Rajashekhar Mansoor Passed Away: ಪ್ರಸಿದ್ಧ ಹಿಂದೂಸ್ತಾನಿ ಗಾಯಕ ರಾಜಶೇಖರ್ ಮನ್ಸೂರ್ ನಿಧನ
ಪಂ.ಮಲ್ಲಿಕಾರ್ಜುನ ಮನ್ಸೂರ್ ಅವರ ಪುತ್ರ, ಪ್ರಸಿದ್ಧ ಹಿಂದೂಸ್ತಾನಿ ಗಾಯಕ ಪಂ.ರಾಜಶೇಖರ್ ಮನ್ಸೂರ್ (79) ಅವರು ಭಾನುವಾರ ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ ಪತ್ನಿ, ಮೂವರು ಪುತ್ರಿಯರು ಇದ್ದಾರೆ.
ಧಾರವಾಡ (ಮೇ.02): ಪಂ.ಮಲ್ಲಿಕಾರ್ಜುನ ಮನ್ಸೂರ್ (Mallikarjun Mansoor) ಅವರ ಪುತ್ರ, ಪ್ರಸಿದ್ಧ ಹಿಂದೂಸ್ತಾನಿ ಗಾಯಕ ಪಂ.ರಾಜಶೇಖರ್ ಮನ್ಸೂರ್ (Rajashekhar Mansoor) (79) ಅವರು ಭಾನುವಾರ ಬೆಂಗಳೂರಿನಲ್ಲಿ ನಿಧನರಾದರು (Passed Away). ಅವರಿಗೆ ಪತ್ನಿ, ಮೂವರು ಪುತ್ರಿಯರು ಇದ್ದಾರೆ.
ಧಾರವಾಡ ತಾಲೂಕು ಮನಸೂರಿನವರಾದ ಪಂ.ರಾಜಶೇಖರ್ ಮನ್ಸೂರ್ ಅವರು 1942ರ ಡಿ.16ರಂದು ಜನಿಸಿದ್ದರು. ಮನೆಯಲ್ಲಿ ಸದಾ ಸಂಗೀತದ ವಾತಾವರಣ ಇತ್ತು. ಹೀಗಾಗಿ ಅಪ್ರಜ್ಞಾಪೂರ್ವಕವಾಗಿಯೂ ಹಿಂದುಸ್ತಾನಿ ಸಂಗೀತದ ಅನೇಕ ರಾಗಗಳು ರಾಜಶೇಖರ ಅವರ ಮನಸ್ಸು, ಮಿದುಳು ಪ್ರವೇಶಿಸಿದ್ದವು. ಬಾಲ್ಯದಿಂದಲೇ ರಾಜಶೇಖರ್ ಅವರಿಗೆ ಸಂಗೀತ ಸಂಸ್ಕಾರ ಲಭಿಸಿತ್ತು.
Vijayapura: ಮಕ್ಕಳ ಹಿರಿಯ ಸಾಹಿತಿ ಶರಣಪ್ಪ ಕಂಚ್ಯಾಣಿ ಇನ್ನಿಲ್ಲ
ಪಂ.ರಾಜಶೇಖರ್ ಮನ್ಸೂರ್ ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಹಾಗೂ ಇಂಗ್ಲೆಂಡ್‌ನಿಂದ ಸಂಶೋಧನಾ ಪದವಿ ಪಡೆದು ಸುಮಾರು 35 ವರ್ಷಗಳ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಅನೇಕ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ನಿವೃತ್ತಿಯ ನಂತರ ಬೆಂಗಳೂರಿನಲ್ಲಿಯೇ ನೆಲೆಸಿದ್ದರು. ಪಂ. ರಾಜಶೇಖರ್ ಮನ್ಸೂರ್ ಅವರಿಗೆ ಅನೇಕ ಪ್ರಶಸ್ತಿಗಳು ಸಂದಿವೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಕಲಾ ಸಿರಿ ಗೌರವ, ಕರ್ನಾಟಕ ರಾಜೋತ್ಸವ ಪ್ರಶಸ್ತಿಗಳು ಬಂದಿವೆ.