'ವಕ್ಪ್ ಆಸ್ತಿ ಜಮೀರ್ ಅವರಪ್ಪಂದಲ್ಲ..'; ಸಿಟಿ ರವಿ ಹೇಳಿಕೆಗೆ ಜಮೀರ್ ಅಹ್ಮದ್ ಕೌಂಟರ್!
ವಕ್ಫ್ ಆಸ್ತಿ ಯಾರಪ್ಪನ ಸ್ವತ್ತಲ್ಲ ಅದು ಸರ್ಕಾರದ ಆಸ್ತಿಯೂ ಅಲ್ಲ, ಪೂರ್ವಿಕರು ದಾನಿಗಳು ಕೊಟ್ಟಿರುವ ಆಸ್ತಿ. ಇದರಲ್ಲಿ ಕೆಲವು ಒತ್ತುವರಿಯಾಗಿದೆ ಅದೆಲ್ಲ ಸರಿಪಡಿಸಿದ್ದೇವೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.
ವಿಜಯನಗರ (ಅ.10): ವಕ್ಫ್ ಆಸ್ತಿ ಯಾರಪ್ಪನ ಸ್ವತ್ತಲ್ಲ ಅದು ಸರ್ಕಾರದ ಆಸ್ತಿಯೂ ಅಲ್ಲ, ಪೂರ್ವಿಕರು ದಾನಿಗಳು ಕೊಟ್ಟಿರುವ ಆಸ್ತಿ. ಇದರಲ್ಲಿ ಕೆಲವು ಒತ್ತುವರಿಯಾಗಿದೆ ಅದೆಲ್ಲ ಸರಿಪಡಿಸಿದ್ದೇವೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.
ಇಂದು ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ವಕ್ಪ್ ಆಸ್ತಿ ನಮ್ಮಪ್ಪಂದು ಅಲ್ಲ, ಯತ್ನಾಳ್ ಅವರಪ್ಪಂದೂ ಅಲ್ಲ ಅಂತ ನಾನು ಈ ಹಿಂದೆಯೇ ಯತ್ನಾಳ್ ಅವರಿಗೆ ಹೇಳಿದ್ದೇನೆ. ಒಂದಿಂಚೂ ಕೂಡ ನಾವು ಸರ್ಕಾರದ ಆಸ್ತಿ ತಗೊಂಡಿಲ್ಲ. ಸಮಾಜಕ್ಕೆ ಒಳ್ಳೆಯದಾಗಲಿ ಅಂತ ದಾನಿಗಳು ನೀಡಿರುವ ಆಸ್ತಿಯಾಗಿದೆ. ರಾಜ್ಯದಲ್ಲಿ 1 ಲಕ್ಷ 12 ಸಾವಿರ ಎಕರೆ ವಕ್ಪ್ ಬೋರ್ಡ್ ಆಸ್ತಿ ಇದೆ. ಆ ಪೈಕಿ 84 ಸಾವಿಕ್ಕೂ ಹೆಚ್ಚು ಎಕರೆ ಆಸ್ತಿ ತಾಂತ್ರಿಕ ಸಮಸ್ಯೆ ಇದೆ. ಇದಕ್ಕಾಗಿ ವಕ್ಫ್ ಅದಾಲತ್ ನಡೆಸಿ ಸರಿಪಡಿಸುವ ಕೆಲಸ ಮಾಡಿದ್ದೇನೆ ಎಂದರು.
