2022: ಈ ಇಸ್ವಿಯಲ್ಲಿರುವ  ಸಂಖ್ಯೆಗಳ ವಿಶೇಷವೇನು?  ಬೆಂಗಳೂರಿನ ಗಣಿತಜ್ಞ ಕೆ.ವಿ.ನಾರಾಯಣರಿಂದ ಹೊಸ ವರ್ಷದ ‘ವಿಶೇಷ’ ಪಟ್ಟಿ  2011, 2033ರ ಕ್ಯಾಲೆಂಡರ್‌ಗೂ 2022ರ ಕ್ಯಾಲೆಂಡರ್‌ಗೂ ಯಾವ ವ್ಯತ್ಯಾಸ ಇಲ್ಲ  ಶನಿವಾರದಿಂದ ಆರಂಭವಾಗಿ ಶನಿವಾರವೇ ಅಂತ್ಯವಾಗುವ ವರ್ಷ  2022 ಅಂದರೆ 6: ಇದು ಪರಿಪೂರ್ಣ ಸಂಖ್ಯೆ  ಇಂಥ ವರ್ಷ ಬರುವುದು ಇನ್ನು 1000 ವರ್ಷಗಳ ನಂತರ!

ಬೆಂಗಳೂರು (ಜ.02) : ಹೊಸ ವರ್ಷ 2022ನೇ ಇಸವಿ (New Year) ಬಂದಿದೆ. ಈ ಸಂದರ್ಭದಲ್ಲಿ ‘2022’ ಸಂಖ್ಯೆಯ ವಿಶಿಷ್ಟ ಗುಣ ಲಕ್ಷಣಗಳನ್ನು ಬೆಂಗಳೂರು (Bengaluru ) ಮೂಲದ ಗಣಿತ ಶಾಸ್ತ್ರಜ್ಞ ಮತ್ತು ಗಣಿತ ಪಠ್ಯಪುಸ್ತಕಗಳ ಲೇಖಕ ಕೆ.ವಿ.ನಾರಾಯಣ ಅವರು ಪಟ್ಟಿ ಮಾಡಿದ್ದಾರೆ. 69 ವರ್ಷದ ನಿವೃತ್ತ ಶಿಕ್ಷಕ ನಾರಾಯಣ ಅವರು ಸಂಖ್ಯಾ ಸಿದ್ಧಾಂತದಲ್ಲಿ ಪಿ.ಎಚ್‌ಡಿ (PHD) ಪಡೆದಿದ್ದಾರೆ. 2022ರ ವರ್ಷದ ಸಂಖ್ಯೆ ಅಥವಾ ಮೂಲ ಸಂಖ್ಯೆ 6 (2+0+2+2) ಒಂದು ಪರಿಪೂರ್ಣ ಸಂಖ್ಯೆ. ಪರಿಪೂರ್ಣ ಸಂಖ್ಯೆಯು ಅದರ ಭಾಜಕ (1+2+3)ಗಳ ಮೊತ್ತಕ್ಕೆ ಸಮನಾಗಿರುತ್ತದೆ. ಜೊತೆಗೆ ತತ್ವಶಾಸ್ತ್ರದ ಪ್ರಕಾರ ದೇವರು (God) ಈ ಜಗತ್ತನ್ನು 6 ದಿನದಲ್ಲಿ ಸೃಷ್ಟಿಮಾಡಿದ್ದಾನೆ. ಅದೇ ರೀತಿ ಮಾನವರನ್ನು 6ನೇ ದಿನ ಸೃಷ್ಟಿಸಿದ್ದಾನೆ. ಹಾಗಾಗಿ ಈ ವರ್ಷ ವಿಭಿನ್ನ. ಅಲ್ಲದೆ, 2022ರ ಪ್ರತಿ ಸಂಖ್ಯೆಯೂ ಸಮ ಸಂಖ್ಯೆಯಾಗಿದೆ. ಸೊನ್ನೆ ಮತ್ತು 2 ಎರಡೂ ಸಹ ಸಮಸಂಖ್ಯೆಗಳು.

ಜೊತೆಗೆ ಈ ವರ್ಷ ಸಂಖ್ಯೆ ‘2’ ಮೂರು ಬಾರಿ ಪುನರಾವರ್ತಿತವಾಗಿದೆ. ಇದೇ ಮಾದರಿ 1011ರಲ್ಲೂ ಘಟಿಸಿತ್ತು. ಮತ್ತೊಮ್ಮೆ ಇದೇ ರೀತಿಯ ವರ್ಷ ಘಟಿಸುವುದು 1000 ವರ್ಷಗಳ ನಂತರ ಅಂದರೆ 3033ರಲ್ಲಿ ಎಂದು ನಾರಾಯಣ ಹೇಳಿದ್ದಾರೆ.

