ಭಾರತವನ್ನ ಹಿಂದೂ ರಾಷ್ಟ್ರವಾಗಿಸಲು ನಾವು ಬಿಡುವುದಿಲ್ಲ: ಡಾ.ಯತೀಂದ್ರ ಸಿದ್ದರಾಮಯ್ಯ

ಭಾರತವನ್ನ ಒಂದೇ ಧರ್ಮದ ರಾಷ್ಟ್ರವಾಗಿಸುವ ಯತ್ನ ನಡೆಯುತ್ತಿದೆ. ನಾವುಗಳು ಈ ರೀತಿ ಆಗಲು ಬಿಡಬಾರದು ಎನ್ನುವ ಮೂಲಕ ಹಿಂದೂ ರಾಷ್ಟ್ರ ಕಲ್ಪನೆಗೆ ವಿಧಾನ ಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದರು

We will not let India become a Hindu nation says MLC Dr Yatindra Siddaramaiah at mysuru rav

ಮೈಸೂರು (ನ.20): ಭಾರತವನ್ನ ಒಂದೇ ಧರ್ಮದ ರಾಷ್ಟ್ರವಾಗಿಸುವ ಯತ್ನ ನಡೆಯುತ್ತಿದೆ. ನಾವುಗಳು ಈ ರೀತಿ ಆಗಲು ಬಿಡಬಾರದು ಎನ್ನುವ ಮೂಲಕ ಹಿಂದೂ ರಾಷ್ಟ್ರ ಕಲ್ಪನೆಗೆ ವಿಧಾನ ಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದರು

ಮೈಸೂರಿನಲ್ಲಿ ನಡೆದ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ರಾಷ್ತ್ರೀಯ ಶಿಕ್ಷಣ ದಿನಾಚರಣೆ ಹಾಗು ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ ಅವರು, ಭಾರತವು ವಿವಿಧ ಜಾತಿ, ಧರ್ಮ, ಸಂಸ್ಕೃತಿಯ ದೇಶವಾಗಿದೆ. ಆದರೆ ಕೆಲವರು ರಾಜಕೀಯ ಲಾಭಕ್ಕಾಗಿ ಒಂದು ಧರ್ಮದ ರಾಷ್ಟ್ರವಾಗಿಸಲು ಯತ್ನಿಸುತ್ತಿದ್ದಾರೆ. ಅದನ್ನು ನಾವು ವಿರೋಧಿಸಬೇಕು. ಅಂಬೇಡ್ಕರ್ ಸಂವಿಧಾನ ಇರುವವರೆಗೂ ಹಿಂದೂ ರಾಷ್ಟ್ರ ನಿರ್ಮಾಣ ಅಸಾಧ್ಯ. ದೇಶದ ಸಂವಿಧಾನವು ಎಲ್ಲರ ಹಕ್ಕು, ಸ್ವಾತಂತ್ರ್ಯ ರಕ್ಷಿಸಿದೆ ಎಂದರು.

ಕೋರ್ಟ್‌ಗಳು ಕೇಂದ್ರ ಸರ್ಕಾರದ ಮಾತು ಕೇಳುವ ಸ್ಥಿತಿ: ಯತೀಂದ್ರ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ

