ದಲಿತ ಕುಟುಂಬಕ್ಕೆ ಹಿಂಸೆ: ನಿಷ್ಷಕ್ಷಪಾತ ತನಿಖೆಗೆ ಸಿದ್ದು ಆಗ್ರಹ
ಚಿಕ್ಕಮಗಳೂರು ತಾಲೂಕಿನ ಹುಣಸೆಹಳ್ಳಿಪುರದ ಎಸ್ಟೇಟ್‌ನಲ್ಲಿ ಕೆಲಸಕ್ಕಿದ್ದ ದಲಿತ ಕುಟುಂಬದ 10 ಮಂದಿಯನ್ನು ಎಸ್ಟೇಟ್ ಮಾಲೀಕರು ಕೂಡಿ ಹಾಕಿ ಹಿಂಸಿಸಿರುವ ಘಟನೆ ಬಗ್ಗೆ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಿ ನೊಂದವರಿಗೆ ನ್ಯಾಯ ಒದಗಿಸಬೇಕು.
ಬೆಂಗಳೂರು (ಅ.13): ಚಿಕ್ಕಮಗಳೂರು ತಾಲೂಕಿನ ಹುಣಸೆಹಳ್ಳಿಪುರದ ಎಸ್ಟೇಟ್‌ನಲ್ಲಿ ಕೆಲಸಕ್ಕಿದ್ದ ದಲಿತ ಕುಟುಂಬದ 10 ಮಂದಿಯನ್ನು ಎಸ್ಟೇಟ್ ಮಾಲೀಕರು ಕೂಡಿ ಹಾಕಿ ಹಿಂಸಿಸಿರುವ ಘಟನೆ ಬಗ್ಗೆ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಿ ನೊಂದವರಿಗೆ ನ್ಯಾಯ ಒದಗಿಸಬೇಕು. ಜತೆಗೆ ತಕ್ಷಣ ಗೃಹ ಸಚಿವರು ಸ್ಥಳಕ್ಕೆ ಭೇಟಿ ನೀಡಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಾಸಕ ಸಿ.ಟಿ.ರವಿ ಮತ್ತು ಬಿಜೆಪಿಯವರ ಬೆಂಬಲ ತಮಗೆ ಇದೆ ಎನ್ನುವ ದರ್ಪದಲ್ಲಿ ಎಸ್ಟೇಟ್ ಮಾಲೀಕರಿಂದ ಈ ದೌರ್ಜನ್ಯ ನಡೆಸಲಾಗಿದೆ.
ದಲಿತ ಕಾರ್ಮಿಕ ಕುಟುಂಬವನ್ನು ಶೌಚಾಲಯವೂ ಇಲ್ಲದ ಮನೆಯೊಳಗೆ ಇಡೀ ದಿನ ಕೂಡಿ ಹಾಕಲಾಗಿದೆ. ಮಕ್ಕಳು, ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗಿದ್ದು ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ದೂರು ದಾಖಲಾಗಿದ್ದರೂ ಆರೋಪಿಗಳನ್ನು ಬಂಧಿಸಿಲ್ಲ. ಬಂಧಿಸುವುದಿರಲಿ ಸೂಕ್ತ ವಿಚಾರಣೆಯನ್ನೂ ನಡೆಸಿಲ್ಲ. ಬಿಜೆಪಿ ಸರ್ಕಾರವೇ ಆರೋಪಿಗಳ ಪರ ನಿಂತಿರುವುದರಿಂದ ಸಂತ್ರಸ್ತರೇ ಜೀವ ಭಯದಲ್ಲಿದ್ದಾರೆ ಎಂದು ಆರೋಪಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಆಕರ್ಷಕ ಮಾತುಗಳಿಂದ ದಲಿತ ಕೂಲಿ ಕಾರ್ಮಿಕರನ್ನು ಮರುಳು ಮಾಡುವ ಬಿಜೆಪಿಯವರು ಈಗ ಅವರ ಮೇಲೆ ಕ್ರೌರ್ಯ, ದೌರ್ಜನ್ಯ ನಡೆದಾಗಲೂ ಅವರ ರಕ್ಷಣೆಗೆ ನಿಲ್ಲುತ್ತಿಲ್ಲ. ಕಾರ್ಮಿಕರು ಸಾಮೂಹಿಕವಾಗಿ ಸರ್ಕಾರದ ವಿರುದ್ಧ ತಿರುಗಿ ಬೀಳುವ ಮೊದಲು ಅವರ ಸಂಕಷ್ಟಗಳಿಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸಬೇಕು. ಮೇಲಿಂದ ಮೇಲೆ ನಡೆಯುವ ದೌರ್ಜನ್ಯಗಳಿಗೆ ತಡೆ ಬೀಳಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಆಡಳಿತದಿಂದ ಭಯದಲ್ಲಿ ಬದುಕುವ ವಾತಾವರಣ: ಸಿದ್ದರಾಮಯ್ಯ
