ರಾಜ್ಯದಲ್ಲಿ ಕಾವೇರಿ, ಕೃಷ್ಣ ಸೇರಿ 7 ಪ್ರಮುಖ ನದಿಗಳು, ಅವುಗಳನ್ನು ಸಂಧಿಸುವ 20ಕ್ಕೂ ಹೆಚ್ಚಿನ ಉಪ ನದಿಗಳಿವೆ. ಆ ಪೈಕಿ ಶೇ. 80ಕ್ಕೂ ಹೆಚ್ಚಿನನದಿಗಳು ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಹುಟ್ಟುತ್ತವೆ. ಈ ನದಿಗಳಲ್ಲಿ ಸುಮಾರು 3,700 ಟಿಎಂಸಿಗೂ ಹೆಚ್ಚಿನ ನೀರು ಹರಿಯುತ್ತವೆ. ಆದರೆ, ಮಾಲಿನ್ಯ ನಿಯಂತ್ರಣ ಮಂಡಳಿ ಮಾಹಿತಿಯಂತೆ ಈ ನದಿಗಳ ಪೈಕಿ 13 ನದಿ ಗಳು ಕಲುಷಿತವಾಗಿದೆ.
ಗಿರೀಶ್ ಗರಗ
ಬೆಳಗಾವಿ(ಡಿ.21): ರಾಜ್ಯದ ನಗರ ಪ್ರದೇಶವಲ್ಲದೆ ಗ್ರಾಮೀಣ ಭಾಗದಲ್ಲೂ ನದಿಗಳು ಕಲುಷಿತಗೊಂಡಿದ್ದು, ಅವುಗಳ ನೀರು ಬಳಕೆಗೂ ಮುನ್ನ ಎಚ್ಚರಿಕೆ ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ 13 ನದಿಗಳ ನೀರು ಕಲುಷಿತಗೊಂಡಿದ್ದು, ಶುದ್ದೀಕರಿಸದ ಹೊರತು ಗೃಹಬಳಕೆಗೂ ಸಾಧ್ಯವಿಲ್ಲ ದಂತಾಗಿದೆ ಎಂಬ ಆತಂಕಕಾರಿ ಮಾಹಿತಿ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಹೊರ ಬಿದ್ದಿದೆ.
ರಾಜ್ಯದಲ್ಲಿ ಕಾವೇರಿ, ಕೃಷ್ಣ ಸೇರಿ 7 ಪ್ರಮುಖ ನದಿಗಳು, ಅವುಗಳನ್ನು ಸಂಧಿಸುವ 20ಕ್ಕೂ ಹೆಚ್ಚಿನ ಉಪ ನದಿಗಳಿವೆ. ಆ ಪೈಕಿ ಶೇ. 80ಕ್ಕೂ ಹೆಚ್ಚಿನನದಿಗಳು ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಹುಟ್ಟುತ್ತವೆ. ಈ ನದಿಗಳಲ್ಲಿ ಸುಮಾರು 3,700 ಟಿಎಂಸಿಗೂ ಹೆಚ್ಚಿನ ನೀರು ಹರಿಯುತ್ತವೆ. ಆದರೆ, ಮಾಲಿನ್ಯ ನಿಯಂತ್ರಣ ಮಂಡಳಿ ಮಾಹಿತಿಯಂತೆ ಈ ನದಿಗಳ ಪೈಕಿ 13 ನದಿ ಗಳು ಕಲುಷಿತವಾಗಿದೆ. ಕೈಗಾರಿಕೆ, ಗೃಹ ಬಳಕೆ ತ್ಯಾಜ್ಯ ನೀರು ನದಿಗಳಿಗೆ ಸೇರಿ ನದಿಗಳ ನೀರು ಕಲುಷಿತವಾಗಿ ಬಳಕೆಗೆ ಯೋಗ್ಯವಲ್ಲದಂತಾಗಿದೆ.
ಭಾರತದ ಟಾಪ್ 10 ನದಿಗಳು: ಜೀವನದಿ ಕಾವೇರಿ ಎಷ್ಟನೇ ಸ್ಥಾನದಲ್ಲಿದೆ
ಅರ್ಕಾವತಿ ಹೆಚ್ಚು ಕಲುಷಿತ: ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಯನ ನಡೆಸಿ ಗುರುತಿಸಿರುವಂತೆ ಆರ್ಕಾವತಿ ನದಿ ಅತಿಹೆಚ್ಚು ಕಲು ಷಿತಗೊಂಡಿದೆ. ಕುಡಿಯಲು ಬಳಸುವ ನೀರಿನ ಪೈಕಿ ಲೀಟರ್ ನೀರಿನಲ್ಲಿ ಬಯೋಕೆಮಿಕಲ್ ಆಕ್ಸಿಜನ್ ಡಿಮ್ಯಾಂಡ್ (ಬಿಒಡಿ) ಪ್ರಮಾಣ 5 ಮಿಲಿ ಗ್ರಾಂ ಅಥವಾ ಅದಕ್ಕಿಂತ ಕಡಿಮೆಯಿರಬೇಕು. ಆದರೆ, ಅರ್ಕಾವತಿಯ ಕೆಲ ಭಾಗದಲ್ಲಿ ಬಿಒಡಿ ಪ್ರಮಾಣಪ್ರತಿ ಲೀ.ನಲ್ಲಿ 30 ಮಿಲಿ ಗ್ರಾಂಗಿಂತ ಹೆಚ್ಚಿದೆ. ಭದ್ರಾ, ತುಂಗಭದ್ರಾ, ಶಿಂಷಾ ನದಿಗಳಲ್ಲಿ ಬಿಒಡಿ ಪ್ರಮಾಣ ಪ್ರತಿ ಲೀ.ನಲ್ಲಿ 6ರಿಂದ 10 ಮಿಲಿ ಗ್ರಾಂನಷ್ಟಿದ್ದು, ಉಳಿದ8 ನದಿಗಳಲ್ಲಿ ಬಿಒಡಿ ಪ್ರಮಾಣ ಪ್ರತಿಲೀನಲ್ಲಿ 6 ಮಿಲಿ ಗ್ರಾಂನ ಆಸುಪಾಸಿನಲ್ಲಿದೆ.
