ನಾನು RSS ಕೈ ಗೊಂಬೇನೂ ಅಲ್ಲ ಕಾಲು ಗೊಂಬೇನೂ ಅಲ್ಲ: ಆರಗ ಜ್ಞಾನೇಂದ್ರ

'ನಾವು ಆರ್‌ಎಸ್‌ಎಸ್‌ನವರು. ಆ ಬಗ್ಗೆ ಅನುಮಾನವೇ ಬೇಡ. ದೇಶ ಭಕ್ತರಾಗಿ ದೇಶವನ್ನು ಪ್ರೀತಿಸಿ, ಸಮುದಾಯವನ್ನೂ ಪ್ರೀತಿಸುತ್ತೇವೆ. ಕೊಟ್ಟಿರುವ ಅಧಿಕಾರವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ. ಆದರೆ, ಯಾರ ಕೈ ಗೊಂಬೆಯೂ ಅಲ್ಲ,ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.. ನವೆಂಬರ್11ರಂದು ಪ್ರಧಾನಿ ಮೋದಿ ರಾಜ್ಯ ಪ್ರವಾಸ ಹಿನ್ನಲೆಯಲ್ಲಿ ಭದ್ರತೆ ಹಾಗೂ ಇನ್ನಿತರ ರಕ್ಷಣಾ ವ್ಯವಸ್ಥೆಯ ಬಗ್ಗೆ ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿ, ಸುದ್ದಿಗೋಷ್ಠಿ ನಡೆಸಿದರು.

 

 

We RSS have no doubt about that so Nobodys puppet says araga jnanendra rav

ಬೆಂಗಳೂರು (ನ.9): 'ನಾವು ಆರ್‌ಎಸ್‌ಎಸ್‌ನವರು. ಆ ಬಗ್ಗೆ ಅನುಮಾನವೇ ಬೇಡ. ದೇಶ ಭಕ್ತರಾಗಿ ದೇಶವನ್ನು ಪ್ರೀತಿಸಿ, ಸಮುದಾಯವನ್ನೂ ಪ್ರೀತಿಸುತ್ತೇವೆ. ಕೊಟ್ಟಿರುವ ಅಧಿಕಾರವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ. ಆದರೆ, ಯಾರ ಕೈ ಗೊಂಬೆಯೂ ಅಲ್ಲ,' ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. 

3 ಜಿಲ್ಲೆಗೊಂದು ವಿಪತ್ತು ಪಡೆ ನಿಯೋಜನೆ: ಗೃಹ ಸಚಿವ ಆರಗ

ನವೆಂಬರ್11ರಂದು ಪ್ರಧಾನಿ ಮೋದಿ ರಾಜ್ಯ ಪ್ರವಾಸ ಹಿನ್ನಲೆಯಲ್ಲಿ ಗೃಹ ಸಚಿವರು ಭದ್ರತೆ ಹಾಗೂ ಇನ್ನಿತರ ರಕ್ಷಣಾ ವ್ಯವಸ್ಥೆಯ ಬಗ್ಗೆ ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿ, ಸುದ್ದಿಗೋಷ್ಠಿ ನಡೆಸಿದರು. ಮೋದಿ ಭಾಗಿವಹಿಸುವ ಕಾರ್ಯಕ್ರಮದ ವೇದಿಕೆ ಹಾಗೂ ಸಾರ್ವಜನಿಕರು ಹಾಗೂ ಗಣ್ಯ ವ್ಯಕ್ತಿಗಳಿಗೆ ಒದಗಿಸಲಾದ ಆಸನಗಳ ವ್ಯವಸ್ಥೆ ಸೇರಿ ಸ್ಥಳದ ಭದ್ರತೆ (Security) ಹಾಗೂ ಇನ್ನಿತರ ರಕ್ಷಣಾ ವ್ಯವಸ್ಥೆಯ ಬಗ್ಗೆ ಪರಿವೀಕ್ಷಣಾ ನಡೆಸಿದ್ದಾರೆ. ಇದೇ ವೇಳೆ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸೇರಿ ಹಿರಿಯ ಅಧಿಕಾರಿಗಳೂ ಉಪಸ್ಥಿತತರಿದ್ದರು. ಸ್ಥಳದಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ ಗೃಹ ಸಚಿವ ಆರಗ ಜ್ಞಾನೇಂದ್ರ.

