ವಿಹಿಂಪ-60 ವರ್ಷ: ದೇಶಾದ್ಯಂತ 1 ಲಕ್ಷ ಸಮಿತಿ ರಚಿಸುವ ಗುರಿ!

ವಿಶ್ವಹಿಂದು ಪರಿಷತ್‌ಗೆ 60 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಇಡೀ ದೇಶದಲ್ಲಿ ವಿಹಿಂಪದ 1 ಲಕ್ಷ ಸಮಿತಿಗಳನ್ನು ರಚಿಸುವ ಗುರಿ ಹೊಂದಲಾಗಿದೆ ಎಂದು ವಿಹಿಂಪ ಕೇಂದ್ರೀಯ ಸಹ ಪ್ರಧಾನ ಕಾರ್ಯದರ್ಶಿ ಸ್ಥಾನು ಮಾಲಯನ್ ಹೇಳಿದರು.

VHP 60 years Aim to form 1 lakh VHP committees across the countrysays sthanu malayan rav

ಮಂಗಳೂರು: ವಿಶ್ವಹಿಂದು ಪರಿಷತ್‌ಗೆ 60 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಇಡೀ ದೇಶದಲ್ಲಿ ವಿಹಿಂಪದ 1 ಲಕ್ಷ ಸಮಿತಿಗಳನ್ನು ರಚಿಸುವ ಗುರಿ ಹೊಂದಲಾಗಿದೆ ಎಂದು ವಿಹಿಂಪ ಕೇಂದ್ರೀಯ ಸಹ ಪ್ರಧಾನ ಕಾರ್ಯದರ್ಶಿ ಸ್ಥಾನು ಮಾಲಯನ್ ಹೇಳಿದರು.

ಬುಧವಾರ ಮಂಗಳೂರಿನ ವಿಹಿಂಪ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1964ರಲ್ಲಿ ಮುಂಬೈನ ಸಾಂದೀಪನಿ ಆಶ್ರಮದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ದಿನ ಪ್ರಾರಂಭವಾದ ವಿಶ್ವ ಹಿಂದು ಪರಿಷತ್ತಿಗೆ 60 ವರ್ಷ ತುಂಬುತ್ತಿದೆ. ದೇಶದಾದ್ಯಂತ ಹಲವು ಹಿಂದು ಜಾಗೃತಿ ಹಾಗೂ ಸೇವಾ ಕಾರ್ಯಕ್ರಮಗಳನ್ನು ವರ್ಷ ಪೂರ್ತಿ ಹಮ್ಮಿಕೊಂಡಿದೆ. ಭಾರತ ಮತ್ತು 30 ವಿವಿಧ ದೇಶಗಳಲ್ಲಿ ವಿಶ್ವ ಹಿಂದು ಪರಿಷತ್ತಿನ ಕಾರ್ಯ ನಡೆಯುತ್ತಿದೆ. ಈಗಾಗಲೇ ದೇಶದ 46 ಸಾವಿರ ಗ್ರಾಮಗಳಲ್ಲಿ 78 ಸಾವಿರ ಸಮಿತಿಗಳ ಮುಖಾಂತರ ವಿಶ್ವ ಹಿಂದು ಪರಿಷತ್ ನಿರಂತರ ಹಿಂದು ಸಮಾಜದ ಉನ್ನತಿಗಾಗಿ ಕೆಲಸ ಮಾಡುತ್ತಿದೆ. ಷಷ್ಠಿ ಪೂರ್ತಿಯ ಹಿನ್ನೆಲೆಯಲ್ಲಿ ಬುಧವಾರದಿಂದ ಹೊಸ ಸಮಿತಿ ರಚನೆ ಸಹಿತ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ ಎಂದರು.

 

'ಅಖಂಡ ಭಾರತದ ಕನಸು ಶೀಘ್ರ ನನಸು' ಯುವ ಸಮೂಹಕ್ಕೆ ಆರ್‌ಎಸ್‌ಎಸ್‌ ಮುಖ್ಯಸ್ಥ ಭಾಗವತ್‌ ಭರವಸೆ

ಈ ವರ್ಷ ಎಲ್ಲ ಜಿಲ್ಲಾ, ತಾಲೂಕು, ಗ್ರಾಮಗಳಲ್ಲಿ ನೂರಾರು ಸೇವಾ ಕಾರ್ಯಕ್ರಮ, ಸಂಸ್ಕಾರ ಕೇಂದ್ರಗಳು ಹಾಗೂ ಸಾಮಾಜಿಕ ಕಾರ್ಯಗಳನ್ನು ಯೋಜನೆ ಮಾಡಲಾಗಿದೆ. ಹಿಂದು ಸಮಾಜ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು , ಸಮಾಜದ ಜಾಗರಣೆಯ ಮುಖಾಂತರ ಆ ಸವಾಲುಗಳಿಗೆ ಉತ್ತರ ನೀಡಲಾಗುವುದು ಎಂದರು.

