ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಮೊತ್ತ ಪಾವತಿಗೆ ನೀಡಿರುವ ಶೇಕಡ 50ರಷ್ಟುವಿನಾಯಿತಿ ಸೌಲಭ್ಯ ಶನಿವಾರ ಅಂತ್ಯಗೊಳ್ಳುವ ಹಿನ್ನೆಲೆಯಲ್ಲಿ ಶುಕ್ರವಾರ ಒಂದೇ ದಿನ ರಾಜಧಾನಿಯಲ್ಲಿ 6.70 ಲಕ್ಷ ಪ್ರಕರಣಗಳಿಂದ ಬರೋಬ್ಬರಿ .17.61 ಕೋಟಿ ಬಾಕಿ ದಂಡ ಸಂಗ್ರಹವಾಗಿದೆ.

ಬೆಂಗಳೂರು (ಫೆ.11) : ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಮೊತ್ತ ಪಾವತಿಗೆ ನೀಡಿರುವ ಶೇಕಡ 50ರಷ್ಟುವಿನಾಯಿತಿ ಸೌಲಭ್ಯ ಶನಿವಾರ ಅಂತ್ಯಗೊಳ್ಳುವ ಹಿನ್ನೆಲೆಯಲ್ಲಿ ಶುಕ್ರವಾರ ಒಂದೇ ದಿನ ರಾಜಧಾನಿಯಲ್ಲಿ 6.70 ಲಕ್ಷ ಪ್ರಕರಣಗಳಿಂದ ಬರೋಬ್ಬರಿ .17.61 ಕೋಟಿ ಬಾಕಿ ದಂಡ ಸಂಗ್ರಹವಾಗಿದೆ.

ಈ ಮುಖಾಂತರ ಕಳೆದ ಎಂಟು ದಿನಗಳಲ್ಲಿ 31.11 ಲಕ್ಷ ಪ್ರಕರಣಗಳಿಂದ ಒಟ್ಟು .85.83 ಕೋಟಿ ಬಾಕಿ ದಂಡ ಸಂಗ್ರಹವಾಗಿದೆ. ಒಮ್ಮೆಗೆ ಮಾತ್ರ ಕಲ್ಪಿಸಿರುವ ಬಾಕಿ ದಂಡ ಪಾವತಿಗೆ ಶೇ.50ರ ವಿನಾಯಿತಿ ಸೌಲಭ್ಯ ಶನಿವಾರ ಅಂತ್ಯವಾಗಲಿದ್ದು, ಕೊನೆಯ ದಿನ .20 ಕೋಟಿಗೂ ಅಧಿಕ ಬಾಕಿ ದಂಡ ಮೊತ್ತ ಸಂಗ್ರಹವಾಗುವ ನಿರೀಕ್ಷೆಯಿದೆ.

ಸಂಚಾರ ನಿಯಮ ಉಲ್ಲಂಘನೆ: 7ನೇ ದಿನ ₹12.36 ಕೋಟಿ ಸಂಗ್ರಹ!

ಶುಕ್ರವಾರ ನಗರ ಸಂಚಾರ ಪೊಲೀಸ್‌ ಠಾಣೆಗಳು ಹಾಗೂ ಪ್ರಮುಖ ರಸ್ತೆಗಳಲ್ಲಿ 3.51 ಲಕ್ಷ ಪ್ರಕರಣಗಳಿಂದ .8.55 ಕೋಟಿ, ಪೇಟಿಎಂ ಮುಖಾಂತರ 1.90 ಲಕ್ಷ ಪ್ರಕರಣಗಳಿಂದ .5.77 ಕೋಟಿ, ಟಿಎಂಸಿ ಕೌಂಟರ್‌ನಲ್ಲಿ 1,095 ಪ್ರಕರಣಗಳಿಂದ .2.88 ಲಕ್ಷ, ಬೆಂಗಳೂರು ಒನ್‌ ವೆಬ್‌ಪೋರ್ಟಲ್‌ನಲ್ಲಿ 1.27 ಲಕ್ಷ ಪ್ರಕರಣಗಳಿಂದ .3.25 ಕೋಟಿ ಸೇರಿದಂತೆ ಒಟ್ಟು 6.70 ಲಕ್ಷ ಪ್ರಕರಣಗಳಿಂದ .17.61 ಕೋಟಿ ಬಾಕಿ ದಂಡ ಸಂಗ್ರಹವಾಗಿದೆ.

ನಗರದ ಉಪ್ಪಾರ ಪೇಟೆ, ಹೈಗ್ರೌಂಡ್‌್ಸ, ಕಬ್ಬನ್‌ ಪಾರ್ಕ್, ಅಶೋಕ ನಗರ, ಬ್ಯಾಟರಾಯನಪುರ, ಕೆಂಗೇರಿ, ಯಶವಂತಪುರ, ಯಲಹಂಕ ಸೇರಿದಂತೆ ಬಹುತೇ ಸಂಚಾರ ಪೊಲೀಸ್‌ ಠಾಣೆಗಳ ಬಳಿ ಬೆಳಗ್ಗೆ 8ರಿಂದಲೇ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ದಂಡ ಪಾವತಿಗೆ ಸರತಿ ಸಾಲಿನಲ್ಲಿ ನಿಂತಿದ್ದರು. ಟಿಎಂಸಿ ಕೌಂಟರ್‌ ಬಳಿಯೂ ಸಾರ್ವಜನಿಕರ ದಟ್ಟಣೆ ಹೆಚ್ಚಿತ್ತು. ಪೇಟಿಎಂ ಆನ್‌ಲೈನ್‌, ಬೆಂಗಳೂರು ಒನ್‌ ವೆಬ್‌ಪೋರ್ಟಲ್‌ನಲ್ಲಿ ದಂಡ ಪಾವತಿಸುವವರ ಸಂಖ್ಯೆ ಕಳೆದ ಏಳು ದಿನಕ್ಕಿಂತ ಹೆಚ್ಚಾಗಿತ್ತು.