Asianet Suvarna News Asianet Suvarna News

Mandya: ಕೆಆರ್‌ಎಸ್‌ ಒಳಹರಿವಿನಲ್ಲಿ ಹೆಚ್ಚಳ: ಒಂದೇ ದಿನದಲ್ಲಿ ಎರಡು ಅಡಿ ನೀರು ಏರಿಕೆ

ಕಾವೇರಿ ಉಗಮ ಸ್ಥಾನ ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈ​ತರ ಜೀ​ವ​ನಾಡಿಯಾ​ಗಿ​ರುವ ಕೃ​ಷ್ಣ​ರಾ​ಜ​ಸಾ​ಗರ ಜ​ಲಾ​ಶ​ಯದ ಒ​ಳ​ಹ​ರಿ​ವಿನ ಪ್ರ​ಮಾಣ ಹೆ​ಚ್ಚ​ಳ​ವಾ​ಗಿದ್ದು, ಒಂದೇ ದಿ​ನ​ದಲ್ಲಿ ಅಣೆಕಟ್ಟೆಗೆ ಎ​ರಡು ಅಡಿ ನೀರು ಹ​ರಿದು ಬಂದಿ​ದೆ. 

water level increasing in krs dam at mandya gvd
Author
First Published Jul 9, 2023, 10:04 AM IST

ಮಂಡ್ಯ (ಜು.09): ಕಾವೇರಿ ಉಗಮ ಸ್ಥಾನ ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈ​ತರ ಜೀ​ವ​ನಾಡಿಯಾ​ಗಿ​ರುವ ಕೃ​ಷ್ಣ​ರಾ​ಜ​ಸಾ​ಗರ ಜ​ಲಾ​ಶ​ಯದ ಒ​ಳ​ಹ​ರಿ​ವಿನ ಪ್ರ​ಮಾಣ ಹೆ​ಚ್ಚ​ಳ​ವಾ​ಗಿದ್ದು, ಒಂದೇ ದಿ​ನ​ದಲ್ಲಿ ಅಣೆಕಟ್ಟೆಗೆ ಎ​ರಡು ಅಡಿ ನೀರು ಹ​ರಿದು ಬಂದಿ​ದೆ. ಕ​ಳೆದ ಮೂ​ರ್ನಾಲ್ಕು ದಿ​ನ​ಗ​ಳಿಂದ ಕೊಡಗು ಜಿಲ್ಲೆಯಲ್ಲಿ ವ್ಯಾ​ಪಕ ಮಳೆ ಸು​ರಿ​ಯು​ತ್ತಿ​ರುವ ಕಾ​ರಣ ಕೆ​ಆರ್‌ಎಸ್‌ ಅ​ಣೆ​ಕ​ಟ್ಟೆಗೆ ಹರಿದುಬರುತ್ತಿರುವ ನೀರಿನ ಪ್ರ​ಮಾಣದಲ್ಲಿ ಹೆ​ಚ್ಚ​ಳ​ವಾ​ಗಿದೆ. ಅಣೆಕಟ್ಟೆಗೆ ಶನಿವಾರ ಬೆಳಗ್ಗೆ 13449 ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, ನೀರಿನ ಮಟ್ಟ 82 ಅಡಿಗೆ ಏರಿಕೆಯಾಗಿದೆ. ಅಣೆಕಟ್ಟೆಯ ನೀರಿನ ಸಂಗ್ರಹ 3.316 ಟಿಎಂಸಿ ಅಡಿಗೆ ಏರಿದೆ.

ಶುಕ್ರವಾರ ಬೆಳಿಗ್ಗೆ ಜಲಾಶಯದಲ್ಲಿ 79.50 ಅಡಿ ನೀರಿತ್ತು, ಸಂಜೆ ವೇಳೆಗೆ 80.40 ತಲುಪಿತ್ತು, ಇದೀಗ ಎರಡು ಅಡಿ ನೀರು ಹೆಚ್ಚಳವಾಗಿದೆ. ಕಳೆದ ವರ್ಷ ಇದೇ ದಿನ ಅಣೆಕಟ್ಟೆಯಲ್ಲಿ 119.44 ಅಡಿ ನೀರು ಸಂಗ್ರಹವಾಗಿತ್ತು. ಅಂದು ಅಣೆಕಟ್ಟೆಗೆ 38858 ಕ್ಯುಸೆಕ್‌ ನೀರು ಹರಿದುಬರುತ್ತಿದ್ದರೆ, ಅಣೆಕಟ್ಟೆಯಿಂದ 3453 ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿತ್ತು. ಅಂದು ಜಲಾಶಯದಲ್ಲಿ 33.964 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಉತ್ತಮ ಮಳೆಯಾಗಿ ಈ ವೇಳೆಗೆ ಉತ್ತಮ ಒಳಹರಿವು ದಾಖಲಾಗುತ್ತಿತ್ತು. ಆದರೆ ಈ ವರ್ಷ ಮುಂಗಾರು ದುರ್ಬಲದಿಂದ ಮಳೆ ಕೊರತೆಯಾಗಿದ್ದರಿಂದ ಜಲಾಶಯದಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕುಸಿದಿತ್ತು. 

