ಹಸಿರು ಪಟಾಕಿ ಮಾತ್ರ ಬಳಸಿ: ಸಿಎಂ ಸಿದ್ದರಾಮಯ್ಯ ಮನವಿ
ರಾಜ್ಯದಲ್ಲಿ ಪಟಾಕಿಗಳಿಂದ ಉಂಟಾಗುವ ಶಬ್ದ ಮಾಲಿನ್ಯ, ಪರಿಸರ ಮಾಲಿನ್ಯ ಹಾಗೂ ಅಗ್ನಿ ಅವಘಡ ತಪ್ಪಿಸಲು ಹಸಿರು ಪಟಾಕಿ ಮಾತ್ರ ಬಳಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ.

ಬೆಂಗಳೂರು (ನ.13): ರಾಜ್ಯದಲ್ಲಿ ಪಟಾಕಿಗಳಿಂದ ಉಂಟಾಗುವ ಶಬ್ದ ಮಾಲಿನ್ಯ, ಪರಿಸರ ಮಾಲಿನ್ಯ ಹಾಗೂ ಅಗ್ನಿ ಅವಘಡ ತಪ್ಪಿಸಲು ಹಸಿರು ಪಟಾಕಿ ಮಾತ್ರ ಬಳಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ.
ರಾಜ್ಯದ ಜನತೆಗೆ ವಿಡಿಯೋ ಸಂದೇಶದ ಮೂಲಕ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿರುವ ಅವರು, ದೀಪಾವಳಿ ಸರ್ವರೂ ಕೂಡಿ ಸಂಭ್ರಮಿಸುವ ಹಬ್ಬ. ಅಜ್ಞಾನದ ಅಂಧಕಾರವನ್ನು ಹೋಗಲಾಡಿಸಿ, ಜ್ಞಾನದ ದೀಪ ಬೆಳಗುವ ಹಬ್ಬ. ಹಬ್ಬದ ಸಂಭ್ರಮವು ನಮ್ಮ ಮೈ ಮರೆವಿನ ನಿರ್ಲಕ್ಷ್ಯದಿಂದ ಸಂಭವಿಸುವ ಅವಘಡಗಳಿಂದ ಮಂಕಾಗದಂತೆ ಎಚ್ಚರಿಕೆ ವಹಿಸೋಣ ಎಂದು ಸಲಹೆ ನೀಡಿದ್ದಾರೆ.
ಮೋದಿಗೆ ಪತ್ರ ಬರೆದ ಮಂಡ್ಯ ಟೆಕಿ ಮನೆಗೆ ಚರಂಡಿ ಭಾಗ್ಯ; ಆನ್‌ಲೈನ್ ದೂರಿಗೆ ಸ್ಪಂದಿಸಿದ ಪಿಎಂ!
ಪಟಾಕಿ ವಿಚಾರದಲ್ಲಿ ಹಿರಿ ಕಿರಿಯರೆಲ್ಲರೂ ಮುನ್ನಚ್ಚರಿಕೆ ವಹಿಸಬೇಕು. ಪಟಾಕಿಗಳಿಂದ ಉಂಟಾಗುವ ಶಬ್ದ ಮಾಲಿನ್ಯ, ಪರಿಸರ ಮಾಲಿನ್ಯ ಹಾಗೂ ಅಗ್ನಿ ಅವಘಡ ತಪ್ಪಿಸಲು ಹಸಿರು ಪಟಾಕಿಗೆ ಮಾತ್ರ ಅನುಮತಿ ನೀಡಲಾಗಿದೆ. ದೀಪಾವಳಿ ಹಬ್ಬದ ಹೆಸರಿನಲ್ಲಿ ಸಿಡಿಸುವ ಪಟಾಕಿಯ ರಾಸಾಯನಿಕಗಳು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ. ವಿಶೇಷವಾಗಿ ಉಸಿರಾಟದ ಸಮಸ್ಯೆ ಇರುವವರು, ಶ್ವಾಸಕೋಶ, ಹೃದಯ ಸಂಬಂಧಿ ಕಾಯಿಲೆ ಇರುವವರಿಗೆ ಪಟಾಕಿಗಳಿಂದ ಉಂಟಾಗುವ ವಾಯು ಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ಗಂಭೀರ ತೊಂದರೆ ನೀಡುತ್ತದೆ. ಪ್ರಾಣಿ- ಪಕ್ಷಿಗಳು ಇದರಿಂದ ಮೂಕ ವೇದನೆ ಅನುಭವಿಸುತ್ತವೆ. ಹಾಗಾಗಿ ನಾಗರಿಕರು ಪರಿಸರ ಸ್ನೇಹಿ ಹಸಿರು ಪಟಾಕಿಯನ್ನು ಮಾತ್ರ ಬಳಸಬೇಕು ಎಂದು ಅವರು ವಿನಂತಿ ಮಾಡಿದ್ದಾರೆ.
ಸಕ್ರೆಬೈಲು: ಭಾನುಮತಿ ಆನೆಬಾಲಕ್ಕೆ ಮಚ್ಚಿನೇಟು; ಇಬ್ಬರು ಸಿಬ್ಬಂದಿ ಸಸ್ಪೆಂಡ್