ಈ ವರ್ಷ 5 ಸಾವಿರ ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿ: ಸಚಿವ ಆರಗ ಜ್ಞಾನೇಂದ್ರ
ಈ ವರ್ಷ ಐದು ಸಾವಿರ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆಯಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಅವರಿಗೆ ಇನ್ನೂ ಎರಡು ವರ್ಷಗಳ ಕಾಲ ವಯೋಮಿತಿಯಲ್ಲಿ ಅವಕಾಶ ಕೊಡಬೇಕು ಎಂಬ ಒತ್ತಾಯ ಇತ್ತು.
ಬೆಂಗಳೂರು (ನ.03): ಈ ವರ್ಷ ಐದು ಸಾವಿರ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆಯಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಅವರಿಗೆ ಇನ್ನೂ ಎರಡು ವರ್ಷಗಳ ಕಾಲ ವಯೋಮಿತಿಯಲ್ಲಿ ಅವಕಾಶ ಕೊಡಬೇಕು ಎಂಬ ಒತ್ತಾಯ ಇತ್ತು. ಹಾಗಾಗಿ ಈ ಸಾಲಿನಿಂದ ಎರಡು ವರ್ಷಗಳ ಕಾಲ ವಿನಾಯಿತಿ ನೀಡಲಾಗಿದೆ. ಅರ್ಜಿ ಸಲ್ಲಿಸಲು ಈ ತಿಂಗಳ ಕಾಲ ಅವಕಾಶ ಇದೆ. ಈ ಅವಕಾಶವನ್ನ ಯುವಕರು, ಯುವತಿಯರು ಬಳಸಿಕೊಳ್ಳಬೇಕು ಎಂದರು.
ಶಾಸಕ ಎಂ. ಪಿ.ರೇಣುಕಾಚಾರ್ಯ ಅವರ ಸಹೋದರನ ಮಗನ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶವ ಕಾಲುವೆಯಲ್ಲಿ ಸಿಕ್ಕಿದೆ. ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗ್ತಿದೆ ಎಂದು ಹೇಳಿದರು. ಮಂಡ್ಯದಲ್ಲಿ ಗಂಡ ಹೆಂಡತಿ ಮಗುವಿನೊಂದಿಗೆ ಆಸ್ಪತ್ರೆಗೆ ಹೋಗುವಾಗ ಪೋಲೀಸರು ತಡೆದ ವಿಚಾರವಾಗಿ ಉತ್ತರಿಸಿದ ಸಚಿವರು ಇದರ ಬಗ್ಗೆ ಪರಿಶೀಲನೆ ಮಾಡಿ ಪೋಲೀಸರು ತಪ್ಪು ಮಾಡಿದ್ರೆ ಕ್ರಮ ತೆಗೆದುಕೊಳ್ತೀವಿ ಎಂದರು. ಜೊತೆಗೆ ಸಿಎಂ ಕಚೇರಿಯಲ್ಲಿ ಹನಿಟ್ರ್ಯಾಪ್ ಕೇಸ್ ವಿಚಾರವಾಗಿ ಅದರ ಬಗ್ಗೆ ನಂಗೆ ಮಾಹಿತಿ ಇಲ್ಲ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.
