Video viral: ಹಮಾಸ್ ಉಗ್ರರನ್ನು 'ದೇಶಪ್ರೇಮಿಗಳು' ಎಂದು ಕರೆದ ಮಂಗಳೂರು ವ್ಯಕ್ತಿ!
ಇಸ್ರೇಲ್ ಮತ್ತು ಪ್ಯಾಲೇಸ್ತೇನ್ ನಡುವಿನ ಯುದ್ದ ತಾರಕಕ್ಕೇರಿದೆ. ಹಮಾಸ್ ಉಗ್ರರು ಸಾವಿರಾರು ಅಮಾಯಕರ ಜೀವ ಬಲಿ ಪಡೆದಿದ್ದಾರೆ. ಆದರೆ ಮಂಗಳೂರಿನ ವ್ಯಕ್ತಿಯೊಬ್ಬ ಹಮಾಸ್ ಉಗ್ರರನ್ನು 'ದೇಶಪ್ರೇಮಿಗಳು' ಎಂದು ಕರೆದು ವಿಡಿಯೋ ಮಾಡಿ ಹರಿಬಿಟ್ಟು ವಿವಾದ ಸೃಷ್ಟಿಸಿದ್ದಾನೆ.
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು (ಅ.14): ಇಸ್ರೇಲ್ ಮತ್ತು ಪ್ಯಾಲೇಸ್ತೇನ್ ನಡುವಿನ ಯುದ್ದ ತಾರಕಕ್ಕೇರಿದೆ. ಹಮಾಸ್ ಉಗ್ರರು ಸಾವಿರಾರು ಅಮಾಯಕರ ಜೀವ ಬಲಿ ಪಡೆದಿದ್ದಾರೆ. ಆದರೆ ಮಂಗಳೂರಿನ ವ್ಯಕ್ತಿಯೊಬ್ಬ ಹಮಾಸ್ ಉಗ್ರರನ್ನು 'ದೇಶಪ್ರೇಮಿಗಳು' ಎಂದು ಕರೆದು ವಿಡಿಯೋ ಮಾಡಿ ಹರಿಬಿಟ್ಟು ವಿವಾದ ಸೃಷ್ಟಿಸಿದ್ದಾನೆ.
ಸಾಮಾಜಿಕ ತಾಣಗಳಲ್ಲಿ ಮಂಗಳೂರಿನ ಝಾಕೀರ್ ಎಂಬಾತನ ವಿಡಿಯೋ ವೈರಲ್(Video viral) ಆಗಿದೆ. ಮಂಗಳೂರಿನ ಬಂದರು ರಸ್ತೆಯ ಝಾಕೀರ್ ಎಂಬಾತನ ವಿಡಿಯೋ ಇದಾಗಿದ್ದು, 'ದೇಶಪ್ರೇಮಿ ಹಮಾಸ್ ಯೋಧರಿಗೆ ವಿಜಯವಾಗಲಿ' ಎಂದು ಹೇಳಿದ್ದಾನೆ. ಮಸೀದಿಯ ಶುಕ್ರವಾರದ ನಮಾಜ್ ನಲ್ಲಿ ಪ್ರಾರ್ಥಿಸಿ ಅಂದಿರೋ ಝಾಕೀರ್, ತಾನು ವಿಶ್ವ ಖಬ್ರುಸ್ತಾನ್ ಪ್ರೇಮಿ ಸಂಘದ ಸದಸ್ಯ ಅಂತ ಹೇಳಿಕೊಂಡಿದ್ದಾನೆ.
