ಬೆಂಗಳೂರು, (ಜ.10): ಜೆಡಿಎಸ್ ಪಾಲಿನ ಒಂದು ವಿಧಾನ ಪರಿಷತ್ ನಾಮನಿರ್ದೇಶನ ಸ್ಥಾನಕ್ಕೆ ಅಚ್ಚರಿ ಹೆಸರು ತೇಲಿಬಂದಿದೆ.

ದೇವೇಗೌಡರ ಕುಟುಂಬದ ಆಪ್ತರಿಗೆ ವಿಧಾನ ಪರಿಷತ್ ನಾಮನಿರ್ದೇಶನ ಮಾಡಲು ಜೆಡಿಎಸ್ ನಲ್ಲಿ ಮಾತುಕತೆಗಳು ನಡೆದಿವೆ.

ಲೋಕ ಚುನಾವಣೆ : ಜೆಡಿಎಸ್-ಕಾಂಗ್ರೆಸ್ ಮೈತ್ರಿ - ಯಾರಿಗೆ ಯಾವ ಕ್ಷೇತ್ರ?

ದೇವೇಗೌಡ ಪ್ರಧಾನಿಯಾಗಿದ್ದಾಗ ಆಪ್ತ ಕಾರ್ಯದರ್ಶಿಯಾಗಿದ್ದ ಹಾಸನ ಮೂಲದ ಕುರುಬ ಸಮುದಾಯದ ತಿಪ್ಪೇಸ್ವಾಮಿ ಅವರನ್ನು ವಿಧಾನ ಪರಿಷತ್ ನಾಮನಿರ್ದೇಶನ ಜೆಡಿಎಸ್ ನಿರ್ಧರಿಸಿದೆ.

ಈ ಬಗ್ಗೆ ದೇವೇಗೌಡ ಹಾಗೂ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ನಿನ್ನೆ (ಬುಧವಾರ) ರಾತ್ರಿ ಮಾತುಕತೆ ನಡೆಸಿದ್ದಾರೆ ಎನ್ನುವ ಮಾಹಿತಿ ಜೆಡಿಎಸ್ ಮೂಲಕಗಳಿಂದ ತಿಳಿದುಬಂದಿದೆ.

ಸಧ್ಯ ತಿಪ್ಪೇಸ್ವಾಮಿ ಅವರು ಸಚಿವ ಎಚ್.ಡಿ.ರೇವಣ್ಣ ಅವರ ಕಚೇರಿಯ ವಿಶೇಷಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇನ್ನು ಈ ವಿಧಾನಪರಿಷತ್ ಸ್ಥಾನಕ್ಕೆ ಜೆಡಿಎಸ್ ಮುಖಂಡ ಕೋನರೆಡ್ಡಿ ಸಹ ಪೈಪೋಟಿ ನಡೆಸಿದ್ದು, ಇವರಿಗೆ ಧಾರವಾಡ ಲೋಕಸಭಾ ಟಿಕೇಟ್ ನೀಡಿ ಸಮಧಾನ ಪಡಿಸಲು ದೊಡ್ಡಗೌಡ್ರು ಚಿಂತನೆ ನಡೆಸಿದ್ದಾರೆ.

ಅಂತಿಮವಾಗಿ ಯಾರು ವಿಧಾನಪರಿಷತ್ ಗೆ ಯಾರು ಆಯ್ಕೆಯಾಗಲಿದ್ದಾರೆ ಎನ್ನುವುದು ಇನ್ನೆರಡು ದಿನಗಳಲ್ಲಿ ತೀರ್ಮಾನ ಆಗಲಿದೆ.