ಪ್ರಿಯಕರನ ಕೈಹಿಡಿದ ಘಟನೆ ಗುರುವಾರ ನಡೆದಿದೆ.

ಪಟ್ಟಣದ ಶೀನಪ್ಪಶೆಟ್ಟಿಕಲ್ಯಾಣ ಮಂಟಪದಲ್ಲಿ ತಾಲೂಕಿನ ಬೈಕೆರೆ ಗ್ರಾಮದ ಯೋಧ ತಾರೇಶ್‌ ಜತೆ ಬೇಲೂರು ತಾಲೂಕಿನ ಕುಪ್ಪಗೋಡು ಗ್ರಾಮದ ಶ್ರುತಿ ಎಂಬುವರ ವಿವಾಹ ಗುರುವಾರ ನಿಶ್ಚಯವಾಗಿತ್ತು. ಎಲ್ಲಾ ಶಾಸ್ತ್ರಗಳು ಸಾಂಗವಾಗಿ ನೆರವೇರುತ್ತಿದ್ದವು. ಆದರೆ, ತಾಳಿ ಕಟ್ಟಲು ಕೆಲ ನಿಮಿಷಗಳು ಬಾಕಿ ಇದ್ದಾಗ ವರನ ಮೊಬೈಲ್‌ ಫೋನ್‌ಗೆ ವಧುವಿನ ಪ್ರಿಯತಮ ಆಕೆಯ ಜತೆಗಿರುವ ಫೋಟೋಗಳನ್ನು ಕಳುಹಿಸಿದ್ದಾನೆ. ಕೂಡಲೇ ವರ ಈ ಹುಡುಗಿಯನ್ನು ನಮ್ಮಪ್ಪರಾಣೆ ಮದುವೆ ಆಗಲ್ಲ ಎನ್ನುತ್ತಾ ಕಲ್ಯಾಣ ಮಂಟಪದಿಂದ ಹೊರ ನಡೆದಿದ್ದಾನೆ. ನಂತರ ವಧುವಿನ ಕಡೆಯವರ ವಿರುದ್ಧ ವರ ಕಡೆಯವರು ದೂರು ನೀಡಲು ಪೊಲೀಸ್‌ ಠಾಣೆಗೆ ತೆರಳಿದ್ದಾರೆ.

ಈ ವೇಳೆ ಪೊಲೀಸರು ವಧುವಿನ ಪ್ರಿಯಕರನಾದ ಅಭಿಲಾಶ್‌ನನ್ನು ಠಾಣೆಗೆ ಕರೆಸಿದ್ದಾರೆ. ವಧು ಸಹ ಪ್ರಿಯಕರನನ್ನೇ ಮದುವೆ ಆಗುವುದಾಗಿ ತಿಳಿಸಿದ್ದಾಳೆ. ಕೊನೆಗೆ ಅದೇ ಕಲ್ಯಾಣ ಮಂಟಪದಲ್ಲಿ ಪೊಲೀಸರ ಭದ್ರತೆಯಲ್ಲಿ ಪ್ರೇಮಿಗಳ ಮದುವೆ ನೆರವೇರಿದೆ.

Follow Us:
Download App:
  • android
  • ios