ಬೆಂಗಳೂರು(ಡಿ.28): ರಾಜ್ಯದಲ್ಲಿ ಇದೀಗ ಮತ್ತೆ ದಲಿತ ಸಿಎಂ ವಿಷಯ ಪ್ರಸ್ತಾಪವಾಗಿದೆ. ಆದರೆ ಈ ಬಾರಿ ದಲಿತ ಸಿಎಂ ಕುರಿತು ಪ್ರಸ್ತಾಪಿಸಿದ್ದು ಖುದ್ದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್.

ಬೆಂಗಳೂರಿನಲ್ಲಿ ನಡೆದ ಬಸವಲಿಂಗಪ್ಪ ಸ್ಮರಣೆ ಕಾರ್ಯಕ್ರಮದಲ್ಲಿ ದಿನೇಶ್ ದಲಿತ ಸಿಎಂ ಕುರಿತು ಪ್ರಸ್ತಾಪಿಸಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆ 2004, 2008ರಲ್ಲೇ ಸಿಎಂ ಆಗಬೇಕಿತ್ತು. ಅವಗಾಲೇ ಖರ್ಗೆ ರಾಜ್ಯದ ಮೊದಲ ದಲಿತ ಸಿಎಂ ಆದ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದರು ಎಂದು ಹೇಳಿದರು.

"

ಆದರೆ ಮುಂದಿನ ದಿನಗಳಲ್ಲಿ ಈ ರಾಜ್ಯ ದಲಿತ ಸಿಎಂ ಅವರನ್ನು ಖಂಡಿತ ನೋಡಲಿದೆ ಎಂದು ದಿನೇಶ್ ವಿಶ್ವಾಸ ವ್ಯಕ್ತಪಡಿಸಿದರು.