ಭಾರತವನ್ನು ಒಂದು ಧರ್ಮದ ರಾಷ್ಟ್ರ ಮಾಡಲು ಹೊರಟಿರುವುದು ಬಹಳ ಅಪಾಯಕಾರಿ. ಇದಕ್ಕೆ ನಾವು ಯಾರೂ ಸಹ ಬಿಡಬಾರದು. ಆದಾಗ್ಯೂ ನಾವು ಯಾರು ಸಹ ಧೃತಿಗೆಡಬಾರದು‌.
ದೇಶದ ಸಂವಿಧಾನ ಬಹಳ ಗಟ್ಟಿಯಾಗಿದೆ. ಕೆಲವು ಜನ ಮಾತ್ರ ಒಂದು ಧರ್ಮದ ರಾಷ್ಟ್ರವಾಗಬೇಕೆಂದು ಬಯಸುತ್ತಿದ್ದಾರೆ. ಬಹುಸಂಖ್ಯಾತರು ಸೌಹರ್ದತೆ, ಸೋದರರಂತೆ ಬಾಳಬೇಕೆಂದು ಬಯಸುತ್ತಿದ್ದಾರೆ. ಸಾರ್ವಜನಿಕವಾಗಿ ನಾವು ನೆಮ್ಮದಿಯಾಗಿರಬೇಕೆಂದರೆ ಸಂವಿಧಾನವನ್ನ ನಾವು ರಕ್ಷಣೆ ಮಾಡಬೇಕು. ಭಾರತದ ದೇಶ ವಿವಿಧತೆಯಲ್ಲಿ ಏಕೆತೆಯನ್ನ ಸಾರುವ ದೇಶವಾಗಿದೆ. ಇಲ್ಲಿ ಹಲವು ಜಾತಿ ಧರ್ಮಗಳು ಸಾಮರಸ್ಯದಿಂದ ಬಾಳುತ್ತಿವೆ. ಇದೇ ಭಾರತ ದೇಶದ ಶಕ್ತಿ ಕೂಡ ಆಗಿದೆ‌. ಎಲ್ಲಿಯ ತನಕ ನಮ್ಮ ದೇಶದಲ್ಲಿ ವೈವಿದ್ಯತೆ ಇರುತ್ತೆ, ಎಲ್ಲಾ ಸಮುದಾಯಗಳು ಶಾಂತಿ ಸಂತೋಷದಿಂದ ಇರುಲು ಸಾಧ್ಯವಾಗುತ್ತೆ, ಅಲ್ಲಿಯವರೆಗೆ ಭಾರತ ದೇಶ ಮುಂದುವರೆಯಲು ಸಾಧ್ಯ ಎಂದರು.

ಮುಡಾ ಭ್ರಷ್ಟಾಚಾರ ತಡೆಯಲು ಕೆಂಪಣ್ಣ ಆಯೋಗ ರಚನೆ; ಅಧ್ಯಕ್ಷ ಕೆ ಮರೀಗೌಡ ರಾಜೀನಾಮೆ ಸುಳಿವು ನೀಡಿದ ಡಾ ಯತೀಂದ್ರ

ಯಾವುದಾದರು ಒಂದು ಸಮುದಾಯಕ್ಕೆ ಈ ದೇಶವನ್ನ ಸೇರಿಸಬೇಕು ಅಂತಾದ್ರೆ, ಒಂದು ಸಮುದಾಯ ಮೇಲುಗೈ ಸಾಧಿಸಬೇಕು ಅಂತ ಹೋದ್ರೆ ಆಗ ಈ ದೇಶ ಉಳಿಯಲು ಸಾಧ್ಯವಿಲ್ಲ.
ಇಲ್ಲಿನ ಡಿಎನ್ಎನಲ್ಲೇ ಜ್ಯಾತ್ಯಾತೀತ ಅನ್ನುವುದು ಇದೆ. ಅದನ್ನ ಮನಗಂಡೆ ನಮ್ಮ ಸಂವಿಧಾನದ  ನಮ್ಮ ದೇಶದವನ್ನ ಜಾತ್ಯಾತೀತ ದೇಶ ಎಂದು ಮಾಡಿದ್ದಾರೆ. ಸಂವಿಧಾನದಲ್ಲೇ ಜ್ಯಾತ್ಯಾತೀತ ತತ್ವವನ್ನ ಅಡಕ ಮಾಡಿದ್ದಾರೆ. ಈ ದೇಶ ಸೆಕ್ಯೂಲರ್ ದೇಶ ಆಗಬೇಕೆಂದು ಅಂಬೇಡ್ಕರ್ ಆಗಲೇ ಹೇಳಿದ್ದಾರೆ. ಭಾರತ ಹಿಂದುತ್ವ ದೇಶ ಆದರೆ ಅದಕ್ಕಿಂದ ದೊಡ್ಡ ಅಪಾಯ ಇನ್ನೊಂದಿಲ್ಲ ಎಂದಿದ್ದಾರೆ. ಮುಸ್ಲಿಮರು ಹಿಂದುಳಿದ ಸಮುದಾಯವಾಗಿದ್ದಾರೆ. ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಮೇಲೆತ್ತುವ ಜವಾಬ್ದಾರಿ ಸರ್ಕಾರದ ಕರ್ತವ್ಯ. ಎಲ್ಲ ಸಮುದಾಯಗಳ ಅಭಿವೃದ್ಧಿಯಾದರೆ ಮಾತ್ರ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದರು.

Latest Videos
Follow Us:
Download App:
  • android
  • ios