Asianet Suvarna News Asianet Suvarna News

ವಯನಾಡು ಭೂಕುಸಿತ ದುರಂತ: ಮೃತ ಕುಟುಂಬಕ್ಕೆ ಸಾಂತ್ವನ ಹೇಳಿದ ನಿಖಿಲ್; ₹70,000 ಧನ ಸಹಾಯ

ಕೇರಳದಲ್ಲಿ ಪ್ರಕೃತಿ ವಿಕೋಪದಿಂದ ಭೂಕುಸಿತವಾಗಿದೆ. ಕಳೆದೆರಡು ದಿನಗಳಿಂದ ಕಾರ್ಯಾಚರಣೆ ನಡೆಯುತ್ತಲೇ ಇದೆ. ಇದುವರೆಗೆ ಸುಮಾರು 271 ಮಂದಿ ಮೃತಪಟ್ಟಿರುವ ಮಾಹಿತಿ ಇದೆ ಎಂದು ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ತಿಳಿಸಿದರ

Wayanad landslides update JDS Leader Nikhil kumaraswamy visit mandya today rav
Author
First Published Aug 1, 2024, 2:55 PM IST | Last Updated Aug 1, 2024, 3:35 PM IST

ಮಂಡ್ಯ (ಆ.1): ಕೇರಳದಲ್ಲಿ ಪ್ರಕೃತಿ ವಿಕೋಪದಿಂದ ಭೂಕುಸಿತವಾಗಿದೆ. ಕಳೆದೆರಡು ದಿನಗಳಿಂದ ಕಾರ್ಯಾಚರಣೆ ನಡೆಯುತ್ತಲೇ ಇದೆ. ಇದುವರೆಗೆ ಸುಮಾರು 271 ಮಂದಿ ಮೃತಪಟ್ಟಿರುವ ಮಾಹಿತಿ ಇದೆ ಎಂದು ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ತಿಳಿಸಿದರ.

ಇಂದು ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇರಳ ಭೂಕುಸಿತ ದುರಂತದಲ್ಲಿ ಮಂಡ್ಯ ಜಿಲ್ಲೆಯ ಕತ್ತರಘಟ್ಟದ ಲೀಲಾವತಿ ಹಾಗೂ ನಿಹಾಲ್ ಎಂಬವವರು ಮೃತಪಟ್ಟಿದ್ದಾರೆ. ಲೀಲಾವತಿ, ನಿಹಾಲ್ ಕಳೆದುಕೊಂಡು ಮಗಳು ಮಂಜುಳ ದುಃಖಿತರಾಗಿದ್ದಾರೆ. ಅವರಿಗೆ ನೋವು ಭರಿಸುವ ಶಕ್ತಿ ಭಗವಂತ ನೀಡಲಿ. ಇನ್ನು ಇದೇ ಕುಟುಂಬದ ಮೂವರು ಕೇರಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ನಲ್ವತ್ತು ವರ್ಷಗಳಿಂದ ಕೇರಳದಲ್ಲಿ ನೆಲೆಸಿದ್ದರು. ಅವರ ಹೊಸಮನೆಯ ಗೃಹಪ್ರವೇಶ 6 ನೇ ತಾರೀಖು ಆಗಬೇಕಿತ್ತಂತೆ. ಆದರೆ ಭಗವಂತನ ಆಟಕ್ಕೆ ಇಂದು ಬಹಳಷ್ಟು ಜನ ದುರ್ಮರಣಕ್ಕೀಡಾಗಿದ್ದಾರೆ ಮೃತ ಲೀಲಾವತಿ ಕುಟುಂಬದ ಮೂವರನ್ನು ಕರೆತರುವ ಪ್ರಯತ್ನ ಮಾಡುತ್ತೇವೆ ಎಂದರು.

ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷರಾಗ್ತಾರಾ?: ಕುತೂಹಲ ಮೂಡಿಸಿದ ಹರೀಶ್ ಗೌಡ ಹೇಳಿಕೆ..!

