Asianet Suvarna News Asianet Suvarna News
breaking news image

ವಾಲ್ಮೀಕಿ ನಿಗಮದ 187 ಕೋಟಿ ರೂ. ಹಗರಣ: ಕೊನೆಗೂ ರಾಜೀನಾಮೆ ಕೊಟ್ಟ ಸಚಿವ ಬಿ. ನಾಗೇಂದ್ರ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ 187 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆಗಾರಿಕೆ ಹೊತ್ತು ಸಂಜೆ 7.30ಕ್ಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡುತ್ತೇನೆ ಎಂದು ಬಿ.ನಾಗೇಂದ್ರ ಹೇಳಿದ್ದಾರೆ.
 

Valmiki development Corporation scam Minister Nagendra resignation Submitted sat
Author
First Published Jun 6, 2024, 3:14 PM IST

ಬೆಂಗಳೂರು (ಜೂ.06): ರಾಜ್ಯದಲ್ಲಿ ತೀವ್ರ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ 187 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆಗಾರಿಕೆ ಹೊತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ನೀಡಿದ್ದಾರೆ.

ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ವಿರೋಧ ಪಕ್ಷಗಳು ಆಗ್ರಹಿಸಿದ್ದವು. ಪಕ್ಷ ಹಾಗೂ ಸರ್ಕಾರಗ ಘನತೆಗೆ ಧಕ್ಕೆಯಾಗಬಾರದು. ಹಾಗಾಗಿ ಸ್ವಯಂ ಪ್ರೇರಿತರಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಘನತೆ ಉಳಿಸಲು ನಾಗೇಂದ್ರ ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದ್ದರು.  ಇದರ ಬೆನ್ನಲ್ಲಿಯೇ ಬಿ. ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟದ ಮೊದಲ ವಿಕೆಟ್ ಪತನವಾಗಿದೆ.

Big Breaking: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಸಚಿವ ನಾಗೇಂದ್ರ ರಾಜೀನಾಮೆ ಖಚಿತಪಡಿಸಿದ ಡಿ.ಕೆ. ಶಿವಕುಮಾರ್

ಸಚಿವ ನಾಗೇಂದ್ರ ಮಾತನಾಡಿ, ಕಳೆದ 10 ದಿನಗಳಿಂದ ಈ ಪ್ರಕರಣವನ್ನ ಅನೇಕ ರೀತಿಯಾಗಿ ಚಿತ್ರಣ ಮಾಡಿದ್ದಾರೆ. ರಾಜ್ಯದ ಜನರಲ್ಲೂ ಆತಂಕ ಮೂಡುವಂತೆ ಆಗಿದೆ. ವಿರೋಧ ಪಕ್ಷದವರು ಕೂಡ ಆರೋಪ ಮಾಡಿದ್ದಾರೆ. ಹೀಗಾಗಿ ನಾನು ಸ್ವ ನಿರ್ಧಾರ ಕೈಗೊಳ್ಳಬೇಕಿತ್ತು. ನನ್ನ ಮೇಲೆ ಯಾರೂ ರಾಜಿನಾಮೆ ಒತ್ತಡ ಹಾಕಿಲ್ಲ. ಯಾರ ಒತ್ತಡ ಇಲ್ಲದೇ 7:30 ಕ್ಕೆ ರಾಜಿನಾಮೆ ನೀಡಿ ಬರ್ತೇನೆ. ಸಿಎಂ ಅವರಿಗೆ ಸಮಯ ಕೇಳಿದ್ದೇನೆ. ಹೋಗಿ ರಾಜಿನಾಮೆ ಪತ್ರ ಕೊಟ್ಟು ಬರ್ತೇನೆ ಎಂದು ಸಚಿವ ಬಿ. ನಾಗೇಂದ್ರ ತನ್ನ ಸ್ವ ಇಚ್ಛೆಯಿಂದ ರಾಜೀನಾಮೆ ಕೊಡುತ್ತಿದ್ದೇನೆ ಎಂದು ಹೇಳಿದರು.

