ಕುಡಿದು ಗಲಾಟೆ ಮಾಡುವ ಪುಂಡರಿಗೆ ಪೊಲೀಸರು ಲಾಠಿ ಏಟು ಕೊಟ್ಟು ಬುದ್ಧಿ ಕಲಿಸುವುದು ನೋಡಿದ್ದೀರಿ. ಆದರೆ ಇಲ್ಲೊಬ್ಬ ಕುಡುಕ ಪೊಲಿಸಪ್ಪ ಕಂಠಪೂರ್ತಿ ಕುಡಿದು ಬಾರ್‌ ಸಿಬ್ಬಂದಿ ಮೇಲೆಯೇ ಹಲ್ಲೆಗೆ ಮಾಡಲು ಯತ್ನಿಸಿರು ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರ (ನ.12): ಕುಡಿದು ಗಲಾಟೆ ಮಾಡುವ ಪುಂಡರಿಗೆ ಪೊಲೀಸರು ಲಾಠಿ ಏಟು ಕೊಟ್ಟು ಬುದ್ಧಿ ಕಲಿಸುವುದು ನೋಡಿದ್ದೀರಿ. ಆದರೆ ಇಲ್ಲೊಬ್ಬ ಕುಡುಕ ಪೊಲಿಸಪ್ಪ ಕಂಠಪೂರ್ತಿ ಕುಡಿದು ಬಾರ್‌ ಸಿಬ್ಬಂದಿ ಮೇಲೆಯೇ ಹಲ್ಲೆಗೆ ಮಾಡಲು ಯತ್ನಿಸಿರು ಘಟನೆ ಕೋಲಾರದಲ್ಲಿ ನಡೆದಿದೆ.

ಕುಡಿದು ರಂಪಾಟ ಮಾಡಿರುವ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ASI ನಾರಾಯಣಸ್ವಾಮಿ. ಕೋಲಾರ ನಗರದ ಬಂಗಾರಪೇಟೆ ಸರ್ಕಲ್ ನಲ್ಲಿರುವ ಸಾಮ್ರಾಟ್ ಅಶೋಕ ಬಾರ್ ಬಳಿ ನಡೆದಿರುವ ಘಟನೆ. ಕಳೆದ ರಾತ್ರಿ ನಡೆದ ಘಟನೆ. ಬಾರ್‌ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪುರಾತತ್ವ ಇಲಾಖೆ ಅನುಮತಿ ಪಡೆಯದೇ ಹಂಪಿ ವಿರೂಪಾಕ್ಷೇಶ್ವರ ದೇಗುಲ ಕಂಬಕ್ಕೆ ಮೊಳೆ ಹೊಡೆದ ಧಾರ್ಮಿಕ ದತ್ತಿ ಇಲಾಖೆ!

ಕಾನೂನು ಪರಿಪಾಲನೆ ಮಾಡಬೇಕಾದ ಪೋಲಿಸಪ್ಪನಿಂದಲೇ ಗುಂಡಾ ವರ್ತನೆ. ಕ್ಷುಲ್ಲಕ ವಿಚಾರಕ್ಕೆ ಅವಾಚ್ಯ ಶಬ್ದಗಳಿಂದ ನಿಂಧಿಸಿ ಕಲ್ಲಿನಿಂದ ಹೊಡೆಯಲು ಮುಂದಾಗಿದ್ದ ಎಎಸ್‌ಐ. ಗಲಾಟೆ ವಿಡಿಯೋ ಮೊಬೈಲ್‌ನಲ್ಲಿ ಸೆರೆ ಹಿಡಿದಿರುವು ಬಾರ್‌ ಸಿಬ್ಬಂದಿ. ಪೊಲೀಸಪ್ಪನ ವಿರುದ್ಧ ಶಿಸ್ತು ಕ್ರಮಕ್ಕೆ ಎಸ್‌ಪಿಗೆ ದೂರು ನೀಡಿರುವ ಕೋಲಾರ ಬಾರ್ ಅಸೋಸಿಯೇಷನ್ ಅಧ್ಯಕ್ಷ ಚಲಪತಿ ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ.

ವರ್ಷಪೂರ್ತಿ ಸುವರ್ಣ ಸಂಭ್ರಮದಲ್ಲಿ ಕರ್ನಾಟಕ: ಕನ್ನಡ ಜ್ಯೋತಿ ರಥಯಾತ್ರೆಗೆ ಹಂಪಿಯಲ್ಲಿಂದು ಸಿಎಂ ಚಾಲನೆ