ವಸತಿ ಸಚಿವ ವಿ.ಸೋಮಣ್ಣ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮಹತ್ವದ ಹುದ್ದೆ ಮುಂದಿನ ಆದೇಶದವರೆಗೆ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ 

 ಬೆಂಗಳೂರು (ಸೆ.09): ವಸತಿ ಸಚಿವ ವಿ.ಸೋಮಣ್ಣ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

 ಕರ್ನಾಟಕ ಗೃಹ ಮಂಡಳಿ ಕಾಯ್ದೆಯನ್ವಯ ಸೋಮಣ್ಣ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಸಕ್ರಿಯ ರಾಜಕಾರಣಿ, ಜನ ಮೆಚ್ಚಿದ ನಾಯಕ ವಿ ಸೋಮಣ್ಣ ಜೊತೆ ಮಾತುಕತೆ

 ವಸತಿ ಸಚಿವ ವಿ. ಸೋಮಣ್ಣ ಸರಳ, ಸಜ್ಜನ ರಾಜಕಾರಣಿ ಎಂದು ಹೆಸರು ಪಡೆದವರು. ಸದಾ ತಮ್ಮ ಕ್ಷೇತ್ರದ ಜನರಿಗಾಗಿ, ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ದುಡಿಯುವ ರಾಜಕಾರಣಿ. ಮಾಧ್ಯಮಗಳ ಮುಂದಾಗಲಿ, ಜನರ ಮುಂದಾಗಲಿ ಎಂದಿಗೂ ತಮ್ಮ ಕೆಲಸದ ಬಗ್ಗೆ ಹೇಳಿಕೊಳ್ಳದ ನಿಗರ್ವಿ ಎಂದೂ ಕರೆಸಿಕೊಳ್ಲುತ್ತಾರೆ. 

ಅವರಿಗೆ ಇದೀಗ ಪ್ರಮುಖ ಹುದ್ದೆಯೊಂದು ಒಲಿದು ಬಂದಿದೆ.