ಬೆಂಗಳೂರು, (ಜುಲೈ.25): ರಾಜ್ಯದಲ್ಲಿ ಇಂದು (ಶನಿವಾರ) ಒಂದೇ ದಿನ 5072 ಜನರಿಗೆ ಕೊರೋನಾ ಕೇಸ್ ಪತ್ತೆಯಾಗಿವೆ. ಈ ಮೂಲಕ ಸತತ ಮೂರನೇ ದಿನವೂ 5000ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದೆ.

ಒಟ್ಟು ಸೋಂಕಿತರ ಸಂಖ್ಯೆ 90,942 ಕ್ಕೆ ಏರಿಕೆಯಾಗಿದೆ. ಸ್ವಲ ರಿಲೀಫ್ ಅಂದ್ರೆ ಕಳೆದ 24 ಗಂಟೆಗಳಲ್ಲಿ 2403 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರ. ಚೇತರಿಕೆ ದರ ಶೇ.37.1% ರಷ್ಟಿದ್ದು, ಇದು ಉತ್ತಮ ಬೆಳವಣಿಗೆಯಾಗಿದೆ.

ಸೋಂಕಿತರ ಮಾಹಿತಿಗಾಗಿ ಬಿಬಿಎಂಪಿ 8 ವಲಯಗಳಲ್ಲಿ ಕಮಾಂಡ್ ಸೆಂಟರ್ 

ಇದುವರೆಗೆ 33,750 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, 55,388 ಸಕ್ರಿಯ ಪ್ರಕರಣಗಳು ಇವೆ. ರಾಜ್ಯದಲ್ಲಿ ಇವತ್ತು 72 ಮಂದಿ ಮೃತಪಟ್ಟಿದ್ದಾರೆ. 

ಬೆಂಗಳೂರಿನಲ್ಲಿ ಇವತ್ತು 2036 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇವತ್ತು 686 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇನ್ನು ಬೆಂಗಳೂರಲ್ಲಿ ಮಾತ್ರ ಶನಿವಾರ ಮಂದಿ ಮೃತಪಟ್ಟಿದ್ದಾರೆ.