ಹಾಸನ:  ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆರ್ಥಿಕವಾಗಿ ಹಿಂದುಳಿದಿರುವ ಮೇಲ್ವರ್ಗದವರಿಗೆ ನೀಡುವ ಮೀಸಲಾತಿ ನರೇಂದ್ರ ಮೋದಿ ಅವರ ಹೊಸ ಅಸ್ತ್ರ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ  ಹೇಳಿದ್ದಾರೆ. 

ಇತ್ತೀಚಿನ ದಿನಗಳಲ್ಲಿ ನರೇಂದ್ರ ಮೋದಿ ಜನಪ್ರೀಯತೆ ಕುಗ್ಗುತ್ತಿದೆ. ಇದರಿಂದ ಇಂತಹ ಹೊಸ ಹೊಸ ಅಸ್ತ್ರ ಪ್ರಯೋಗಿಸುತ್ತಿದ್ದಾರೆ ಎಂದು ಹಾಸನದಲ್ಲಿ ಹೇಳಿದ್ದಾರೆ. 

ತಿಂಗಳಾಂತ್ಯದೊಳಗೆ ಕಾಂಗ್ರೆಸ್ ಸೀಟು ಹಂಚಿಕೆ : ಯಾರಿಗೆ ಯಾವ ಕ್ಷೇತ್ರ..?

ಈ ರೀತಿಯಾದ ನೀತಿಗಳನ್ನು ಜಾರಿ ತಂದಲ್ಲಿ ಚುನಾವಣೆಯಲ್ಲಿ ಗೆಲ್ಲಬಹುದು ಎನ್ನುವ ಭಾವನೆ ಹೊಂದಿದ್ದಾರೆ. ಇದೇ ಕಾರಣಕ್ಕೆ ಮರು ಮಾತನಾಡದೆ ಎಲ್ಲಾ ಪಕ್ಷಗಳವರೂ ಬೆಂಬಲ ನೀಡಿದ್ದಾರೆ ಎಂದಿದ್ದಾರೆ.

ವಿಧಾನ ಪರಿಷತ್ ನಾಮನಿರ್ದೇಶನ: JDSನಿಂದ ಅಚ್ಚರಿ ಹೆಸರು

ಆದರೆ ಸದ್ಯ ಈ ವಿಚಾರ ಸುಪ್ರಿಂಕೋರ್ಟ್ ಮೆಟ್ಟಿಲೇರಿದೆ. ಅಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ. ನಾವು ಬ್ರಾಹ್ಮಣ ಸಮುದಾಯಕ್ಕೆ ಏನು ಕೊಡಬೇಕೋ ಅದನ್ನು ‌ಕೊಟ್ಟಿದ್ದೇವೆ. ಈ‌ ದೇಶದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಯಾವ ‌ಪ್ರಧಾನಿ ಅಥವಾ ಸಿಎಂ ಕೂಡ ಬಗೆ ಹರಿಸಲು ಆಗುವುದಿಲ್ಲ ಎಂದರು. 

ಲೋಕಸಭಾ ಮೈತ್ರಿ ಬಗ್ಗೆ ಪ್ರಸ್ತಾಪ : ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮುಂದುವರಿಸುತ್ತೇವೆ. ಆದರೆ ಎಷ್ಟು ಸೀಟು ಸಿಗುತ್ತದೆ ಎನ್ನುವುದು ಮಾತ್ರ ಇನ್ನೂ ಕೂಡ ತಿಳಿದಿಲ್ಲ. 

ಈ ಬಗ್ಗೆ ರಾಹುಲ್ ಗಾಂಧಿ, ವೇಣುಗೋಪಾಲ್, ಸಿದ್ದರಾಮಯ್ಯ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಅಲ್ಲದೇ ತಾವು ಚುನಾವಣೆ ಸ್ಪರ್ಧೆ ಮಾಡುವ ಬಗ್ಗೆ ಇನ್ನೂ ಕೂಡ ಯಾವುದೇ ತಿರ್ಮಾನ ಮಾಡಿಲ್ಲ.  ಎಂದು ಸ್ಪರ್ಧೆಯ ಬಗ್ಗೆ ಕುತೂಹಲ ಕಾಯ್ದಿಟ್ಟಿದ್ದಾರೆ.