ರಾಜ್ಯದಲ್ಲೇ ವಿಜಯಪುರದಲ್ಲಿದೆ ಹೆಚ್ಚು ವಕ್ಫ್ ಆಸ್ತಿ: ಸಚಿವ ಜಮೀರ್ ಅಹ್ಮದ್
ಸಿಟಿ ರವಿ ಹೇಳಿಕೆಗೆ ತಿರುಗೇಟು;
ಜಮೀರ್ ಅವರಪ್ಪಂದಿರು ಯಾರೂ ಮೂಲ ನಿವಾಸಿಗಳಲ್ಲ ಮತ್ತು ವಕ್ಪ್ ಆಸ್ತಿ ಜಮೀರ್ ಅವಪ್ಪಂದಲ್ಲಾ ಎಂಬ ಸಿಟಿ ರವಿ ಹೇಳಿಕೆ ಪ್ರಸ್ತಾಪಿಸಿದ ಸಚಿವ ಜಮೀರ್ ಅಹ್ಮದ್ ಖಾನ್, ಸಿಟಿ ರವಿ ಅಷ್ಟೆಲ್ಲ ಮಾತಾಡ್ತರಲ್ಲಾ, ಮುಜರಾಯಿ ಇಲಾಖೆಗೆ ಸೇರಿದ 680 ಎಕರೆ ಜಾಗವೂ ಒತ್ತುವರಿಯಾಗಿದೆ. ಅದನ್ನ ಸಿಟಿ ಸರಿಪಡಿಸೋಕೆ ಹೇಳಿ, ಅವರು ಎರಡು ಬಾರಿ ಸಚಿವರಾಗಿದ್ರು. ಅದೆಲ್ಲ ಸರಿಪಡಿಸೋ ಕೆಲಸ ಮಾಡಬಹುದಿತ್ತಿಲ್ಲಾ? ಮುಜರಾಯಿ ಇಲಾಖೆ, ವಕ್ಪ್ ಆಸ್ತಿ ಎಲ್ಲ ದೇವರ ಆಸ್ತಿ ಅವು. ಎರಡು ಬಾರಿ ಅವರ ಸರ್ಕಾರ ಇದ್ರೂ ಮುಜುರಾಯಿ ಇಲಾಖೆ ಒತ್ತುವರಿ ಜಾಗವನ್ನು ಸರಿಪಡಿಸೋಕೆ ಆಗಿಲ್ಲ. ಬರೀ ಭಾಷಣ ಮಾಡ್ಕೊಂಡು ಓಡಾಡೋದಲ್ಲ. ಸಿಟಿ ರವಿ ಕೈಯಲ್ಲಿ ಆಗಿಲ್ಲಲ್ಲಂದ್ರೆ ಮುಜರಾಯಿ ಇಲಾಖೆ ಆಸ್ತಿ ಸಮಸ್ಯೆ ನಾನೇ ಬಗೆಹರಿಸುತ್ತೇನೆ ಎಂದು ತಿರುಗೇಟು ನೀಡಿದರು.
ದಲಿತ ಸಿಎಂ ಕೂಗು ಇಲ್ಲ:
ರಾಜ್ಯ ರಾಜಕಾರಣದಲ್ಲಿ ದಲಿತ ಸಿಎಂ ಕೂಗು ಕೇಳಿಬರುತ್ತಿರುವ ಹಿನ್ನೆಲೆ ಈ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಜಮೀರ್ ಅಹ್ಮದ್ ಖಾನ್, ಯಾವ ಕೂಗು ಇಲ್ಲ. ಸಚಿವರೆಲ್ಲ ಒಂದು ಕಡೆ ಸೇರಿ ಊಟ ಮಾಡೋದು ತಪ್ಪ? ಸತೀಶ್ ಜಾರಕಿಹೊಳಿ, ಗೃಹ ಸಚಿವ ಪರಮೇಶ್ವರ್, ಡಾ ಹೆಚ್‌ಸಿ ಮಹದೇವಪ್ಪ ಒಂದೆಡೆ ಊಟಕ್ಕೆ ಸೇರಿದ್ದರು ಅಷ್ಟೆ ಅದರಲ್ಲೇನು ತಪ್ಪಿದೆ? ನಾನು ಮೊನ್ನೆ ವಿಜಯಪುರದಲ್ಲಿ, ಶಿವಾನಂದ ಪಾಟೀಲ್ ಸೇರಿದಂತೆ ಹಲವು ಶಾಸಕರನ್ನು ಭೇಟಿ ಮಾಡಿದ್ದೆ. ಹಾಗಂತ ನಾನು ಇನ್ನೊಂದು ಬಣ ಕಟ್ಟಿಕೊಂಡಿದ್ದೇನೆ ಅಂತ ಅರ್ಥನಾ? ನಾವು ಒಟ್ಟಿಗೆ ಊಟ ಮಾಡಿದ್ದೇವೆ ಅದು ತಪ್ಪಲ್ಲ, ಸತೀಶ್ ಜಾರಕಿಹೊಳಿ ಏನು ಸ್ಪೆಷಲ್? ನಾನು, ಅವರೂ ಸಚಿವರೇ ತಾನೆ? ಜಾರಕಿಹೊಳಿ ಸದ್ಯ ಸಿಎಂ ಖುರ್ಚಿ ಖಾಲಿ ಇಲ್ಲಾ ಅಂತ ಹೇಳಿದ್ದಾರೆ. ಸಿದ್ದರಾಮಯ್ಯನವರು 5 ವರ್ಷಗಳ ಕಾಲ ಸಿಎಂ ಅಂತಾನೇ ಹೇಳಿದ್ದಾರೆ. ವೇಣುಗೋಪಾಲ ಅವರೇ ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲಾ ಅಂತ ಹೇಳಿದ್ದಾರೆ. ಅವರೇ ನಮ್ಮ ಹೈಕಮಾಂಡ್ ಹೀಗಿರುವಾಗ ಸಿಎಂ ಬದಲಾವಣೆ ಪ್ರಶ್ನೆ ಎಲ್ಲಿ ಬಂತು? ಎಂದು ಪ್ರಶ್ನಿಸಿದರು.