693.75 ಕಿ.ಮೀ. ಮಲಿನಯುಕ್ತ ಪ್ರದೇಶ:
ಅಧ್ಯಯನದಂತೆ ರಾಜ್ಯದ 12 ನದಿಗಳ 693.75 ಕಿ. ಮೀ. ಉದ್ದದ ನದಿ ಪ್ರದೇಶ ಮಲಿನಯುಕ್ತವಾಗಿದೆ. ಒಟ್ಟಾರೆ 112 ಕಲ್ಮಷಯುಕ್ತ ಪ್ರದೇಶಗಳನ್ನು ಗುರುತಿ ಸಲಾಗಿದೆ. ಅಲ್ಲದೆ, ತ್ಯಾಜ್ಯ ಸೇರ್ಪಡೆ ಮಾಡು ವುದನ್ನು ತಡೆದು, ನೀರಿನ ಕಲುಷಿತ ಪ್ರಮಾಣ ಕಡಿಮೆ ಮಾಡಲು ಪ್ರತಿದಿನ 817 ಮಿಲಿಯನ್ ಲೀಟರ್ (ಎಂಎಲ್‌ಡಿ) ಶುದ್ದೀಕರಿಸಬೇಕಿದೆ. ಈಗಾ ಗಲೇ 657.69 ಎಂಎಲ್‌ಡಿ ನೀರು ಶುದ್ದೀಕರಿಸಲು 40 ತ್ಯಾಜ್ಯ ನೀರು ಶುದ್ದೀಕರಣ ಘಟಕ (ಎಸ್‌ಟಿಪಿ) ಸ್ಥಾಪಿಸಲಾಗಿದ್ದು, 195.75 ಎಂಎಲ್‌ಡಿ ನೀರು ಶುದ್ದೀಕರಣ ಸಾಮರ್ಥದ 16 ಎಸ್‌ಟಿಪಿ ಸ್ಥಾಪನೆ ಕಾರ್ಯ ಚಾಲನೆಯಲ್ಲಿದೆ. ಇನ್ನೂ 53.28 ಎಂಎಲ್ ಡಿ ನೀರು ಶುದ್ದೀಕರಣದ 15 ಎಸ್‌ಟಿಪಿ ಸ್ಥಾಪನೆಗೆ ಸಂಬಂಧಿಸಿದ ಸಿದ್ಧತೆಗೆ ಚಾಲನೆ ನೀಡಲಾಗಿದೆ.
ಖಂಡ್ರೆ ಸಾಹೇಬ್ರ ಘನಂದಾರಿ ಐಡಿಯಾ, ಪಶ್ಚಿಮಘಟ್ಟದ ನದಿ ನೀರು ಕುಡೀತಾ ಇದ್ರೆ ಬೀಳುತ್ತೆ ಗ್ರೀನ್ ಸೆಸ್!
ದಕ್ಷಿಣ ಪಿನಾಕಿನಿ ನದಿಯೂ ಅಶುದ್ಧ:
12 ನದಿಗಳಷ್ಟೇ ಅಲ್ಲದೆ, ಕಳೆದೆರಡು ವರ್ಷಗಳ ಹಿಂದೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ದಕ್ಷಿಣ ಪಿನಾಕಿನಿ, ಅಘನಾಶಿನಿ, ಶರಾವತಿ ಮತ್ತು ಗಂಗಾವಳಿ ನದಿಗಳೂ ಅಶುದ್ಧವಾಗಿದ್ದು, ಅದರ ಶುದ್ದೀಕರಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಆದರೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕೇಂದ್ರದ ವರದಿಯನ್ನು ಮತ್ತುನದಿಗಳನೀರನ್ನು ಮತ್ತೊಮ್ಮೆ ಪರೀಕ್ಷೆಗೊಳಪಡಿಸಿ ಅಘನಾಶಿನಿ, ಶರಾವತಿ ಮತ್ತು ಗಂಗಾವಳಿ ನದಿಗಳು ಆಶುದ್ದವಾಗಿಲ್ಲ ಎಂಬುದನ್ನು ಪತ್ತೆ ಮಾಡಿ ಮಾಲಿನ್ಯ ನದಿಗಳ ಪಟ್ಟಿಯಿಂದ ಹೊರಗಿಡುವಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ದಕ್ಷಿಣ ಪಿನಾಕಿನಿ ನದಿ ನೀರು ಆಶುದ್ಧವಾಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ನದಿ ನೀರು ಶುದ್ದೀಕರಣಕ್ಕೆ ಸಂಬಂಧಿಸಿ ಕ್ರಿಯಾಯೋಜನೆ ರೂಪಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಅಶುದ್ಧ ನದಿಗಳು
ಕೃಷ್ಣ, ಕಾವೇರಿ, ತುಂಗಭದ್ರಾ, ಭೀಮಾ, ಭದ್ರಾ, ತುಂಗಾ, ಕಬಿನಿ, ಕಾಗಿನಿ, ಶಿಂಷಾ, ಅರ್ಕಾವತಿ, ಲಕ್ಷ್ಮಣತೀರ್ಥ, ನೇತ್ರಾವತಿ, ದಕ್ಷಿಣ ಪಿನಾಕಿನಿ.
