Asianet Suvarna News Asianet Suvarna News

ಪಾಕಿಸ್ತಾನದ ಜತೆ ನಾವು ಕ್ರಿಕೆಟ್ ಆಟ ಆಡಲೇಬಾರದು: ಸ್ಪೀಕರ್ ಯು.ಟಿ.ಖಾದರ್

ಭಾರತ - ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಾಟದ ಕುರಿತು ಪ್ರತಿಕ್ರಿಯಿಸಿರುವ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್, ‘ಪಾಕಿಸ್ತಾನದ ಜತೆ ನಾವು ಕ್ರಿಕೆಟ್ ಆಟ ಆಡಲೇಬಾರದು’ ಎಂದು ಹೇಳಿದ್ದಾರೆ. 
 

We should not play cricket with Pakistan Says Speaker UT Khader gvd
Author
First Published Jun 9, 2024, 12:18 PM IST

ಮಂಗಳೂರು (ಜೂ.09): ಭಾರತ - ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಾಟದ ಕುರಿತು ಪ್ರತಿಕ್ರಿಯಿಸಿರುವ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್, ‘ಪಾಕಿಸ್ತಾನದ ಜತೆ ನಾವು ಕ್ರಿಕೆಟ್ ಆಟ ಆಡಲೇಬಾರದು’ ಎಂದು ಹೇಳಿದ್ದಾರೆ. ಖಾಸಗಿ ವಾಹಿನಿಗೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಟಿ20 ಮ್ಯಾಚ್ ನಡೆಯುತ್ತಿರುವುದು ಸಂತೋಷದ ವಿಚಾರ. ನಾನು ಸಹ ಕ್ರಿಕೆಟ್ ಆಟಗಾರ ಮತ್ತು ಅಭಿಮಾನಿ. ಅದಕ್ಕಿಂತ ಮಿಗಿಲಾಗಿ ಭಾರತ ದೇಶದ ಪ್ರಜೆ. ನಾವು ಪಾಕಿಸ್ತಾನದ ಜೊತೆ ಕ್ರಿಕೆಟ್ ಆಟ ಆಡಲೇಬಾರದು. ಪಾಕಿಸ್ತಾನದವರು ಇಲ್ಲಿ ಬಂದಾಗ ವಿರೋಧಿಸಿದ್ದನ್ನು ನೋಡಿದ್ದೇವೆ.

ಭಾರತ ದೇಶದಲ್ಲಿ ಅವರ ಜತೆ ಪಂದ್ಯ ಬ್ಯಾನ್ ಮಾಡಲಾಗಿದೆ. ಹಾಗಿದ್ದೂ ಹೊರದೇಶದಲ್ಲಿ ಯಾಕೆ ಆಟ ಆಡಿಸಬೇಕು? ಅವರು ಸರಿಯಾಗುವ ತನಕ ಅವರ ಜತೆ ಪಂದ್ಯ ಆಡುವುದೇ ಬೇಡ. ಇದು ನನ್ನ ವೈಯಕ್ತಿಕ ಅಂತರಾಳದ ಅನಿಸಿಕೆ ಎಂದಿದ್ದಾರೆ. ಮ್ಯಾಚ್ ಆಯೋಜಿಸುವವರು ಈ ರೀತಿಯ ಗೊಂದಲ ಮಾಡಬಾರದು. ಈಗ ಆಟ ಆಡಲೇಬೇಕು ಎಂಬ ನಿರ್ಧಾರವಾಗಿದೆ. ಭಾರತ ದೇಶ ಟಿ20 ವಿಶ್ವಕಪ್ ಗೆಲ್ಲಬೇಕು. ಗೆಲುವಷ್ಟೇ ಅಲ್ಲ, ಗೌರವದ ಗೆಲುವಾಗಬೇಕು. ಪಾಕಿಸ್ತಾನವನ್ನು ಸೋಲಿಸುವುದು ಮಾತ್ರವಲ್ಲ, ಅವರನ್ನು ಹೀನಾಯವಾಗಿ ಸೋಲಿಸಬೇಕು ಎಂದಿದ್ದಾರೆ.

ರೇಪ್ ಕೇಸ್: ಗುಂಪು, ಗದ್ದಲ ತಪ್ಪಿಸಲು ವ್ಯಾನಿನಲ್ಲಿ ಮಲಗಿದ ಸ್ಥಿತಿಯಲ್ಲಿ ಪ್ರಜ್ವಲ್‌ ರೇವಣ್ಣ!

ಕಡಲ ತೀರ ನಿರ್ವಹಣಾ ಯೋಜನೆ ಶೀಘ್ರ ಸಿದ್ಧಪಡಿಸಲು ಸೂಚನೆ: ಕರಾವಳಿ ಭಾಗದ ಸಮಸ್ಯೆಗಳಿಗೆ ಪರಿಹಾರ ನೀಡುವ ಕಡಲ ತೀರ ನಿರ್ವಹಣಾ ಯೋಜನೆಯನ್ನು (ಎಸ್‌ಎಂಪಿ) ಈ ತಿಂಗಳಲ್ಲಿ ಸಿದ್ಧಪಡಿಸಿ, ಕರಡು ಅಧಿಸೂಚನೆ ಪ್ರಕಟಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸೂಚಿಸಿದರು. ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಸಮ್ಮುಖದಲ್ಲಿ ಸಚಿವರಾದ ದಿನೇಶ್‌ ಗುಂಡೂರಾವ್‌, ಮಾಂಕಾಳ ವೈದ್ಯ ನೇತೃತ್ವದಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿ ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದ ವಿವಿಧ ವಿಚಾರಗಳ ಕುರಿತು ಚರ್ಚಿಸಲಾಯಿತು.