ರಾಜ್ಯದಲ್ಲಿ ಹೈಅಲರ್ಟ್:

ಕೇರಳದ ರೀತಿ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹವಮಾನ ಇಲಾಖೆ ಒಂದು ವಾರಗಳ ಕಾಲ ರೆಡ್‌ ಅಲರ್ಟ್ ಘೋಷಿಸಿದೆ. ಹೀಗಾಗಿ ರಾಜ್ಯದ 10-12 ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಬಹುದು. ಭಗವಂತನ ಆಟ. ಯಾರ ಕೈನಲ್ಲೂ ಇಲ್ಲ. ಪ್ರಾಣಹಾನಿ, ಜಾನುವಾರು ಹಾನಿಯಾಗದಂತೆ ಸರ್ಕಾರ ಎಚ್ಚರವಹಿಸಲಿ ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

ಇನ್ನು ಬಿಜೆಪಿ ಮುಡಾ ಪಾದಯಾತ್ರೆಗೆ ಜೆಡಿಎಸ್ ಸಪೋರ್ಟ್ ನೀಡದ ವಿಚಾರ ಸಂಬಂಧ ಸ್ಪಷ್ಟನೆ ನೀಡಿದ ನಿಖಿಲ್ ಕುಮಾರಸ್ವಾಮಿ, ಮಂಡ್ಯ ಕೋರ್ ಕಮಿಟಿ ಸಭೆಯಲ್ಲಿ ಪಾದಯಾತ್ರೆ ಸಂಬಂದ ಚರ್ಚೆಯಾಗಿದೆ. ಎಲ್ಲರೂ ಪಾದಯಾತ್ರೆ ಸದ್ಯಕ್ಕೆ ಬೇಡ ಎಂಬ ಅಭಿಪ್ರಾಯ ತಿಳಿಸಿದ್ದಾರೆ. ಹವಾಮಾನ ಇಲಾಖೆ ಭಾರೀ ಮಳೆಯಾಗುವ ಬಗ್ಗೆ ಮುನ್ನಚ್ಚರಿಕೆ ಕೊಟ್ಟಿದ್ದಾರೆ.
ಇದೆನ್ನೆಲ್ಲ ಮುಂದಿಟ್ಟು ಕೊಂಡು ಪಾದಯಾತ್ರೆ ಬೇಡ ಎಂದು ಅಭಿಪ್ರಾಯವ್ಯಕ್ತವಾಗಿದೆ ಎಂದರು.

ರಾಜ್ಯ ಸರ್ಕಾರ ಹಲವು ಹಗರಣದ ಮೂಲಕ ಹಣ ಲೂಟಿ ಮಾಡ್ತಿದೆ. ಸದನದ ಹೊರಗೆ, ಒಳಗೆ ಬಿಜೆಪಿ-ಜೆಡಿಎಸ್ ಜಂಟಿ ಹೋರಾಟ ಮಾಡಿದ್ದೇವೆ. ಆದರೇ ಈ ಪಾದಯಾತ್ರೆ ಈಗ ಮಾಡುವುದು ಸೂಕ್ತವಲ್ಲ. ಸಾವು ನೋವಿನಿಂದ ಜನರು ನೊಂದಿದ್ದಾರೆ. ಜನರ ಕಣ್ಣೀರನ್ನ ಹೊರೆಸುವ ಕೆಲಸ ಮಾಡಬೇಕಿದೆ. ಬಳಿಕ ಪಾದಯಾತ್ರೆ ಮಾಡಬಹುದು ಎಂಬ ಅಭಿಪ್ರಾಯವಾಗಿದೆ. ಆ ಅಭಿಪ್ರಾಯವನ್ನ ಮಾಧ್ಯಮಗಳ ಮೂಲಕ ಹೊರಹಾಕಿದ್ದೇವೆ. ಕಳೆದ ವರ್ಷ ರಾಜ್ಯಾದ್ಯಂತ ಬರಗಾಲವಿತ್ತು.  ಇದೀಗ ನೆರಯಿಂದ ಬೆಳೆ ನಷ್ಟವಾಗ್ತಿದೆ. ಇನ್ನೂ ಕೆಲ ರೈತರು ಕೃಷಿ ಚಟುವಟಿಕೆ ಪ್ರಾರಂಭ ಮಾಡಿದ್ದಾರೆ. ಇದನ್ನೆಲ್ಲ ಮುಂದಿಟ್ಟುಕೊಂಡು ಪಾದಯಾತ್ರೆಗೆ ಸದ್ಯಕ್ಕೆ ಬೇಡ ಎಂಬ ಅಭಿಪ್ರಾಯವಾಗಿದೆ. ದೇವೇಗೌಡ್ರು, ಕುಮಾರಣ್ಣ ದೆಹಲಿಯಲ್ಲಿದ್ದಾರೆ. ಪಾದಯಾತ್ರೆ ಬಗ್ಗೆ ಎಲ್ಲರೂ ಕೂತು  ಮತ್ತೊಮ್ಮೆ ಚರ್ಚೆ ಮಾಡ್ತೇವೆ ಎಂದರು.

