ವಾಲ್ಮೀಕಿ ಹಗರಣದ ಹಣದಿಂದ ಬೆಂಜ್ ಕಾರು ಕೊಂಡಿದ್ದ ಮಾಸ್ಟರ್‌ಮೈಂಡ್ ಆರೋಪಿ..!
ಕಾರನ್ನು ಮಾಲೀಕರಿಗೆ ವಾಪಸ್ ನೀಡಿ 1.50 ಕೋಟಿ ರು. ಹಣ ವಶಕ್ಕೆ ಪಡೆಯಲಾಗಿದೆ. ಈ ಹಿಂದೆ ಆರೋಪಿ ವರ್ಮಾ ಬಳಿ ಸೆಕೆಂಡ್ ಹ್ಯಾಂಡ್ 3.32 ಕೋಟಿ ರು. ಮೌಲ್ಯದ ಲ್ಯಾಂಬೋರ್ಗಿನಿ ಪತ್ತೆಯಾಗಿತ್ತು. ನಿಗಮದಿಂದ ದೋಚಿದ್ದ ಹಣದಲ್ಲಿ ವರ್ಮಾ ಹೈದರಾಬಾದ್ ನಗರದ ಸೆಕೆಂಡ್ ಹ್ಯಾಂಡ್ ಕಾರು ಶೋರೂಂನಲ್ಲಿ ಆ ಕಾರನ್ನು ಖರೀದಿಸಿದ್ದ. ಎಸ್‌ಐಟಿ ಅಧಿಕಾರಿಗಳು ಆ ಶೋ ರೂಂ ಮಾಲಿಕರನ್ನು ಸಂಪರ್ಕಿಸಿ ಕಾರಿನ ಹಣದ ಕುರಿತು ವಿಚಾರಿಸಿದ್ದರು.
ಬೆಂಗಳೂರು(ಜು.12): ರಾಜ್ಯ ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ದೋಚಿದ್ದ ಹಣದಲ್ಲಿ ಸೆಕೆಂಡ್ ಹ್ಯಾಂಡ್‌ನಲ್ಲಿ 'ಹೈದರಾಬಾದ್ ಗ್ಯಾಂಗ್'ನ ಮಾಸ್ಟರ್‌ಮೈಂಡ್ ಖರೀದಿಸಿದ್ದ ಮತ್ತೊಂದು ಐಷಾರಾಮಿ ಕಾರನ್ನು ವಿಶೇಷ ತನಿಖಾ ದಳವು (ಎಸ್‌ಐಟಿ) ಮಾಲೀಕನಿಗೆ ಹಿಂದಿರುಗಿಸಿ 1.50 ಕೋಟಿ ವಶಕ್ಕೆ ಪಡೆದಿದೆ. ಆರೋಪಿ ಸತ್ಯನಾರಾಯಣ ವರ್ಮಾ ಬಳಿ ಮರ್ಸಿಡೀಸ್ ಬೆಂಜ್ ಕಾರು ಪತ್ತೆಯಾಗಿದೆ.
ಈ ಕಾರನ್ನು ಮಾಲೀಕರಿಗೆ ವಾಪಸ್ ನೀಡಿ 1.50 ಕೋಟಿ ರು. ಹಣ ವಶಕ್ಕೆ ಪಡೆಯಲಾಗಿದೆ. ಈ ಹಿಂದೆ ಆರೋಪಿ ವರ್ಮಾ ಬಳಿ ಸೆಕೆಂಡ್ ಹ್ಯಾಂಡ್ 3.32 ಕೋಟಿ ರು. ಮೌಲ್ಯದ ಲ್ಯಾಂಬೋರ್ಗಿನಿ ಪತ್ತೆಯಾಗಿತ್ತು. ನಿಗಮದಿಂದ ದೋಚಿದ್ದ ಹಣದಲ್ಲಿ ವರ್ಮಾ ಹೈದರಾಬಾದ್ ನಗರದ ಸೆಕೆಂಡ್ ಹ್ಯಾಂಡ್ ಕಾರು ಶೋರೂಂನಲ್ಲಿ ಆ ಕಾರನ್ನು ಖರೀದಿಸಿದ್ದ. ಎಸ್‌ಐಟಿ ಅಧಿಕಾರಿಗಳು ಆ ಶೋ ರೂಂ ಮಾಲಿಕರನ್ನು ಸಂಪರ್ಕಿಸಿ ಕಾರಿನ ಹಣದ ಕುರಿತು ವಿಚಾರಿಸಿದ್ದರು. ಆಗ ಆ ಮಾಲಿಕರು ತಮಗೆ ಕಾರು ಮರಳಿಸಿದರೆ ಹಣ ಹಿಂತಿರುಗಿಸುವುದಾಗಿ ಹೇಳಿದ್ದರು. ಅದರಂತೆ ಶೋ ರೂಮ್ ಮಾಲೀಕನಿಗೆ ಕಾರು ವಾಪಸ್ ಕೊಟ್ಟು ವರ್ಮಾ ಪಾವತಿಸಿದ್ದ 3.32 ಕೋಟಿ ಹಣವನ್ನು ಎಸ್‌ಐಟಿ ಅಧಿಕಾರಿಗಳಿಗೆ ವಶಕ್ಕೆ ಪಡೆದಿದ್ದರು.
ಮುಡಾ, ವಾಲ್ಮೀಕಿ ನಿಗಮ ಹಗರಣವನ್ನು ಸಿಬಿಐ ತನಿಖೆ ನೀಡಿದರೆ ಸತ್ಯಾಂಶ ಹೊರಬರಲಿದೆ: ಸಂಸದ ಯದುವೀರ್ ಒಡೆಯರ್
ಡಿಜಿಟೆಲ್ ಕಂಪನಿ ಖಾತೆಗೆ ₹10 ಕೋಟಿ ವರ್ಗಾವಣೆ?
ಹೈದರಾಬಾದ್ ಮೂಲದ ಕಾಕಿ ಶ್ರೀನಿ ವಾಸ್ ಮಾಲೀಕತ್ವದ ಡಿಜಿಟೆಲ್ ಕಂಪನಿ ಖಾತೆಗೆ 10 ಕೋಟಿ ರು. ವರ್ಗಾವಣೆ ಯಾಗಿರುವುದು ಎಸ್‌ಐಟಿ ತನಿಖೆಯಲ್ಲಿ ಬಯಲಾಗಿದೆ. ಈ ಕಾಕಿ ಶ್ರೀನಿವಾಸ್ ಬೆಂಗಳೂರಿನಲ್ಲಿ ಕಂಪನಿ ಹೊಂದಿದ್ದು, ಪ್ರಕರಣ ಬೆಳಕಿಗೆ ಬಂದ ನಂತರ ತಲೆಮ ರೆಸಿಕೊಂಡಿದ್ದಾನೆ. ಹವಾಲ ದಂಧೆಯಲ್ಲಿ ಈತ ಪ್ರಮುಖ ಪಾತ್ರ ವಹಿಸಿರುವ ಸಾಧ್ಯತೆಯಿದ್ದು, ಎಸ್‌ಐಟಿ ಅಧಿಕಾರಿಗಳು ಆತನ ಪತ್ತೆಗೆ ಕಾರ್ಯ ಪ್ರವೃತ್ತರಾಗಿದ್ದಾರೆ ಎಂದು ತಿಳಿದು ಬಂದಿದೆ.