ಪ್ರಧಾನಮಂತ್ರಿ ಆಗಮನದ ಹಿನ್ನೆಲೆಯಲ್ಲಿ ಎಲ್ಲಾ ವ್ಯವಸ್ಥೆ ಪರಿಶೀಲನೆ ನಡೆಸಿದ್ದೇನೆ. ಪ್ರಧಾನಿಯವರು ವಿಮಾನ ನಿಲ್ದಾಣದ (Airport) ಮುಂಭಾಗದಲ್ಲಿ ಸ್ಥಾಪಿತವಾಗಿರುವ ಕೆಂಪೇಗೌಡ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಟರ್ಮಿನಲ್ 2 ಹಾಗೂ ರೈಲ್ವೆ ನಿಲ್ದಾಣದಲ್ಲಿ (Railway Station) ವಂದೇ ಭಾರತ ಎಕ್ಸ್‌ಪ್ರೆಸ್‌ ರೈಲಿಗೆ ಹಸಿರು ನಿಶಾನೆ ತೋರಿಸುತ್ತಾರೆ. ಬೆಳಗ್ಗೆ 10 ಗಂಟೆಯಿಂದ ಕಾರ್ಯಕ್ರಮ ಆರಂಭ ಆಗುತ್ತದೆ. ಎರಡು, ಮೂರು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದು, ನಾಲ್ಕು ಲಕ್ಷ ಜನರು ಕಾರ್ಯಕ್ರಮಕ್ಕೆ ಸೇರುವ ಸಾಧ್ಯತೆ ಇದೆ. ಪ್ರಧಾನಿ ಭೇಟಿ ನೀಡುವ ಸ್ಥಳಗಳಿಗೆ ನಮ್ಮ ಹಿರಿಯ ಪೊಲೀಸರ ತಂಡದ ಜೊತೆ ಪರಿಶೀಲನೆ ನಡೆಸಿದ್ದೇನೆ. ಅಂತಾರಾಷ್ಟ್ರೀಯ ನಾಯಕರಿಗೆ ಸಹಜವಾಗಿ ವಿಶೇಷ ಭದ್ರತೆ ಇರಲಿದ್ದು, ಭದ್ರತೆಗಾಗಿ 4 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಇರುತ್ತಾರೆ. ಮೋದಿ ಆಗಮಿಸುವ ವೇಳೆ ಟ್ರಾಫಿಕ್ (Traffic) ಸಮಸ್ಯೆ ಆಗದಂತೆ ಅನ್ಯ ವ್ಯವಸ್ಥೆ ಮಾಡಲಾಗಿದೆ. ಅವರು ಎಲ್ಲಿ ಲ್ಯಾಂಡ್ ಆಗಬೇಕು ಹಾಗೂ ಯಾವ ರಸ್ತೆಯಲ್ಲಿ ಸಂಚರಿಸಬೇಕು ಎಂಬುದರ ಬಗ್ಗೆಯೂ ಪ್ಲ್ಯಾನ್ ಸಿದ್ಧಗೊಳ್ಳುತ್ತಿದ್ದು, ಶೀಘ್ರವೇ ಮಾಹಿತಿ ಹಂಚಿಕೊಳ್ಳಲಾಗುವುದು. ಪ್ರಧಾನ ಮಂತ್ರಿಗಳ ಭದ್ರತಾ ಸಿಬ್ಬಂದಿ ಜೊತೆ ಒಮ್ಮೆ ಚರ್ಚೆ ನಡೆಸಿದ ನಂತರ ಎಲ್ಲಾ ಸಿದ್ದಪಡಿಸಲಾಗುತ್ತೆ, ಎಂದಿದ್ದಾರೆ. 