ಅಕ್ಟೋಬರ್‌ನಲ್ಲಿ ಬಜರಂಗದಳ ಶೌರ್ಯ ಜಾಗರಣ ರಥ ಯಾತ್ರೆ:

ವಿಶ್ವಹಿಂದು ಪರಿಷತ್‌ನ(VHP) ಷಷ್ಠಿ ಪೂರ್ತಿ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ದೇಶದಾದ್ಯಂತ ಶೌರ್ಯ

ಜಾಗರಣ ರಥ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಯುವಕರಲ್ಲಿ ರಾಷ್ಟ್ರಭಕ್ತಿಯ ಜಾಗೃತಿ ಮೂಡಿಸಿ ಸಮಾಜದ ಉಳಿವಿಗೋಸ್ಕರ ರಾಷ್ಟ್ರಕಾರ್ಯದಲ್ಲಿ ಜೋಡಿಸಲು ಬಜರಂಗದಳದ ನೇತೃತ್ವದಲ್ಲಿ ರಥಯಾತ್ರೆ ನಡೆಯಲಿದೆ. ನಶಾ ಮುಕ್ತ ಭಾರತ ಅಭಿಯಾನವೂ ಈ ವೇಳೆ ನಡೆಯಲಿದೆ. ಕರ್ನಾಟಕದಲ್ಲಿ ಸೆ. 25 ರಂದು ಚಿತ್ರದುರ್ಗದಲ್ಲಿ ಶೌರ್ಯ ಜಾಗರಣ ರಥಯಾತ್ರೆ ಉದ್ಘಾಟನೆಗೊಳ್ಳಲಿದ್ದು, ಅ. 10ರಂದು ಉಡುಪಿಯಲ್ಲಿ ಸಮಾರೋಪಗೊಳ್ಳಲಿದೆ. ಈ ರಥಯಾತ್ರೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಲಿದ್ದು, ಪ್ರತಿ ಜಿಲ್ಲೆಗಳಲ್ಲಿ ಶೋಭಾಯಾತ್ರೆ ಮತ್ತು ಸಾರ್ವಜನಿಕ ಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್, ವಿಭಾಗ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಮಂಗಳೂರು ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ್ ಇದ್ದರು.

ಹಿಂದು ವಿರೋಧಿ ಹೇಳಿಕೆ ವಿರುದ್ಧ ಜಾಗೃತಿ

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್(Udayanidhi stalin sanatana dharma remark) ಸನಾತನ ಧರ್ಮದ ಬಗ್ಗೆ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ವಿಶ್ವಹಿಂದು ಪರಿಷತ್(VHP Udayanidhi stalin) ಬಲವಾಗಿ ಖಂಡಿಸುತ್ತದೆ. ಕಮ್ಯುನಿಸ್ಟ್, ಕ್ರಿಶ್ಚಿಯನ್ ಚಿಂತನೆಯಿಂದ ಪ್ರೇರಿತರಾಗಿ ಅವರು ಈ ಹೇಳಿಕೆ ನೀಡಿದ್ದಾರೆ. ಉದಯನಿಧಿ ಹೇಳಿಕೆಯನ್ನು ಕರ್ನಾಟಕದ ಗೃಹ ಸಚಿವರು ಸಹಿತ ಕಾಂಗ್ರೆಸ್‌ನ ಕೆಲವು ನಾಯಕರು ಬೆಂಬಲಿಸಿದ್ದು ಕೂಡ ಖಂಡನೀಯ. ಈ ಹೇಳಿಕೆಯ ವಿರುದ್ಧ ಇಡೀ ದೇಶದಲ್ಲಿ ಹಿಂದುಗಳನ್ನು ಜಾಗೃತಿ ಮಾಡುವ ಕೆಲಸವನ್ನು ವಿಶ್ವ ಹಿಂದು ಪರಿಷತ್ ಮಾಡಲಿದೆ ಎಂದು ಸ್ಥಾನು ಮಾಲಯನ್ ಹೇಳಿದರು.

ಅಖಂಡ ಭಾರತವನ್ನು ಮತ್ತೆ ಒಗ್ಗೂಡಿಸುವುದೇ ನಮ್ಮ ಗುರಿ: ವಿಹೆಚ್‌ಪಿ, ಬಜರಂಗದಳ ಸಂಕಲ್ಪ

ಪ್ರಾಚೀನ ಕಾಲದಿಂದಲೂ ನಮ್ಮ ದೇಶವನ್ನು ಭಾರತ ಎಂದೇ ಕರೆಯಲಾಗುತ್ತಿತ್ತು. ಬ್ರಿಟಿಷರು ಆಗಮಿಸಿದ ಬಳಿಕ ಇಂಡಿಯಾ ಪದ ಬಳಕೆ ಆರಂಭಗೊಂಡಿತು. ಹಾಗಾಗಿ ದೇಶದ ಹೆಸರನ್ನು ''''ಭಾರತ'''' ಎಂದು ಕರೆಯುವ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ಎಂದರು.

Latest Videos
Follow Us:
Download App:
  • android
  • ios