ಇತಿಹಾಸ ಪ್ರಸಿದ್ಧ ಜಗದ್ವಿಖ್ಯಾತ ಮೈಸೂರು ದಸರಾ ಹಬ್ಬಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಮೈಸೂರು ದಸರಾ ಎಂದಿನಂತೆ ಕಳೆ ಇಲ್ಲದಾಗಿ. ಒಂದು ಮೈಸೂರು ಕಡೆ ದಸರಾ ಇನ್ನೊಂದೆಡೆ ಅದಕ್ಕೆ ವಿರುದ್ಧವಾಗಿ ಮಹಿಷಾ ದಸರಾ, ಚಾಮುಂಡಿಬೆಟ್ಟಕ್ಕೆ ಭಕ್ತರ ನಿಷೇಧ, ಮೈಸೂರು ನಗರಾದ್ಯಂತ 144 ಸೆಕ್ಷನ್ ಜಾರಿ ಇವೆಲ್ಲವುಗಳ ನಡುವೆ ಅವಘಡ ಸಂಭವಿಸಿದೆ.

ಮೈಸೂರು (ಅ.13): ಇತಿಹಾಸ ಪ್ರಸಿದ್ಧ ಜಗದ್ವಿಖ್ಯಾತ ಮೈಸೂರು ದಸರಾ ಹಬ್ಬಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಮೈಸೂರು ದಸರಾ ಎಂದಿನಂತೆ ಕಳೆ ಇಲ್ಲದಾಗಿ. ಒಂದು ಮೈಸೂರು ಕಡೆ ದಸರಾ ಇನ್ನೊಂದೆಡೆ ಅದಕ್ಕೆ ವಿರುದ್ಧವಾಗಿ ಮಹಿಷಾ ದಸರಾ, ಚಾಮುಂಡಿಬೆಟ್ಟಕ್ಕೆ ಭಕ್ತರ ನಿಷೇಧ, ಮೈಸೂರು ನಗರಾದ್ಯಂತ 144 ಸೆಕ್ಷನ್ ಜಾರಿ ಇವೆಲ್ಲವುಗಳ ನಡುವೆ ಅವಘಡ ಸಂಭವಿಸಿದೆ.

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಹಾಕಲಾಗಿದ್ದ ವಿದ್ಯುತ್ ದೀಪಾಲಂಕಾರದ ಕಮಾನು ಇದ್ದಕ್ಕಿದ್ದಂತೆ ಮುರಿದುಬಿದ್ದಿದೆ ಘಟನೆ ಮೈಸೂರಿನ ಮಣಿಪಾಲ್ ಆಸ್ಪತ್ರೆ ಜಂಕ್ಷನ್‌ನಲ್ಲಿ ನಡೆದಿದೆ. ಕಮಾನು ಮುರಿದು ಬಸ್‌ಗಳ ಮೇಲೆ ಬಿದ್ದು ಗಾಜುಗಳು ಪುಡಿಪುಡಿಯಾಗಿವೆ. ಕೆಎಸ್‌ಆರ್‌ಪಿ ಹಾಗೂ ಖಾಸಗಿ ಬಸ್‌ಗಳು ಜಖಂಗೊಂಡಿವೆ. ಘಟನೆಯಿಂದ ಟ್ರಾಫಿಕ್ ಜಾಮ್ ಆಗಿ ಕೆಲ ಕಾಲ ವಾಹನ ಸಂಚಾರಕ್ಕೆ ತೊಡಕುಂಟಾಯಿತು.

ಜೈ ಮಹಿಷಾ ಘೊಷಣೆ ಕೂಗುತ್ತಾ ಮೈಸೂರಿನತ್ತ ಹೊರಟ ದಲಿತ ಸಂಘಟನೆ ಕಾರ್ಯಕರ್ತರು!

ಕೆಎಸ್‌ಆರ್‌ಟಿಸಿ ಬಸ್ ಅಪಘಾತ 20ಕ್ಕೂ ಹೆಚ್ಚು ಮಂದಿಗೆ ಗಾಯ:

ಖಾಸಗಿ ಬಸ್ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಮಧ್ಯೆ ಅಪಘಾತ ಅಪಘಾತ ಸಂಭವಿಸಿದ್ದು, ಸುಮಾರು 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಮೈಸೂರಿನ ಮಣಿಪಾಲ ಆಸ್ಪತ್ರೆ ಸಿಗ್ನಲ್ ಬಳಿ ನಡೆದಿದೆ.

ಬಸ್ ನಿಯಂತ್ರಿಸುವ ಧಾವಂತದಲ್ಲಿ ಕೆಎಸ್ಆರ್‌ಟಿಸಿ ಬಸ್‌ಗೆ ಡಿಕ್ಕಿಯಾದ ಖಾಸಗಿ ಬಸ್. ಮುಂದೆ ಹೋಗುತ್ತಿದ್ದ ಇನ್ನೋವಾ ಕಾರಿಗೂ ಡಿಕ್ಕಿ. ಅಪಘಾತದಲ್ಲಿ ಗಾಯಗೊಂಡ ಪ್ರಯಾಣಿಕರನ್ನು ಸಮೀಪದ ಮಣಿಪಾಲ ಆಸ್ಪತ್ರೆ ಹಾಗೂ ನಾರಾಯಣ ಹೃದಯಾಲಯಕ್ಕೆ ರವಾನಿಸಿದ ಪೊಲೀಸರು. ಸ್ಥಳದಲ್ಲಿ ಟ್ರಾಫಿಕ್ ಜಾಮ್.

ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿಷೇಧ; ಜಿಲ್ಲಾಡಳಿತ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸುತ್ತೇವೆ: ಜ್ವಾನಪ್ರಕಾಶ ಸ್ವಾಮೀಜಿ