Asianet Suvarna News Asianet Suvarna News

ನಾಗೇಂದ್ರ ಬೆನ್ನಲ್ಲೇ ಸಚಿವ ಬೋಸರಾಜು, ದದ್ದಲ್ ಬಸನಗೌಡ ರಾಜೀನಾಮೆಗೆ ಹೆಚ್ಚಿದ ಒತ್ತಡ!

ವಾಲ್ಮೀಕಿ ಅಭಿವೃದ್ಧಿ ನಿಗಮ 187 ಕೋಟಿ ರೂ. ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಚಿವ ಬಿ ನಾಗೇಂದ್ರ ರಾಜೀನಾಮೆ ಸಲ್ಲಿಸಿದ್ದಾಯ್ತು, ಇದೀಗ ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್, ತೆಲಂಗಾಣ ಚುನಾವಣೆ ಉಸ್ತುವಾರಿ ಸಚಿವ ಎನ್‌ಎಸ್ ಬೋಸರಾಜು ರಾಜೀನಾಮೆಗೆ ರಾಯಚೂರು ಜೆಡಿಎಸ್ ಜಿಲ್ಲಾಧ್ಯಕ್ಷ ಆಗ್ರಹಿಸಿದ್ದಾರೆ.

Valmiki corpo scam case JDS demands resignation of NS Bosaraju Daddal Basanagowda at raichur rav
Author
First Published Jun 8, 2024, 11:45 AM IST

ರಾಯಚೂರು (ಜೂ.8): ವಾಲ್ಮೀಕಿ ಅಭಿವೃದ್ಧಿ ನಿಗಮ 187 ಕೋಟಿ ರೂ. ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಚಿವ ಬಿ ನಾಗೇಂದ್ರ ರಾಜೀನಾಮೆ ಸಲ್ಲಿಸಿದ್ದಾಯ್ತು, ಇದೀಗ ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್, ತೆಲಂಗಾಣ ಚುನಾವಣೆ ಉಸ್ತುವಾರಿ ಸಚಿವ ಎನ್‌ಎಸ್ ಬೋಸರಾಜು ಅಕ್ರಮದಲ್ಲಿ ಭಾಗಿಯಾಗಿದ್ದು ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆಗೆ ನೀಡಬೇಕು ಎಂದು ರಾಯಚೂರು ಜೆಡಿಎಸ್ ಜಿಲ್ಲಾಧ್ಯಕ್ಷ ಆಗ್ರಹಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಎನ್‌ಎಸ್‌ ಬೋಸರಾಜು, ದದ್ದಲ ಬಸನಗೌಡ ಮೇಲೆ ಸಿಬಿಐ ತನಿಖೆ ಆಗಬೇಕು. ತನಿಖೆ ನಡೆದಷ್ಟೂ ತಲೆಗಳು ಉರುಳುತ್ತವೆ. ಪ್ರಕರಣದಲ್ಲಿ ಇವರೆಲ್ಲರ ಪಾತ್ರವೂ ಇದೆ ಎಂದು ಗಂಭೀರ ಆರೋಪ ಮಾಡಿದರಲ್ಲದೇ ಬಂಧಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಗಣಿ ಹಗರಣದಲ್ಲಿ ಜೈಲು ಪಾಲಾಗಿದ್ದ ನಾಗೇಂದ್ರ; ಮತ್ತೆ ಮುಳುವಾಗುತ್ತಾ ಬಹುಕೋಟಿ ಅಕ್ರಮ ಹಣ ವರ್ಗಾವಣೆ?

ಬಡವರಿಗೆ ಬಳಕೆಯಾಗಬೇಕಿದ್ದ ಹಣವನ್ನ ಲೂಟಿ ಮಾಡಿದ್ದಾರೆ. ಇದರ ಹಿಂದೆ ಸಿಎಂ, ಡಿಸಿಎಂ ಹಸ್ತ ಇದೆ. ಭ್ರಷ್ಟಾಚಾರಕ್ಕೆ ಮೂಲ ಕಾರಣ ದದ್ದಲ ಬಸನಗೌಡ. ಇನ್ನು ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಾಗರಾಜ ನೆಕ್ಕಂಟಿ, ನಾಗೇಶ್ವರ ಇವರು ಎನ್‌ಎಸ್‌ ಬೋಸರಾಜು ಆಪ್ತ ಬಳಗದಲ್ಲಿ ಗುರುತಿಸಿಕೊಂಡವರು. ಪ್ರಕರಣದಲ್ಲಿ ಲೂಟಿ ಹೊಡೆದಿರುವುದರಲ್ಲಿ ಇವರ ಪಾತ್ರವಿದೆ. ಹೀಗಾಗಿ ಎಸ್‌ಐಟಿ ಹಾಗೂ ಸಿಬಿಐ ಕೂಡಲೇ ಎನ್‌ಎಸ್‌ ಬೋಸರಾಜು, ದದ್ದಲ ಬಸನಗೌಡರನ್ನ ಬಂಧಿಸಬೇಕು ಇಬ್ಬರನ್ನೂ ವಿಚಾರಣೆಗೆ ಒಳಪಡಿಸಬೇಕು ಒತ್ತಾಯಿಸಿದ್ದಾರೆ.

ಇನ್ನು ಕೆಲವರು ಪ್ರಕರಣ ದಾಖಲಾಗುತ್ತಿದ್ದಂತೆ ಬಂಧನ ಭೀತಿಯಿಂದ ಹಣ ಹಿಂತಿರುಗಿಸಿದ್ದಾರೆ ಹಣ ಹಿಂದಿರುಗಿಸುವಲ್ಲಿ ದದ್ದಲ ಬಸನಗೌಡ ಪಾತ್ರವಿದೆ. ಈ ಬಗ್ಗೆ ಜೆಡಿಎಸ್ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಕ್ರಮ ಜರುಗಿಸಲು ಮನವಿ ನೀಡುತ್ತೇವೆ. ಅಷ್ಟೇ ಅಲ್ಲದೇ ಈ ಪ್ರಕರಣವನ್ನ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.

ಸಚಿವ ನಾಗೇಂದ್ರ ರಾಜೀನಾಮೆ ಸುದ್ದಿ ಕೇಳಿ ಖುಷಿಪಟ್ಟ ಮೃತ ಅಧಿಕಾರಿ ಪತ್ನಿ ಕವಿತಾ

ಏನಿದು ಘಟನೆ?
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದ ಸುಮಾರು 187 ಕೋಟಿ ರೂ. ಮೌಲ್ಯದ ಬೃಹತ್ ದೊಡ್ಡ ಹಗರಣದಲ್ಲಿ  ಬಹುಕೋಟಿ ರೂಪಾಯಿ ಹಣವನ್ನ ಕಾನೂನು ಬಾಹಿರವಾಗಿ ವರ್ಗಾವಣೆ ಮಾಡಲಾಗಿದೆ. ಅವರು ಮಾಡಿದ ತಪ್ಪನ್ನು ತಮ್ಮ ಮೇಲೆ ಹಾಕುತ್ತಿದ್ದಾರೆಂಬ ಭಯದಿಂದ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕೌಂಟೆಂಟ್ ಇಲಾಖಾ ಸಚಿವರ ಹೆಸರನ್ನು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದರು. ಇದು ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಯಿತು. ವಿರೋಧಪಕ್ಷಗಳು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಸಿಬಿಐ ತನಿಖೆ, ಸಚಿವರ ರಾಜೀನಾಮೆಗೆ ಒತ್ತಾಯಿಸಿದ್ದರು.

Latest Videos
Follow Us:
Download App:
  • android
  • ios