ತಾವು ಸುದ್ದಿಗೋಷ್ಠಿಯಲ್ಲಿ ತಿಳಿಸಿದಂತೆ ಸಂಜೆ 7.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಗೆ ಬಂದು ರಾಜೀನಾಮೆ ಪತ್ರವನ್ನು ಸಲ್ಲಿಕೆ ಮಾಡಿದ್ದಾರೆ. ನಂತರ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬರುವವರೆಗೂ ಕಾದು ನಿಂತು, ಅವರನ್ನು ಭೇಟಿಯಾಗಿ ನಂತರ ಮನೆಯಿಂದ ಹೊರಬಂದರು. ಇದಾದ ನಂತರ ಸಚಿವರಿಗೆ ಕೊಟ್ಟಿದ್ದ ಕಾರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆ ಮುಂದೆಯೇ ಬಿಟ್ಟು ಮತ್ತೊಬ್ಬ ಸಚಿವ ಜಮೀರ್ ಅಹಮದ್ ಖಾನ್ ಅವರ ಕಾರಿನಲ್ಲಿ ಮನೆಯತ್ತ ತೆರಳಿದರು. ಇನ್ನು ಸಚಿವ ಜಮೀರ್ ಅಹಮದ್ ಖಾನ್ ಅವರು ಬಳ್ಳಾರಿಯಿಂದ ವಿಭಜನೆಗೊಂಡ ವಿಜಯನಗರ ಜಿಲ್ಲೆಯ ಉದ್ಯವಾರಿ ಸಚಿವರೂ ಆಗಿದ್ದು, ಬಳ್ಳಾರಿಗೆ ಹಂಗಾಮಿ ಉಸ್ತುವಾರಿಯಾಗಿ ಮುಂದುವರೆಯುವ ಸಾಧ್ಯತೆಯಿದೆ.

ಸಚಿವ ನಾಗೇಂದ್ರ ರಾಜೀನಾಮೆ ಸುದ್ದಿ ಕೇಳಿ ಖುಷಿಪಟ್ಟ ಮೃತ ಅಧಿಕಾರಿ ಪತ್ನಿ ಕವಿತಾ

ಆರೋಪಮುಕ್ತವಾಗಿ ಸಚಿವರಾಗ್ತೀನಿ ಎಂದ ನಾಗೇಂದ್ರ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ತಮ್ಮದು ಯಾವುದೇ ಪಾತ್ರವಿಲ್ಲ ಎಂಬ ಸತ್ಯಾಂಶ ಸರ್ಕಾರದಲ್ಲಿ ಸಿಎಂ, ಡಿಸಿಎಂ ಹಾಗೂ ಎಲ್ಲ ಸಚಿವರಿಗೂ ತಿಳಿದಿರುವ ವಿಚಾವಾಗಿದೆ. ಈವರೆಗೂ ಯಾರೊಬ್ಬರೂ ತನ್ನ ಬಳಿ ರಾಜೀನಾಮೆ ಕೊಡುವಂತೆ ಕೇಳಿಲ್ಲ. ಆದರೆ, ನಾನೇ ನೈತಿಕ ಹೊಣೆಗಾರಿಕೆ ಹೊತ್ತು ರಾಜೀನಾಮೆ ನೀಡುತ್ತಿದ್ದೇನೆ. ಆದರೆ, ಈ ಪ್ರಕರಣವನ್ನು ಸಿಬಿಐ ತನಿಖೆಗೆ ಕೈಗೆತ್ತಿಕೊಂಡಿದ್ದು, ಸತ್ಯಾಂಶ ಹೊರ ಬರುತ್ತದೆ. ಆಗ ನಾನು ನಿರಪರಾಧಿ ಎಂದು ದೋಷಮುಕ್ತವಾದ ನಂತರ ಪುನಃ ಬಂದು ಸಚಿವನಾಗುತ್ತೇನೆ ಎಂದು ಸಚಿವ ನಾಗೇಂದ್ರ ತಿಳಿಸಿದರು.

Latest Videos
Follow Us:
Download App:
  • android
  • ios