ಅಧಿಕಾರಿಗಳ ವರ್ಗಾವಣೆಗೆ ಪ್ರತ್ಯೇಕ ಬೋರ್ಡ್ ಇದೆ : ನನ್ನಿಂದ ಆಗಲ್ಲ
ಕವಲೇದುರ್ಗ ಮಣ್ಣಿನ ಸಂಗ್ರಹ ಶ್ರೇಷ್ಠ: ಶಿವಾಜಿಯ ಮಗ ರಾಜಾರಾಮನಿಗೆ ರಾಣಿ ಚೆನ್ನಮ್ಮ ಮೊಗಲರ ವಿರುದ್ಧ ಆಶ್ರಯ ನೀಡಿ ಜೀವದಾನ ಮಾಡಿದ್ದ ಕವಲೇದುರ್ಗದ ಈ ಪುಣ್ಯಭೂಮಿಯ ಮಣ್ಣನ್ನು ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪನೆಗಾಗಿ ಸಂಗ್ರಹಿಸುತ್ತಿರುವುದು ಐತಿಹಾಸಿಕವಾಗಿಯೂ ಗಮನಾರ್ಹವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಿಸಲಾಗಿರುವ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆ ಸ್ಥಾಪನೆಗೆ ಮೃತ್ತಿಕೆ ಸಂಗ್ರಹದ ಸಲುವಾಗಿ ತಾಲೂಕಿಗೆ ಬುಧವಾರ ಆಗಮಿಸಿದ ರಥವನ್ನು ಸಾಲೂರಿನಲ್ಲಿ ಸ್ವಾಗತಿಸಿ ಮಾತನಾಡಿದ ಸಚಿವರು, ಹಿಂದೂ ಸಾಮ್ರಾಜ್ಯದ ಉಳಿವಿಗಾಗಿ ಹೋರಾಟ ಮಾಡಿದ್ದ ಶಿವಾಜಿಯ ಮಗ ರಾಜಾರಾಮನಿಗೆ ಮೊಗಲರ ವಿರುದ್ಧ ನಿಂತು ಆಶ್ರಯ ನೀಡಿದ್ದ ಧೀರೊಧಾತ್ತ ಮಹಿಳೆ ರಾಣಿ ಚೆನ್ನಮ್ಮನ ಈ ಪವಿತ್ರ ನೆಲದ ಮಣ್ಣು ಕೆಂಪೇಗೌಡರ ಪ್ರತಿಮೆ ಸ್ಥಾಪನೆಗೆ ಸಂಗ್ರಹಿಸಲಾಗುತ್ತಿರುವುದು ಮಹತ್ವದ ಸಂಗತಿಯಾಗಲಿದೆ ಎಂದರು.
ಇನ್‌ಸ್ಪೆಕ್ಟರ್ ನಂದೀಶ್ ಅನಾರೋಗ್ಯದಿಂದ ಸಾವು: ಸಚಿವ ಆರಗ ಜ್ಞಾನೇಂದ್ರ
ಕೆಂಪೇಗೌಡರ ಹೆಸರನ್ನು ಜಾಗತಿಕವಾಗಿ ಶಾಶ್ವತಗೊಳಿಸುವ ಮಹತ್ವದ ಕಾರ್ಯ ನಡೆದಿದ್ದು, ಈ ಕಾರ್ಯದಲ್ಲಿ ಇಡಿ ಕನ್ನಡನಾಡು ಜಾತಿಮತ ಭಾಷೆ ಮೀರಿ ಒಂದಾಗಬೇಕಿದೆ. ಬೆಂಗಳೂರಿನಲ್ಲಿ ನಿರ್ಮಾಣಗೊಳ್ಳಲಿರುವ ಕೆಂಪೇಗೌಡರ ಪ್ರತಿಮೆಯನ್ನು ನ.11 ರಂದು ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆಗೊಳಿಸಲಿದ್ದಾರೆ. ಅದೇ ಜಾಗದಲ್ಲಿ ಕೆಂಪೇಗೌಡರ ಹೆಸರಿನ ಥೀಮ್ ಪಾರ್ಕ್ ಕೂಡಾ ನಿರ್ಮಾಣವಾಗಲಿದೆ ಎಂದರು. ಈ ಮಹತ್ವದ ಕಾರ್ಯಕ್ಕೆ ತಾಲೂಕಿನಲ್ಲಿ ಮಹಾತ್ಮರು ಜನಿಸಿದ ಪವಿತ್ರ ನೆಲ ಮಾತ್ರವಲ್ಲದೇ ನದಿಮೂಲದಿಂದಲೂ ಮಣ್ಣನ್ನು ಸಂಗ್ರಹಿಸಲಾಗುತ್ತಿದೆ. ರಥ ತಾಲೂಕಿನಾದ್ಯಂತ ಸಂಚರಿಸಿ ಈ ಸಾರ್ಥಕ ಕಾರ್ಯದ ಸಲುವಾಗಿ ಈ ನೆಲದ ಮಹತ್ವದ ಜಾಗದ ಮೃತ್ತಿಕೆ ಸಂಗ್ರಹಿಸಿ ಬಳಸಲು ಮುಂದಾಗಿರುವುುದು ಅಭಿಮಾನದ ಸಂಗತಿ ಎಂದರು.