ಇದೇ ವೇಳೆ 2011, 2033ನೇ ವರ್ಷದ ಕ್ಯಾಲೆಂಡರ್‌ ಮತ್ತು 2022ನೇ ಸಾಲಿನ ಕ್ಯಾಲೆಂಡರ್‌ನಲ್ಲಿ (Calendar) ಯಾವುದೇ ವ್ಯತ್ಯಾಸ ಇರುವುದಿಲ್ಲ. 2022ರಲ್ಲಿ ಅಧಿಕ ದಿನವೂ ಇರುವುದಿಲ್ಲ. ಶನಿವಾರದಂದು ಆರಂಭವಾಗಿ ಶನಿವಾರದಂದೇ ಅಂತ್ಯವಾಗುವುದು ಈ ವರ್ಷದ ಇನ್ನೊಂದು ವಿಶೇಷತೆ. ಅಲ್ಲದೆ, ಹೊಸ ವರ್ಷವು 2 ಸಹಸ್ರಮಾನಗಳು, ಎರಡು ದಶಕಗಳು ಮತ್ತು ಎರಡು ವರ್ಷಗಳ ಮೊತ್ತವಾಗಿರುತ್ತದೆ. ಅಂದರೆ 2022=1000+1000+10+10+2 ಎಂದು ಅವರು ವಿವರಣೆ ನೀಡಿದ್ದಾರೆ.

 ಸಂಖ್ಯೆ ಪ್ರಕಾರ ನಿಮ್ಮ ಭವಿಷ್ಯ ಹೇಗಿರಲಿದೆ : ನಿಮ್ಮ ಸಂಖ್ಯೆ(number) ಯಾವುದು? 

ಭವಿಷ್ಯದಲ್ಲಿ ಆಗುವುದನ್ನು ನಿಮ್ಮ ಸಂಖ್ಯೆಯ ಆಧಾರದ ಮೇಲೆ ಹೇಳುವುದೇ ಸಂಖ್ಯಾಶಾಸ್ತ್ರ (Numerology). ನಿಮ್ಮ ಜನ್ಮದಿನಾಂಕದ ಆಧಾರದ ಮೇಲೆ ಆ ಸಂಖ್ಯೆಯನ್ನು ತಿಳಿದುಕೊಳ್ಳಬಹುದು. ಅದಕ್ಕೂ ಮುನ್ನ 2022ರ ಮೂಲ ಸಂಖ್ಯೆಯನ್ನು ನೀವು ತಿಳಿದುಕೊಳ್ಳಬೇಕು. 2022= 2+0+2+2=6 ಅಂದರೆ ಈ ವರ್ಷದ ಸಂಖ್ಯೆ 6. ಈಗ ನಿಮ್ಮ ಸಂಖ್ಯೆಯನ್ನು ತಿಳಿದುಕೊಳ್ಳಲು ನಿಮ್ಮ ಜನ್ಮ ದಿನಾಂಕ+ಜನನದ ತಿಂಗಳು+6 ಸೇರಿಸಿ. ಈಗ ಬರುವ ಫಲಿತಾಂಶವನ್ನು ಒಂದಂಕಿಗಿಳಿಸಿ (ಉತ್ತರ ಬಂದ ಎರಡು ಸಂಖ್ಯೆಯನ್ನು ಸೇರಿಸಿ) ಉದಾ: ನೀವು ಅಕ್ಟೋಬರ್ 28ರಂದು ಜನಿಸಿದ್ದರೆ, 28+10+6=44 (4+4)=8. ಅಂದರೆ ನಿಮ್ಮ ಸಂಖ್ಯೆ 8. ಒಂದು ವೇಳೆ ಕೊನೆಯ ಸಂಖ್ಯೆಯೂ ಎರಡಂಕಿ (ಉದಾ: 11, 12 ಇತ್ಯಾದಿ) ಬಂದರೆ ಆಗ 1+1=2 ಅಥವಾ 1+2=3 ನಿಮ್ಮ ಸಂಖ್ಯೆ ಆಗುತ್ತದೆ.

ಸಂಖ್ಯೆ 1 - ಪ್ರೇಮಿಗಳಿಗೆ ಅತ್ಯುತ್ತಮ ವರ್ಷ (Good year for lovers)

ಸಂಖ್ಯೆ 2 - ಕಠಿಣ ಪರಿಶ್ರಮ(hard work)ಕ್ಕೆ ಫಲ 

ಸಂಖ್ಯೆ 3 - ವಿದ್ಯಾರ್ಥಿಗಳಿಗೆ ಯಶಸ್ಸು 
ಸಂಖ್ಯೆ 4 - ಉದ್ಯೋಗಿಗಳಿಗೆ ಬಡ್ತಿ(promotion) ಸಾಧ್ಯತೆ

ಸಂಖ್ಯೆ 5 - ವ್ಯಾಪಾರ ಹೊಸ ಉತ್ತುಂಗಕ್ಕೆ 
ಸಂಖ್ಯೆ 6 - ಹೂಡಿಕೆ ಮಾಡುವಾಗ ಎಚ್ಚರ 

ಸಂಖ್ಯೆ 7 - ಉದ್ಯೋಗಾಕಾಂಕ್ಷಿಗಳಿಗೆ ಹುದ್ದೆ 

ಸಂಖ್ಯೆ 8 - ಜೀವನದಲ್ಲಿ ಉನ್ನತಿಯ ಕಾಲ
ಸಂಖ್ಯೆ 9
ಉದ್ಯೋಗದಲ್ಲಿ ತಾಳ್ಮೆಯಿರಲಿ