Asianet Suvarna News Asianet Suvarna News

ಸಕ್ರೆಬೈಲು: ಭಾನುಮತಿ ಆನೆಬಾಲಕ್ಕೆ ಮಚ್ಚಿನೇಟು; ಇಬ್ಬರು ಸಿಬ್ಬಂದಿ ಸಸ್ಪೆಂಡ್

ಸಕ್ರೆಬೈಲು ಆನೆ ಬಿಡಾರದ ಭಾನುಮತಿ ಆನೆಯ ಬಾಲಕ್ಕೆ ಉಂಟಾಗಿದ್ದ ಗಾಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆನೆ ಬಿಡಾರದ ಇಬ್ಬರು ಕಾವಾಡಿಗಳನ್ನು ಅಮಾನತ್ತುಗೊಳಿಸಲಾಗಿದೆ.

An elephant named Bhanumati was injured in the tail in sakrebailu at shivamogga rav
Author
First Published Nov 13, 2023, 7:05 AM IST

ಶಿವಮೊಗ್ಗ (ನ.13): ಸಕ್ರೆಬೈಲು ಆನೆ ಬಿಡಾರದ ಭಾನುಮತಿ ಆನೆಯ ಬಾಲಕ್ಕೆ ಉಂಟಾಗಿದ್ದ ಗಾಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆನೆ ಬಿಡಾರದ ಇಬ್ಬರು ಕಾವಾಡಿಗಳನ್ನು ಅಮಾನತ್ತುಗೊಳಿಸಲಾಗಿದೆ.

ಆನೆಯ ಮುತುವರ್ಜಿ ವಹಿಸಿದ್ದ ಕಾವಾಡಿಗಳಾದ ಸುದೀಪ್‌ ಹಾಗೂ ಮಹಮ್ಮದ್‌ ಅಮಾನತುಗೊಂಡವರು. ಸಕ್ರೆಬೈಲು ಆನೆ ಬಿಡಾರದ ಭಾನುಮತಿ ಆನೆ ತುಂಬು ಗರ್ಭಿಣಿ ಆಗಿದ್ದಾಗ ಅ.17ರಂದು ಅದರ ಬಾಲಕ್ಕೆ ಮಚ್ಚಿನಿಂದ ಹೊಡೆದಂತೆ ಗಾಯವಾಗಿದ್ದು, ಅದರ ಅರ್ಧ ಬಾಲ ಜೋತಾಡುತ್ತಿತ್ತು. ಶಸ್ತ್ರಚಿಕಿತ್ಸೆ ನೀಡಿದ ಬಳಿಕ ಆನೆ ಚೇತರಿಕೆ ಕಂಡಿತ್ತು. ಆದರೆ, ಆನೆ ಬಾಲ ಘಾಸಿಗೊಳಿಸಿದ್ದು ಯಾರು?, ಯಾಕೆ ತುಂಡರಿಸುವ ಪ್ರಯತ್ನ ಮಾಡಿದ್ದರು ಎಂಬುದಕ್ಕೆ ಈವರೆಗೂ ನಿಖರ ಉತ್ತರ ಸಿಕ್ಕಿಲ್ಲ. ಕರ್ತವ್ಯ ನಿರ್ಲಕ್ಷ್ಯಕಾರಣ ಎಂಬ ಹಿನ್ನೆಲೆಯಲ್ಲಿ ಇವರಿಬ್ಬರನ್ನು ಅಮಾನತು ಮಾಡಲಾಗಿದೆ. ಭಾನುಮತಿ ಆನೆ ಈಗಾಗಲೇ ಹೆಣ್ಣುಮರಿಗೆ ಜನ್ಮ ನೀಡಿದೆ.

ಸಕ್ರೆಬೈಲಿನಲ್ಲಿ ವಿಶ್ವ ಆನೆಗಳ ದಿನಾಚರಣೆ: ವಿಶಿಷ್ಟವಾಗಿ ಸಿಂಗಾರಗೊಂಡ ಗಜಪಡೆ!

ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದ ಡಿಎಫ್‌ಓ ಪ್ರಸನ್ನ ಕೃಷ್ಟ ಪಟಗಾರ್.  ಭಾನುಮತಿ ಆನೆ ಬಾಲ ಕಟ್ ಮಾಡಿದ್ದು ಸಕ್ರೈಬೈಲು ಆನೆ ಬಿಡಾರದ ಸಿಬ್ಬಂದಿಯೇ ಆಗಿದ್ದಾರೆ ಎಂದಿದ್ದ ವರದಿ. ತನಿಖೆ ವೇಳೆ ಬಹಿರಂಗವಾದ ಸಿಬ್ಬಂದಿಯ ಕಿಡಿಗೇಡಿತನ. ಆನೆ ಬಿಡಾರದ ಸಿಬ್ಬಂದಿಗಳ ನಡುವಿನ ವೈಷಮ್ಯದಿಂದ ನಡೆದಿದ್ದ ಆನೆ ಬಾಲ ಕಟ್ ಎನ್ನಲಾಗಿತ್ತು. ಸಿಬ್ಬಂದಿಯ ನಿರ್ಲಕ್ಷದ ವಿರುದ್ಧ ಪ್ರಕರಣ ದಾಖಲು. ಹೆಚ್ಚಿನ ತನಿಖೆಗೆ ಮುಂದಾಗಿರುವ   ಅರಣ್ಯಾಧಿಕಾರಿಗಳು. 

ಸಕ್ರೆಬೈಲು ಆನೆ ಬಿಡಾರದಿಂದ ಮತ್ತೆ 3 ಆನೆಗಳು ಶಿಫ್ಟ್‌?: ಮಧ್ಯಪ್ರದೇಶದಿಂದ ಅರಣ್ಯ ಇಲಾ​ಖೆಗೆ ಮತ್ತೆ ಬೇಡಿಕೆ

Follow Us:
Download App:
  • android
  • ios