Asianet Suvarna News Asianet Suvarna News

Suspected terrorists bengaluru: ಶಂಕಿತರಿಂದ ಸಿಕ್ಕಿದ್ದು ವಾಕಿಟಾಕಿ ಅಲ್ಲ, ‘ಬಾಂಬ್‌ ರಿಮೋಟ್‌’?

ಬೆಂಗಳೂರಿನಲ್ಲಿ ಬಂಧಿತರಾದ ಐವರು ಶಂಕಿತ ಲಷ್ಕರ್‌-ಎ-ತೊಯ್ಬಾ ಉಗ್ರರ ಬಳಿ ಸಿಕ್ಕಿರುವುದು ವಾಕಿಟಾಕಿಗಳಲ್ಲ, ಬದಲಿಗೆ ಅವು ಸುಧಾರಿತ ಸ್ಫೋಟಕಗಳನ್ನು (ಐಇಡಿ) ಸ್ಫೋಟಿಸಲು ಅನುಕೂಲವಾಗುವಂತೆ ಮಾರ್ಪಾಡುಗೊಳಿಸಿದ ಡಿವೈಸ್‌ಗಳು ಎಂಬ ಅನುಮಾನ ಪೊಲೀಸರಿಗೆ ಬಂದಿದೆ.

What was seized from the terrorists was not a walkie-talkie its remote bomb at bengauluru rav
Author
First Published Jul 22, 2023, 4:08 AM IST

ಬೆಂಗಳೂರು (ಜು.22) :  ಬೆಂಗಳೂರಿನಲ್ಲಿ ಬಂಧಿತರಾದ ಐವರು ಶಂಕಿತ ಲಷ್ಕರ್‌-ಎ-ತೊಯ್ಬಾ ಉಗ್ರರ ಬಳಿ ಸಿಕ್ಕಿರುವುದು ವಾಕಿಟಾಕಿಗಳಲ್ಲ, ಬದಲಿಗೆ ಅವು ಸುಧಾರಿತ ಸ್ಫೋಟಕಗಳನ್ನು (ಐಇಡಿ) ಸ್ಫೋಟಿಸಲು ಅನುಕೂಲವಾಗುವಂತೆ ಮಾರ್ಪಾಡುಗೊಳಿಸಿದ ಡಿವೈಸ್‌ಗಳು ಎಂಬ ಅನುಮಾನ ಪೊಲೀಸರಿಗೆ ಬಂದಿದೆ.

ಸಾಮಾನ್ಯವಾಗಿ ವಾಕಿಟಾಕಿಗಳನ್ನು ಸಂವಹನಕ್ಕೆ ಮಾತ್ರ ಬಳಸಲಾಗುತ್ತದೆ. ಆದರೆ ಆನ್‌ಲೈನ್‌ ಮೂಲಕ ವಾಕಿಟಾಕಿಗಳನ್ನು ಖರೀದಿಸಿ ಅವುಗಳನ್ನು ಬಾಂಬ್‌ ಸ್ಫೋಟಿಸಲು ಅನುಕೂಲವಾಗುವಂತೆ ಶಂಕಿತ ಉಗ್ರರು ಮಾರ್ಪಾಡುಗೊಳಿಸಿದ್ದಾರೆ. ಇದುವರೆಗೆ ಬಾಂಬ್‌ ಸ್ಫೋಟಕ್ಕೆ ಮೊಬೈಲ್‌ಗಳನ್ನು ಬಳಸುತ್ತಿದ್ದ ಭಯೋತ್ಪಾದಕರು, ಈಗ ವಾಕಿಟಾಕಿ ಬಳಸಲು ಮುಂದಾಗಿರುವ ಬಗ್ಗೆ ಅನುಮಾನವಿದೆ. ಈ ಬಗ್ಗೆ ವೈರ್‌ಲೆಸ್‌ ಅಧಿಕಾರಿಗಳಿಂದಲೂ ವರದಿ ಪಡೆಯಲಾಗುತ್ತದೆ ಎಂದು ಸಿಸಿಬಿ ಮೂಲಗಳು ಹೇಳಿವೆ.

News Hour: ಬಗೆದಷ್ಟು ಬಯಲಾಗುತ್ತಿದೆ ಬೆಂಗಳೂರು ಉಗ್ರಜಾಲ

ಪೂರ್ವಯೋಜಿತ ಸಂಚಿನಂತೆ ನಗರದ ಜನಸಂದಣಿ ಪ್ರದೇಶಗಳಲ್ಲಿ ಬಾಂಬ್‌ಗಳನ್ನು ಅಡಗಿಸಿಟ್ಟು ಆ ಸ್ಥಳದ ಸಮೀಪದಲ್ಲೇ ವಾಕಿಟಾಕಿ ಇಟ್ಟು, ಮತ್ತೊಂದು ವಾಕಿಟಾಕಿಯಿಂದ ಸಂಪರ್ಕಿಸಿದಾಗ ಬಾಂಬ್‌ ಸಿಡಿಸುವ ಹೊಸ ತಂತ್ರ ರೂಪಿಸಿದ್ದರು ಎನ್ನಲಾಗುತ್ತಿದೆ. ಆದರೆ ಇದು ವೈಜ್ಞಾನಿಕ ವರದಿ ಬಂದ ಬಳಿಕವಷ್ಟೇ ಖಚಿತವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಹೆಬ್ಬಾಳ ಸಮೀಪದ ಭದ್ರಪ್ಪ ಲೇಔಟ್‌ನಲ್ಲಿರುವ ಶಂಕಿತ ಉಗ್ರ ಸುಹೇಲ್‌ ಮನೆಯಲ್ಲಿ ನಾಲ್ಕು ವಾಕಿಟಾಟಿ ಸೆಟ್‌ಗಳನ್ನು ಜಪ್ತಿ ಮಾಡಲಾಗಿದೆ. ಅವುಗಳನ್ನು ಪರಿಶೀಲಿಸಿದಾಗ ಸಂವಹನಕ್ಕೆ ಹೊರತಾದ ಬಳಕೆಗೆ ಮಾರ್ಪಾಡುಗೊಳಿಸಿರುವ ಅನುಮಾನ ಬಂದಿದೆ. ಹೀಗಾಗಿ ವೈರ್‌ಲೆಸ್‌ ವಿಭಾಗದ ಅಧಿಕಾರಿಗಳಿಂದ ಸಹ ಅವುಗಳನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೆಂಟ್ರಲ್ ಜೈಲ್ ಈಗ ಟೆರರಿಸ್ಟ್ ಯುನಿವರ್ಸಿಟಿ: ಪರಪ್ಪನ ಅಗ್ರಹಾರದಲ್ಲಿ ಟೆರರ್ ಉಪನ್ಯಾಸಕರು ..!

Follow Us:
Download App:
  • android
  • ios