ಇಸ್ರೇಲ್ ಸರ್ಜಿಕಲ್ ದಾಳಿ: ಗಾಜಾ ಉಗ್ರರ ಬಳಿ ಇದ್ದ 250 ಒತ್ತೆಯಾಳು ರಕ್ಷಣೆ; 60 ಹಮಾಸ್ ಉಗ್ರರ ಹತ್ಯೆ
ಪ್ಯಾಲೆಸ್ತೀನ್, ಗಾಜಾ ಹಾಗೂ ದೇಶಪ್ರೇಮಿ ಹಮಾಸ್ ಯೋಧರಿಗೆ ವಿಜಯವಾಗಲು ಪ್ರಾರ್ಥಿಸಿ ಎಂದು ಮನವಿ ಮಾಡಿರೋ ಆತ, ಶುಕ್ರವಾರದ ನಮಾಜ್ ನಲ್ಲಿ ಪ್ರತ್ಯೇಕವಾಗಿ ಪ್ರಾರ್ಥಿಸಿ ಅಂತ ವಿಶ್ವ ಖಬ್ರುಸ್ತಾನ್ ಪ್ರೇಮಿ ಸಂಘದ ಸದಸ್ಯರಿಗೆ ಕರೆ ಕೊಟ್ಟಿದ್ದಾನೆ. ಸದ್ಯ ಉಗ್ರರಿಗೆ ಬೆಂಬಲ ಕೊಡುವ ಇವನ ಮೇಲೆ ಮಂಗಳೂರು ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳಲಿ ಎಂದು ವಿಶ್ವಹಿಂದೂ ಪರಿಷತ್ ಭಜರಂಗದಳ ಆಗ್ರಹಿಸಿದೆ. ಅಧಿಕಾರಿಗಳೇ ದೇಶಪ್ರೇಮಿಗಳು ಎಚ್ಚೆತುಗೊಂಡು ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ಮಾಡಿ ಕೊಡಬೇಡಿ. ಕೊಡಲೇ ಇವನ ಬಂಧನವಾಗಲಿ ಎಂದು ವಿಎಚ್ ಪಿ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಎಚ್ಚರಿಕೆ ನೀಡಿದ್ದಾರೆ.
ತನ್ನ ಕೆಣಕಿದವರ ಜಾಗ ಖಾಲಿ ಮಾಡಿಸಿದ ಇಸ್ರೇಲ್, ಗಾಜಾ ಪ್ರಜೆಗಳಿಗೆ ಊರುಬಿಡಲು ಐಡಿಎಫ್ ಆರ್ಡರ್!
ಪೌರತ್ವ ಕಾಯ್ದೆ ಗಲಭೆಯಲ್ಲೂ ವಿಡಿಯೋ ಹರಿಬಿಟ್ಟಿದ್ದ!
ಮಂಗಳೂರಿನ ಬಂದರು ಪ್ರದೇಶದ ಜುಮ್ಮಾ ಮಸೀದಿ ರಸ್ತೆಯ ಝಾಕೀರ್, 2019ರಲ್ಲೂ ಇದೇ ರೀತಿ ವಿಡಿಯೋ ಮಾಡಿ ಹರಿಬಿಟ್ಟಿದ್ದ. ಪೌರತ್ವ ಕಾಯ್ದೆ ವಿರುದ್ದ ಭಾರೀ ಪ್ರತಿಭಟನೆ ನಡೆಸಲು ಕರೆ ಕೊಟ್ಟಿದ್ದ ಝಾಕೀರ್ ನ ಆ ವಿಡಿಯೋ, ಅಂದು ಮಂಗಳೂರು ಗಲಭೆಗೂ ಮುನ್ನ ವೈರಲ್ ಆಗಿತ್ತು. ಗಲಭೆ ಪೀಡಿತ ಬಂದರು ಪ್ರದೇಶದ ಮಸೀದಿ ಬಳಿಯೇ ನಿಂತು ಕರೆಕೊಟ್ಟಿದ್ದ ಝಾಕೀರ್, 2019ರ ಡಿ.20ರ ಶುಕ್ರವಾರ ನೆಹರೂ ಮೈದಾನಕ್ಕೆ ಬರುವಂತೆ ಕರೆ ಕೊಟ್ಟಿದ್ದ. ಆ ಬಳಿಕ ಸಿಎಎ ಪ್ರತಿಭಟನೆ ಮಂಗಳೂರಿನಲ್ಲಿ ಭಾರೀ ಗಲಭೆ ಸೃಷ್ಟಿಸಿತ್ತು.