ಸತೀಶ್ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ ವಿಚಾರ:

ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಸತೀಶ್ ಜಾರಕಿಹೊಳಿ, ಹಿಂದು ಎಂಬ ಪದ ಪರ್ಶಿಯನ್‌ನಿಂದ ತೆಗೆದುಕೊಂಡಿದ್ದು, ಹಿಂದು ಅನ್ನೋದು ಅಶ್ಲೀಲ ಅರ್ಥ ನೀಡುತ್ತದೆ, ಎಂದು ಹೇಳಿಕೆ ನೀಡದ್ದಕ್ಕೆ ಪ್ರತಿಕ್ರಿಯೆ ನೀಡಿದ ಜ್ಞಾನೇಂದ್ರ, ಕೇಸರಿ ಅನ್ನೋದು ಮೊದಲಿಂದಲೂ ಕಾಂಗ್ರೆಸ್‌ಗೆ (Congress) ಅಲರ್ಜಿ. ಇದೊಂದು ಗೋಳು ಮಗಿಯುವುದೇ ಇಲ್ಲ. ಇದನ್ನ ಮಾಡಿಕೊಂಡೇ ಕಾಂಗ್ರೆಸ್ ತಮ್ಮ ಕುರ್ಚಿ ಮತ್ತು ಅಧಿಕಾರ ಉಳಿಸಿಕೊಂಡು ಬಂದಿದ್ದಾರೆ. ಅವರಿಗೆ ಈ ದೇಶಕ್ಕಿಂತ, ದೇಶದ ಸಂಸ್ಕೃತಿ ಧರ್ಮಕ್ಕಿಂತ ಅವರಿಗೆ ಕುರ್ಚಿ ಉಳಿಸಿಕೊಳ್ಳೋದಕ್ಕೆ ಏನೆಲ್ಲ ಮಾಡಬೇಕೋ ಮಾಡ್ತಾರೆ. ಈ ರೀತಿ ಮಾತನಾಡೋದ್ರಿಂದ 6 ತಿಂಗಳಲ್ಲಿ ಅಲ್ಪಸಂಖ್ಯಾತರ ಓಟು ಅವರ ಬುಟ್ಟಿಗೆ ಬೀಳುತ್ತವೆ ಎಂದು ಅವರು ಭಾವಿಸಿದ್ದಾರೆ. ಅವರದ್ದು ಸುಡೋ ಸೆಕ್ಯೂಲರಿಸಿಂ. ಅದನ್ನೇ ಮೊದಲಿಂದಲೂ ಮಾಡಿಕೊಂಡು ಬಂದಿದ್ದಾರೆ. ಜಾತ್ಯಾತೀತ ಹೆಸರಲ್ಲಿ ಒಂದು ಜಾತಿಯನ್ನು ಎತ್ತಿಕಟ್ಟುವ ಪ್ರಯತ್ನ ಕಾಂಗ್ರೆಸ್ ಮಾಡ್ತಿದ್ದೆ. ಅದರ ಭಾಗವಾಗಿ ಜಾರಕಿಹೊಳಿ ಹೇಳಿದ್ದಾರೆ ಇದ್ರಲ್ಲಿ ಆಶ್ಚರ್ಯವೇನೂ ಇಲ್ಲ, ಎಂದಿದ್ದಾರೆ. 

ಈ ವರ್ಷ 5 ಸಾವಿರ ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿ: ಸಚಿವ ಆರಗ ಜ್ಞಾನೇಂದ್ರ

ಮುರುಘಾ ಶ್ರೀಗಳ ವಿಚಾರ:

ಅವರ ಮೇಲೆ ಎನು ಕಂಪ್ಲೀಂಟ್ ಆಗಿತ್ತು.  FIR ಆಗಿದೆ. ಅದ್ರ ಬಗ್ಗೆ ತೆನಿಖೆ ನಡೆಯುತ್ತಿದೆ. ಈಗಾಗಲೇ ಭಾಗಶಃ ದೋಷರೋಪ (Charge Sheet) ಪಟ್ಟಿ ಸಲಿಸಿದ್ದು, ಪೂರ್ತಿ ತನಿಖೆ ನಂತ ಪೂರ್ಣ ಚಾರ್ಜ್ ಶೀಟ್ ಸಲ್ಲಿಸಲಾಗುತ್ತದೆ, ಎಂದು ಹೇಳಿದ್ದಾರೆ.

Latest Videos
Follow Us:
Download App:
  • android
  • ios