ಪ್ರಮುಖವಾಗಿ ಎಸ್‌ಎಂಪಿ ಸಿದ್ಧಪಡಿಸುವುದು, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ನಕ್ಷೆಗೆ ಮಂಜೂರಾತಿ, ಎತ್ತರದ ಕಟ್ಟಡಗಳಿಗೆ ನಿರಾಕ್ಷೇಪಣ ಪತ್ರ (ಎನ್‌ಒಸಿ) ನೀಡುವುದು ಸೇರಿದಂತೆ ಇನ್ನಿತರ ಪ್ರಮುಖ ನಿಯಮಗಳ ಸರಳೀಕರಣ ಮಾಡುವುದು, ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಹಾಗೂ ನೇತ್ರಾವತಿ, ಫಲ್ಗುಣಿ ನದಿಗಳಲ್ಲಿ ಗುರುತಿಸಲಾದ ಮರಳು ದಿಬ್ಬಗಳನ್ನು ತೆರವು ಮಾಡಲು ಅಗತ್ಯ ಅನುಮೋದನೆ ಪಡೆಯುವ ಕುರಿತಂತೆ ಚರ್ಚಿಸಲಾಯಿತು.

ಮೋದಿ ಪ್ರಮಾಣ ವಚನಕ್ಕೆ ಎಚ್‌ಡಿಕೆ ಕುಟುಂಬ ದಿಲ್ಲಿಗೆ: ಬಿಜೆಪಿಯಿಂದ ಕರೆ?

ಸಮುದ್ರ ಆಧಾರಿತ ಪ್ರವಾಸೋದ್ಯಮ ಅಭಿವೃದ್ಧಿ, ಕರಾವಳಿ ನಿಯಂತ್ರಣ ವಲಯದಲ್ಲಿ ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಸಂಬಂಧ ಎಸ್‌ಎಂಪಿ ಸಿದ್ಧಪಡಿಸುವ ಹೊಣೆ ನೀಡಿದ್ದ ಖಾಸಗಿ ಈವರೆಗೆ ಎಸ್‌ಎಂಪಿ ತಯಾರಿಸಿ ಸಲ್ಲಿಸಿಲ್ಲ. ಎಸ್‌ಎಂಪಿಯಿಂದ ಕರಾವಳಿ ಭಾಗದ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಕರಾವಳಿ ನಿಯಂತ್ರಣ ವಲಯದಲ್ಲಿ ಹರಿಯುವ ನೇತ್ರಾವತಿ, ಫಲ್ಗುಣಿ ಸೇರಿದಂತೆ ಇನ್ನಿತರ ನದಿ ಪಾತ್ರದಲ್ಲಿ ಗುರುತಿಸಿರುವ ಮರಳು ದಿಬ್ಬಗಳನ್ನು ತೆರವುಗೊಳಿಸಲು ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯಬೇಕಿದೆ. ಅದಕ್ಕೂ ಎಸ್‌ಎಂಪಿಯ ಅಗತ್ಯವಿದೆ. ಉಚ್ಚಿಲ-ಬಟ್ಟಪ್ಪಾಡಿ, ಸುರತ್ಕಲ್ ಲೈಟ್‌ಹೌಸ್ ಸೇರಿದಂತೆ ಹಲವೆಡೆ ಸಂಪರ್ಕ ಕಲ್ಪಿಸುವ ರಸ್ತೆಗಳ ದುರಸ್ತಿ ಮತ್ತು ನಿರ್ವಹಣೆಗೂ ಎಸ್‌ಎಂಪಿ ಸಿದ್ಧವಾಗದೇ ಇರುವುದರಿಂದ ಅಡ್ಡಿಯಾಗಿದೆ. ಹಸಿರು ನ್ಯಾಯಾಧಿಕರಣ ಆದೇಶದಂತೆ ಎಸ್‌ಎಂಪಿ ತಯಾರಾಗದೆ ಯಾವುದೇ ಕಾಮಗಾರಿಗಳನ್ನೂ ಕೈಗೊಳ್ಳಲು ಅವಕಾಶ ಆಗುತ್ತಿಲ್ಲ. ಹೀಗಾಗಿ ಈ ತಿಂಗಳಲ್ಲೇ ಎಸ್‌ಎಂಪಿ ಸಿದ್ಧಪಡಿಸಲು ಖಾಸಗಿ ಸಂಸ್ಥೆ ಮೇಲೆ ಒತ್ತಡ ಹೇರುವಂತೆ ಸಚಿವರು ತಿಳಿಸಿದರು.

Latest Videos
Follow Us:
Download App:
  • android
  • ios