ಮೃತರ ಮನೆಗೆ ನಿಖಿಲ್ ಭೇಟಿ:

ವಯನಾಡ ಭೂಕುಸಿತ ದುರಂತದಲ್ಲಿ ಮೃತಪಟ್ಟ ಕತ್ತರಘಟ್ಟದಲ್ಲಿರುವ ಮೃತರ ಮನೆಗೆ ತೆರಳಿ ಸಾಂತ್ವನ ಹೇಳಿದ ನಿಖಿಲ್ ಕುಮಾರಸ್ವಾಮಿ, ಮೃತರ ಕುಟುಂಬಕ್ಕೆ 70 ಸಾವಿರ ಧನ ಸಹಾಯ ಮಾಡಿದರು. ನಿಖಿಲ್‌ಗೆ ಶಾಸಕ ಹೆಚ್.ಟಿ.ಮಂಜು, ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಹಾಗೂ ಜೆಡಿಎಸ್ ನಾಯಕರು ಉಪಸ್ಥಿತರಿದ್ದರು.

 

ಗ್ಯಾರಂಟಿ ಯೋಜನೆಗೆ ದಲಿತರ ಹಣ ಬಳಕೆ: ರಾಜ್ಯ ಸರ್ಕಾರದ ವಿರುದ್ಧ ಪಾದಯಾತ್ರೆ, ನಿಖಿಲ್ ಕುಮಾರಸ್ವಾಮಿ

ಧೈರ್ಯವಾಗಿ ಇರಿ ನಿಮ್ಮೊಂದಿಗೆ ನಾವು ಇದ್ದೇವೆ. ದುರಂತ ಈಗಾಗಲೇ ನಡೆದು ಹೋಗಿದೆ ಎಂದರು. ಈ ವೇಳೆ ನಮ್ಮವರ ಮೃತ ದೇಹವನ್ನಾದರು ಕೊಡಿಸಿ ಅವರ ಅಂತ್ಯಕ್ರಿಯೆ ಮಾಡುವ ಅವಕಾಶ ಕಲ್ಪಿಸಿಕೊಡಿ ಎಂದು ನಿಖಿಲ್ ಮುಂದೆ ಕಣ್ಣೀರು ಹಾಕಿದ ಕುಟುಂಬಸ್ಥರು. ಮೃತದೇಹಗಳಿಗೆ ಹುಡುಕಾಟ ನಡೆದಿದೆ. ನಾವು ಸಹ ಈ ಬಗ್ಗೆ ಮುತುವರ್ಜಿ ವಹಿಸಿ ಪ್ರಯತ್ನಿಸುತ್ತೇವೆ ಎಂದರು.

Latest Videos
Follow Us:
Download App:
  • android
  • ios