'ಚಕ್ಕಡಿ ಗಾಡಿ ಪಕ್ಕಕ್ಕೆ ಸರಿಸುವಂತೆ ಹಾರ್ನ್ ಮಾಡಿದ್ದಕ್ಕೆ KSRTC ಬಸ್ ಚಾಲಕನ ಮೇಲೆ ಹಲ್ಲೆ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಚಕ್ಕಡಿ ಗಾಡಿಗೆ ಹಾರ್ನ್ ಮಾಡಿದ್ದಕ್ಕೆ KSRTC ಬಸ್ ಚಾಲಕನ ಮೇಲೆ ಅಪರಿಚಿತ ಕಿಡಿಗೇಡಿಗಳು ಹಲ್ಲೆ ನಡೆಸಿ, ಚಿನ್ನದ ಚೈನ್ ಕಿತ್ತುಕೊಂಡಿದ್ದಾರೆ. ಹಳಿಯಾಳದಿಂದ ಯಲ್ಲಾಪುರಕ್ಕೆ ಹೋಗುವ ಮಾರ್ಗದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಾರವಾರ, ಉತ್ತರಕನ್ನಡ (ಜ.9): 'ಚಕ್ಕಡಿ ಗಾಡಿ ಸ್ವಲ್ಪ ಪಕ್ಕಕ್ಕೆ ಸರಿಸು' ಎಂದು ಹಾರ್ನ್ ಮಾಡಿದ್ದಕ್ಕೆ ಅಪರಿಚಿತ ಕಿಡಿಗೇಡಿಗಳು KSRTC ಬಸ್ ಚಾಲಕನಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಿಂದ ಯಲ್ಲಾಪುರಕ್ಕೆ ಹೋಗುವ ಮಾರ್ಗದಲ್ಲಿ ನಡೆದಿದೆ.
ಪುಂಡಲೀಕ, ಹಲ್ಲೆಗೊಳಗಾದ ಬಸ್ ಚಾಲಕ. ಕೊರಳಪಟ್ಟಿ ಹಿಡಿದು ಹಲ್ಲೆ ನಡೆಸಿದ್ದಲ್ಲದೆ ಕೊರಳಲ್ಲಿದ್ದ 25ಗ್ರಾಂ ತೂಕದ ಚಿನ್ನದ ಚೈನ್ ಕಿತ್ತುಕೊಂಡೀದ್ದಾರೆ ಎಂದು ಚಾಲಕ ಆರೋಪಿಸಿದ್ದಾರೆ. ಹಲ್ಲೆ ನಡೆದ ಬಗ್ಗೆ ಹಳಿಯಾಳ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಸೈಬರ್ ವಂಚನೆಯಿಂದಾದ ನಷ್ಟಕ್ಕೆ ಬ್ಯಾಂಕ್‌ಗಳೇ ಹೊಣೆ: ಸುಪ್ರೀಂ ಕೋರ್ಟ್ ಮಹತ್ವದ ಆದೇಶ!
ಘಟನೆ ಹೇಗಾಯ್ತು?
ಉತ್ತರ ಕನ್ನಡದ ಹಳಿಯಾಳ ಯಲ್ಲಾಪುರ ರಸ್ತೆಯಲ್ಲಿ ಸಾಗುತ್ತಿದ್ದ ಬಸ್. ಉಳವಿಯಿಂದ ಪ್ರಯಾಣಿಕರನ್ನ ಹೊತ್ತುಕೊಂಡು ಹಳಿಯಾಳಕ್ಕೆ ಹೊರಟಿತ್ತು. ಈ ವೇಳೆ ದಾರಿ ಮಧ್ಯೆ ಮೂರು ಚಕ್ಕಡಿ ಗಾಡಿಗಳು ಸಾಗುತ್ತಿದ್ದವು. ಬಸ್ ಚಲಿಸಲು ದಾರಿ ಮಾಡಿಕೊಡದ ಹಲ್ಲೆಕೋರರು. ಹೀಗಾಗಿ ದಾರಿ ಬಿಡುವಂತೆ ಹಾರ್ನ್ ಮಾಡಿದ್ದ ಬಸ್ ಡ್ರೈವರ್. ಅಷ್ಟಕ್ಕೆ ಬಸ್ಸಿನ ಹಿಂಬದಿ ಬಾಗಿಲಿನಿಂದ ಹತ್ತಿದ ಇಬ್ಬರು ದುಷ್ಕರ್ಮಿಗಳು ಚಾಲಕನಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ, ಚಕ್ಕಡಿಗೆ ಡಿಕ್ಕಿ ಹೊಡಿತಿದ್ಯಾ, ನಿನ್ನನ್ನು ಕೊಂದೇ ಹಾಕ್ತೇವೆ ಅಂತಾ ಜೀವ ಬೆದರಿಕೆ ಹಾಕಿದ್ದಾರೆ. ಬಳಿಕ ಬಸ್‌ನಿಂದ ಕೆಳಗೆಳೆದು ಚಾಲಕನ ತಲೆ, ಕಪಾಳ, ಗದ್ದಕ್ಕೆ ಹೊಡದು ಕಿರಾತಕರು ಹಲ್ಲೆ ನಡೆಸಿದ್ದಾರೆ.
ಇದನ್ನೂ ಓದಿ: ದರೋಡೆಗೆ ಬಂದವ ಮುತ್ತು ಕೊಟ್ಟು ಪರಾರಿಯಾದ! ಕಳ್ಳನ ಬಗ್ಗೆ ನೆಟ್ಟಿಗರ ಅನುಕಂಪ: ಏನಿದು ಸ್ಟೋರಿ?
ಸದ್ಯ ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ವಿಡಿಯೋ ದೃಶ್ಯಗನ್ನಧರಿಸಿ ತನಿಖಾಧಿಕಾರಿ ಕೃಷ್ಣಗೌಡ ಅರಿಕೇರಿ ನೇತೃತ್ವದಲ್ಲಿ ದುಷ್ಕರ್ಮಿಗಳನ್ನ ಪತ್ತೆ ಹಚ್ಚಲು ಮುಂದಾಗಿದ್ದಾರೆ.