'ವಕ್ಫ್ ಆಸ್ತಿ ಯತ್ನಾಳ್ ಅಪ್ಪಂದು ಅಲ್ಲ..'; ಸಚಿವ ಜಮೀರ್ ಹೇಳಿಕೆಗೆ ಯತ್ನಾಳ್ ತಿರುಗೇಟು
ಟಗರು ಅಲ್ಲಾಡೊಲ್ಲ: ವಿಜಯೇಂದ್ರಗೆ ತಿರುಗೇಟು:
ದಸರಾ ನಂತರ ಸರ್ಕಾರ ಪಥ ಬದಲಾವಣೆ ಆಗುತ್ತದೆ ಎಂಬ ಬಿವೈ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಹೇಳಿದಂತೆ ಏನೂ ಆಗೊಲ್ಲ. ಟಗರು ಅಲ್ಲಾಡೊಲ್ಲ, ಆಚೆ, ಈಚೆ ಅಲ್ಲಾಡೊಲ್ಲ ಏನಿದ್ರೂ ನೇರನೇ. ವಿಜಯೇಂದ್ರ ಹಗಲುಗನಸು ಕಾಣುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯನವರ ಪಾಪ್ಯೂಲಾರಿಟಿ ಸಹಿಸಿಕೊಳ್ಲೋಕೆ ಆಗ್ತಿಲ್ಲಾ. ಸಿದ್ದರಾಮಯ್ಯರನ್ನು ಡಿಸ್ಟಾರ್ಬ್ ಮಾಡಿದ್ರೆ ಕಾಂಗ್ರೆಸ್ ಪಕ್ಷವನ್ನು ಡಿಸ್ಟಾರ್ಬ್ ಮಾಡಿದಹಾಗೆ ಅಂತ ಲೆಕ್ಕಾಚಾರ ಹಾಕಿದ್ದಾರೆ. ಆದರೆ ಸಿದ್ದರಾಮಯ್ಯರನ್ನು ಅಲುಗಾಡಿಸೋಕೆ ಆಗೊಲ್ಲ. ದೇವರಾಜು ಅರಸು ಆದ ಮೇಲೆ ಎರಡನೇ ಬಾರಿ ಸಿಎಂ ಆದವರು ಸಿದ್ದರಾಮಯ್ಯನವರು. ಅಂತವರನ್ನು ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದವರು ಏನು ಮಾಡೋಕೆ ಸಾಧ್ಯ? ಬಿಜೆಪಿಗೆ ಜನರು ಪೂರ್ಣಬಹುಮತ ಕೊಟ್ಟಿಲ್ಲಾ, ಮುಂದೆನೂ ರಾಜ್ಯದ ಜನ ಬಹುಮತ ಕೊಡೋಲ್ಲಾ ಬಿಜೆಪಿ ಮನೆಯೊಂದು ಮೂರು ಬಾಗಿಲು ಆಗಿದೆ. ಆದರೆ ಕಾಂಗ್ರೆಸ್ ಒಂದೇ ಮನೆ ಆಗಿದೆ ಎಂದು ಲೇವಡಿ ಮಾಡಿದರು.