ಮತ್ತೆ ಸರ್ಕಾರದ ವಿರುದ್ಧ ಸಿಡಿದ್ದೆದ್ದ ಅಂಗನವಾಡಿ ‌ಕಾರ್ಯಕರ್ತೆಯರು: ನಾಳೆಯಿಂದ ಪ್ರತಿಭಟನೆ

ಡೆಡ್‌ ಸ್ಟೋರೇಜ್‌ ಮಟ್ಟತಲುಪುವ ಸ್ಥಿತಿಯಲ್ಲಿತ್ತು. ಇದೀಗ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಒಂದೇ ದಿನದಲ್ಲಿ ಎರಡು ಅಡಿ ನೀರು ಹರಿದು ಬಂದಿರುವುದು ರೈತರಲ್ಲಿ ಮಂದಹಾಸ ಮೂಡಿಸಿದೆ. ಈ ಬಾರಿ ಮುಂಗಾರು ಬಿ​ತ್ತ​ನೆಗೆ ಮಳೆ ಅ​ಡ್ಡಿ​ಯಾ​ಗು​ತ್ತದೆ ಎಂಬ ಆ​ತಂಕ ರೈ​ತ​ರಲ್ಲಿ ಮನೆ ಮಾ​ಡಿದ್ದು, ಪೂರ್ವ ಮುಂಗಾರು ಕೈ​ಕೊಟ್ಟಕಾ​ರಣ ಜಿಲ್ಲೆಯಲ್ಲಿ ಕೃಷಿ ಚ​ಟು​ವ​ಟಿ​ಕೆಗೆ ತೀವ್ರ ಹಿ​ನ್ನಡೆ ಉಂಟಾ​ಗಿತ್ತು. ಜಲಾಶಯದಲ್ಲಿರುವ ನೀರನ್ನು ಕು​ಡಿ​ಯುವ ಉ​ದ್ದೇ​ಶಕ್ಕೆ ಮಾತ್ರ ಬಳಸಲು ಕಾ​ಯ್ದಿ​ರಿ​ಸ​ಲಾ​ಗಿತ್ತು. ಇ​ದೀಗ ಕೆಆರ್‌ಎಸ್‌ ಒ​ಡ​ಲಿಗೆ ಹೆ​ಚ್ಚಿನ ನೀರು ಹ​ರಿ​ದು​ಬ​ರು​ತ್ತಿ​ರು​ವುದು ತುಸು ಸ​ಮಾ​ಧಾನ ಮೂ​ಡಿ​ಸಿದೆ.

ರಾಹುಲ್‌ ಕೇಸಲ್ಲಿ ‘ಕೈ’ ಹೋರಾಟ ಕೋರ್ಟ್‌ ವಿರುದ್ಧವೇ: ಪ್ರಲ್ಹಾದ್‌ ಜೋಶಿ ಪ್ರಶ್ನೆ

ಈ ಮಧ್ಯೆ ತ​ಮಿ​ಳು​ನಾಡು ಕೇಂದ್ರ ಜ​ಲ​ಸಂಪ​ನ್ಮೂಲ ಇ​ಲಾ​ಖೆಗೆ ಮ​ನವಿ ಮಾಡಿ ಜೂನ್‌ ತಿಂಗಳ ನೀ​ರನ್ನು ಕರ್ನಾಟ​ಕ​ದಿಂದ ಬಿ​ಡು​ಗಡೆ ಮಾ​ಡಿ​ಸು​ವಂತೆ ಒ​ತ್ತಾ​ಯಿಸಿ ಮ​ನವಿ ಸ​ಲ್ಲಿ​ಸಿತ್ತು. ಈ ಬಗ್ಗೆ ಜಲ ಸಂಪ​ನ್ಮೂಲ ಇ​ಲಾಖೆ ಸ​ಚಿ​ವರು ಶೀಘ್ರ ಅ​ಧಿ​ಕಾ​ರಿ​ಗಳ ಸಭೆ ಕ​ರೆದು ನೀ​ರಿನ ಸಂಗ್ರ​ಹದ ಕು​ರಿತು ಮಾ​ಹಿತಿ ಪ​ಡೆದು ಮುಂದಿನ ನಿರ್ಧಾರ ಕೈ​ಗೊ​ಳ್ಳುವ ಬಗ್ಗೆ ಭ​ರ​ವಸೆ ನೀ​ಡಿ​ದ್ದರು. ಇ​ದೀಗ ಒಳ ಹ​ರಿ​ವಿನ ಪ್ರ​ಮಾಣ ಹೆ​ಚ್ಚಿರು​ವುದು ತ​ಮಿ​ಳು​ನಾ​ಡಿಗೂ ನೀ​ರೊ​ದ​ಗಿ​ಸುವ ಭ​ರ​ವಸೆ ಮೂ​ಡಿ​ಸಿದೆ. ಇನ್ನು 124.80 ಗರಿಷ್ಠ ಮಟ್ಟ ಹಾಗೂ 49.452 ಟಿಎಂಸಿ ಸಾಮಾರ್ಥ್ಯದ ಡ್ಯಾಂನಲ್ಲಿ 12.915 ಟಿಎಂಸಿ ನೀರಿದೆ. ಡ್ಯಾಂನ ಒಳಹರಿವು 14,556 ಕ್ಯೂಸೆಕ್ ಇದ್ದು, ಡ್ಯಾಂ ಹೊರಹರಿವು  367 ಕ್ಯೂಸೆಕ್ ಇದೆ.

Follow Us:
Download App:
  • android
  • ios