ದಲಿತ ಕಾರ್ಮಿಕ ಕುಟುಂಬದ ಮೇಲೆ ನಡೆದಿರುವ ದೌರ್ಜನ್ಯಕ್ಕೆ ನೆಪ ಮಾತ್ರದ ಕೇಸು ದಾಖಲಿಸಿ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಸರ್ಕಾರದ ನಾಟಕದ ವಿರುದ್ಧ ಎಸ್ಟೇಟ್ ಕಾರ್ಮಿಕರು ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪಕ್ಕದ ಕ್ಷೇತ್ರದವರೇ ಆಗಿದ್ದಾರೆ. ಆದರೆ ಇದುವರೆಗೂ ಸಂತ್ರಸ್ಥ ಕುಟುಂಬಗಳನ್ನು ಭೇಟಿ ಮಾಡಿ ಅವರಿಗೆ ಧೈರ್ಯ ತುಂಬುವ, ಪರಿಹಾರ ದೊರಕಿಸಿಕೊಡುವ ಕಾರ್ಯ ಮಾಡಿಲ್ಲ. ಆದ್ದರಿಂದ ತಕ್ಷಣ ಗೃಹ ಸಚಿವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಎಲೆಕ್ಷನ್ ವೇಳೆ ಬಿಜೆಪಿಗೆ ದಲಿತರು ನೆನಪಾಗ್ತಾರೆ: ಎಲೆಕ್ಷನ್ ವೇಳೆ ಬಿಜೆಪಿಗೆ ದಲಿತರು ನೆನಪಾಗ್ತಾರೆ. ಇದುವರೆಗೂ ಆ ಸಮುದಾಯಗಳಿಗೆ ಏನು ಕೆಲಸ ಮಾಡಿಲ್ಲವೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವಿಜಯನಗರದಲ್ಲಿ ದಲಿತ ಕೇರಿಗೆ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್‌ವೈ, ಸಚಿವ ಕಾರಜೋಳ ಭೇಟಿ ಕುರಿತಂತೆ ಬುಧವಾರ ಚಳ್ಳಕೆರೆ ತಾಲೂಕಿನ ಗಿರಿಯಮ್ಮನಹಳ್ಳಿಯಲ್ಲಿ ಪ್ರತಿಕ್ರಿಯಿಸಿದ ಅವರು, ಇನ್ಮೇಲೆ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಬಳಿ ಹೆಚ್ಚು ಹೋಗುತ್ತಾರೆ ಎಂದರು. ರಾಯಚೂರಿನಲ್ಲಿ ಮತಾಂತರಗೊಂಡ ದಲಿತ ಕುಟುಂಬದ ಮನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ದೇಶಿತ ಭೇಟಿಯ ರದ್ದು ಮಾಡಿರುವುದು,
ರಾಗಾ ಪಾದಯಾತ್ರೆ 15ಕ್ಕೆ ಬಳ್ಳಾರಿ, 21-22ಕ್ಕೆ ರಾಯಚೂರಿಗೆ ಪ್ರವೇಶ: ಸಿದ್ದರಾಮಯ್ಯ
ಬಿಜೆಪಿ ದ್ವೇಷ ಮತ್ತು ಧರ್ಮದ ರಾಜಕಾರಣ ಮಾಡುತ್ತಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಬಿಜೆಪಿ ಹಿಂದುತ್ವದ ರಾಜಕಾರಣ ಮಾಡುತ್ತಿದ್ದು, ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸುವ ಸಂಕಲ್ಪ ಹೊಂದಿದೆ. ಎಲ್ಲಾ ಸಮುದಾಯವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವುದು ಆ ಪಕ್ಷಕ್ಕೆ ಬೇಕಿಲ್ಲವೆಂದರು. ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಮಾಡುತ್ತಿದೆ. ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತ ಜನರ ಮನಸ್ಸು ಒಡೆಯುತ್ತಿದೆ. ಭ್ರಷ್ಟಾಚಾರದಲ್ಲಿ ಮುಳುಗಿದ್ದರೂ ಜನಜಾಗೃತಿಗಾಗಿ ಯಾತ್ರೆ ಮಾಡುತ್ತಿದೆ. ಸುಳ್ಳು ಹೇಳುವುದೇ ಸುಳ್ಳು ಹೇಳುವುದೇ ಬಿಜೆಪಿ ಕೆಲಸವೆಂದು ಸಿದ್ದರಾಮಯ್ಯ ಆರೋಪಿಸಿದರು.