ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿಷೇಧ; ಜಿಲ್ಲಾಡಳಿತ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸುತ್ತೇವೆ: ಜ್ವಾನಪ್ರಕಾಶ ಸ್ವಾಮೀಜಿ

ಮಹಿಷಾನಿಗೆ ಪುಷ್ಪಾರ್ಚನೆ ಮಾಡಲು ನಮಗೆ ಅವಕಾಶ ಕೊಡಬೇಕು. ಇಲ್ಲದಿದ್ರೆ ಅಟ್ರಾಸಿಟಿ ಕೇಸ್ ದಾಖಲಿಸುತ್ತೇವೆ ಎಂದು ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿಷೇಧಿಸಿರುವ ಜಿಲ್ಲಾಡಳಿತದ ವಿರುದ್ಧ ಜ್ಞಾನಪ್ರಕಾಶ ಸ್ವಾಮೀಜಿ ಎಚ್ಚರಿಕೆ ನೀಡಿದರು.

Ban on entry to Chamundibetta issue Jnan Prakash Swamiji's outrage against the district administration rav

ಮೈಸೂರು (ಅ.13) :  ಮಹಿಷಾನಿಗೆ ಪುಷ್ಪಾರ್ಚನೆ ಮಾಡಲು ನಮಗೆ ಅವಕಾಶ ಕೊಡಬೇಕು. ಇಲ್ಲದಿದ್ರೆ ಅಟ್ರಾಸಿಟಿ ಕೇಸ್ ದಾಖಲಿಸುತ್ತೇವೆ ಎಂದು ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿಷೇಧಿಸಿರುವ ಜಿಲ್ಲಾಡಳಿತದ ವಿರುದ್ಧ ಜ್ಞಾನಪ್ರಕಾಶ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಮೈಸೂರಿನಲ್ಲಿ ಸುವರ್ಣನ್ಯೂಸ್ ಏಷಿಯಾನೆಟ್ ಪ್ರತಿನಿಧಿಯೊಂದಿಗೆ ಮಾತನಾಡಿದ ಸ್ವಾಮೀಜಿ, ಚಾಮುಂಡಿಬೆಟ್ಟದಲ್ಲಿ ಅಸ್ಪೃಶ್ಯತೆ ಇದೆ. ಎಸ್ಸಿ,ಎಸ್ಟಿಗಳು ಇಲ್ಲಿನ ಮೂಲನಿವಾಸಿಗಳು. ಅವರಿಗೆ ಅವಕಾಶವನ್ನ ನಿರಾಕರಣೆ ಮಾಡಲಾಗುತ್ತಿದೆ. ಇಂದು ಸಂಜೆ 6 ಗಂಟೆಯವರೆಗೆ ಕಾಯುತ್ತೇವೆ. ಇಂದು ಮಹಿಷಾ ದರ್ಶನಕ್ಕೆ ಅವಕಾಶ ಕೊಡಲೇಬೇಕು ಇಲ್ಲದಿದ್ರೆ ಜಿಲ್ಲಾಡಳಿತದ ವಿರುದ್ಧ ದೂರು ದಾಖಲಿಸುತ್ತೇವೆ ಎಂದರು.

ಚಾಮುಂಡಿಬೆಟ್ಟಕ್ಕೆ ಪ್ರವೇಶ ನಿಷೇಧ; ಟೌನ್‌ಹಾಲ್‌ಗೆ ಸೀಮಿತವಾದ ಮಹಿಷಾ ದಸರಾ

ನಾವು ಕಾನೂನಿಗೆ ಗೌರವ ಕೊಡುತ್ತೇವೆ. ಜಿಲ್ಲಾಡಳಿತದ ಆಜ್ಞೆಯಾನುಸಾರ ನಾವು ಕಾರ್ಯಕ್ರಮ ಮಾಡುತ್ತೇವೆ. ಸಾಮೂಹಿಕ ಬೌದ್ಧ ಧರ್ಮ ದೀಕ್ಷೆ ಕಾರ್ಯಕ್ರಮ ನಡೆಯುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡಲು ನಿಷೇಧಾಜ್ಞೆ ಹಾಕಿದ್ದಾರೆ. ಆದರೆ ಸಂಘರ್ಷದ ಬಗ್ಗೆ ಮಾತನಾಡಿದವರ ವಿರುದ್ಧ ಕ್ರಮ ಯಾಕೆ ಇಲ್ಲ. ಇದೆಲ್ಲವನ್ನು ನಾನು ಕೋರ್ಟ್‌ನಲ್ಲಿ ಪ್ರಶ್ನೆ ಮಾಡುತ್ತೇನೆ ಎಂದು ಆಕ್ರೋಶ ಹೊರಹಾಕಿದ ಸ್ವಾಮೀಜಿ.
 

Latest Videos
Follow Us:
Download App:
  • android
  • ios