ದೇಶದಲ್ಲಿ ಇದೀಗ ರಾಮಮಂದಿರದ ನಿರ್ಮಾಣದ ಚರ್ಚೆ ಅತ್ಯಂತ ಕಾವೇರಿದೆ . ಇದೇ ವೇಳೆ ಉಡುಪಿ ಸೋದೆ ಮಠದ ಸ್ವಾಮೀಜಿ ರಾಮಮಂದಿರ ನಿರ್ಮಾಣವಾಗಲೇಬೇಕು ಎಂದು ಹೇಳಿದ್ದಾರೆ. 

ಮದ್ದೂರು: ರಾಮಜನ್ಮ ಭೂಮಿಯಲ್ಲಿ ರಾಮ ಮಂದಿರ ಇಲ್ಲ ಎಂದ ಮೇಲೆ ಹಿಂದೂಸ್ತಾನದಲ್ಲಿ ಇನ್ನಾವ ಮಂದಿರ ಕಟ್ಟುವುದು? ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲೇಬೇಕು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದು ಪ್ರತಿಯೊಬ್ಬ ಹಿಂದೂಗಳ ಆಶಯವೂ ಆಗಿದೆ ಎಂದು ಉಡುಪಿ ಸೋದೆ ವಾದಿರಾಜ ಮಠದ ವಿಶ್ವವಲ್ಲಭತೀರ್ಥ ಸ್ವಾಮೀಜಿ ತಿಳಿಸಿದರು. 

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಅನಗತ್ಯ ವಿಳಂಬ ಮಾಡುತ್ತಿದೆ ಎಂಬುದು ಹಿಂದೂಪರ ಸಂಘಟನೆಗಳ ವಾದವಾಗಿದೆ ಎಂದರು. 

ಹಿಂದೂಗಳನ್ನು ಒಟ್ಟುಗೂಡಿಸಿದರೆ ಮಾತ್ರ ಮಂದಿರ ನಿರ್ಮಾಣದ ಕೆಲಸ ಆಗಲು ಸಾಧ್ಯ. ಎಲ್ಲಾ ಹಿಂದೂಗಳು ಒಕ್ಕೊರಲಿನಿಂದ ಮನವಿ ಮಾಡುವಂತಹ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಹಿಂದೂಪರ ಸಂಘಟನೆಗಳು ಒಗ್ಗೂಡಿಸುವ ಕಾರ್ಯ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.