ಆ್ಯಂಬಿಡೆಂಟ್ ಕಂಪನಿ ಅವ್ಯವಹಾರದ ಕುರಿತು ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಪ್ರಕರಣದ ರದ್ದತಿಗಾಗಿ ನಡೆದ ಡೀಲ್‌ನಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಆರೋಪದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಪರಪ್ಪನ ಅಗ್ರಹಾರ ಸೇರಿದ್ದಾರೆ.
ಬೆಂಗಳೂರು : ಪರಪ್ಪನ ಅಗ್ರಹಾರ ಜೈಲು ಸೇರಿದ ಜನಾರ್ದನ ರೆಡ್ಡಿ ಅವರಿಗೆ 10902 ವಿಚಾರಣಾಧೀನ ಕೈದಿ ಸಂಖ್ಯೆ ನೀಡಲಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮೊದಲಿಗೆ ಜನಾರ್ದನರೆಡ್ಡಿ ಅವರನ್ನು ಮಂಗಳೂರು ಮೂಲದ ಪೂಜಾರಿ ಎಂಬ ಕೈದಿ ಇದ್ದ ಬ್ಯಾರಕ್‌ಗೆ ಬಿಡಲಾಗಿತ್ತು.
ಈ ವೇಳೆ ರೆಡ್ಡಿ ಅವರು ಪ್ರತ್ಯೇಕ ಕೊಠಡಿಗೆ ಮನವಿ ಮಾಡಿದರು. ನಂತರ ಅದೇ ಬ್ಯಾರಕ್‌ನಲ್ಲಿದ್ದ ಪೂಜಾರಿಯನ್ನು ರೌಡಿಶೀಟರ್ ಸೈಕಲ್ ರವಿ ಇದ್ದ ಬ್ಯಾರಕ್‌ಗೆ ಕಳುಹಿಸಿ, ರೆಡ್ಡಿ ಅವರಿಗೆ ಕೊಠಡಿ ಬಿಟ್ಟು ಕೊಡಲಾಯಿತು ಎಂದು ಜೈಲು ಮೂಲಗಳು ಹೇಳಿವೆ.
