ರಾಜ್ಯಕ್ಕಪ್ಪಳಿಸಲಿದೆ ತೌಕ್ತೆ ಚಂಡಮಾರುತ : 8 ಜಿಲ್ಲೆಯಲ್ಲಿ ಭಾರೀ ಮಳೆ

  • ರಾಜ್ಯದಲ್ಲಿ 4 ದಿನಗಳ ಕಾಲ   ವ್ಯಾಪಕ ಮಳೆ
  • ಹವಾಮಾನ ಇಲಾಖೆ ಮುನ್ಸೂಚನೆ 
  • ಅರಬ್ಬೀ ಸಮುದ್ರ ವನ್ನು ಅಪ್ಪಳಿಸಲಿರುವ ಚಂಡಮಾರುತಕ್ಕೆ ತೌಕ್ತೆ (ಹಲ್ಲಿ) ಚಂಡಮಾರುತ ಎಂದು ಹೆಸರು
weather Department Alerts About Cyclone Tauktae to Karnataka snr

ಬೆಂಗಳೂರು (ಮೇ.13): ಒಂದೆಡೆ ಕೊರೋನಾ ಮಹಾಮಾರಿ ರಣಕೇರೆ ಹಾಕುತ್ತಿದೆ. ನಿಲ್ಲದೇ ನಾಗಲೋಟದಲ್ಲಿ ಮುಂದುವರಿದಿದ್ದು ಇದೇ ವೇಳೆ ವರುಣನ ಆಗಮನದ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶ ರವಾನಿಸಿದೆ.

ರಾಜ್ಯದಲ್ಲಿ 4 ದಿನಗಳ ಕಾಲ ( ಮೇ 13 -16) ವ್ಯಾಪಕ ಮಳೆಯ ಮುನ್ಸೂಚನೆ ನೀಡಿದೆ ಹವಾಮಾನ ಇಲಾಖೆ.  ರಾಜ್ಯಕ್ಕೆ ಈ ವರ್ಷದ ಮೊದಲ ಚಂಡಮಾರುತ  ಮೇ 16ಕ್ಕೆ ಅಪ್ಪಳಿಸಲಿದೆ ಎಂದಿದೆ. ಗುಜರಾತ್‌ ಕರಾವಳಿಯಲ್ಲಿ ಸಂಭವಿಸಿದ ವಾಯುಭಾರ ಕುಸಿತದಿಂದ ಚಂಡಮಾರುತ ಅಪ್ಪಳಿಸಲಿದೆ. 

ಅರಬ್ಬೀ ಸಮುದ್ರ ವನ್ನು ಅಪ್ಪಳಿಸಲಿರುವ ಚಂಡಮಾರುತಕ್ಕೆ ತೌಕ್ತೆ (ಹಲ್ಲಿ) ಚಂಡಮಾರುತ ಎಂದು ಹೆಸರಿಡಲಾಗಿದೆ.  ಕರ್ನಾಟಕ, ಕೇರಳ, ತಮಿಳುನಾಡು ಸೇರಿ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಚಂಡಮಾರುತ ಎಫೆಕ್ಟ್ ಇರಲಿದೆ. 

ಸೈಕ್ಲೋನ್ ಸರ್ಕ್ಯುಲೇಷನ್: ಮುಂದಿನ ಕೆಲವು ದಿನ ಮಳೆ .

ಈ ನಿಟ್ಟಿನಲ್ಲಿ ರಾಜ್ಯದ  ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಹಾಸನ, ಬೆಂಗಳೂರು ನಗರ, ಗ್ರಾಮೀಣ ಜಿಲ್ಲೆಗೆ ಯೆಲ್ಲೋ ಅಲರ್ಟ್ (ಪ್ರತಿಕೂಲ ಪರಿಸ್ಥಿತಿ ಎದುರಾಗಬಹುದಾದ ಸನ್ನಿವೇಶ ಇದ್ದು ಜನರು ಸನ್ನದ್ಧರಾಗಿರಬೇಕೆಂಬ ಸೂಚನೆ ) ಘೋಷಣೆ ಮಾಡಲಾಗಿದೆ.  

ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಹಿನ್ನೆಲೆ 1 ವಾರ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ತೌಕ್ತೆ ಚಮಡಮಾರುತದ ಅಬ್ಬರ ಸಮುದ್ರದಲ್ಲಿ ಹೆಚ್ಚಾಗಿರುವುದರಿಂದ ಮುನ್ನೆಚ್ಚರಿಕೆ ನೀಡಲಾಗಿದೆ.  

ಈ ವರ್ಷವೂ ಸಾಮಾನ್ಯ ಮುಂಗಾರು: ಸ್ಕೈಮೆಟ್‌!

 8ಜಿಲ್ಲೆಗೆ ಅಲರ್ಟ್ : ತೌಕ್ತೆ ಚಂಡಮಾರುತದ ಪರಿಣಾಮ 8ಜಿಲ್ಲೆಗಳಲ್ಲಿ ಹೆಚ್ಚಾಗಿ ಇರಲಿದ್ದು ಭಾರೀ ಮಳೆ ಸಂಭವವಿದೆ ಎಂದು ಹವಾಮಾನ ಇಲಾಖೆ  ನಿರ್ದೇಶಕ ಚನ್ನಬಸವನಗೌಡ ಎಸ್ ಪಾಟೀಲ್ ಹೇಳಿಕೆ

ಮುಂಗಾರು ಪ್ರವೇಶ : ಕೇರಳಕ್ಕೆ ಈ ಬಾರಿ  ಜೂನ್ 1ರಂದು ಮಾನ್ಸೂನ್ ಪ್ರವೇಶವಾಗಲಿದೆ. ಅದಕ್ಕೂ ಮುನ್ನ ವರ್ಷದ ಮೊದಲ ಚಂಡಮಾರುತದ ಎಚ್ಚರಿಕೆ ನೀಡಲಾಗಿದೆ.  

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios