Asianet Suvarna News Asianet Suvarna News

ಸಂಸದೆ ಸುಮಲತಾಗೆ ಅಮೆರಿಕದ ಬರ್ಕ್ಲಿ ವಿಶ್ವವಿದ್ಯಾಲಯದಿಂದ ಪ್ರತಿಷ್ಠಿತ ಗೌರವ!

ಮಂಡ್ಯ ಸಂಸದೆ ಸುಮಲತಾ ಅವರ ಸಮಾಜಸೇವೆ, ರಾಜಕೀಯ ಹಾಗೂ ಸಿನಿಮಾ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಯೊಂದು ಅರಸಿಕೊಂಡು ಬಂದಿದೆ. ಅಮೆರಿಕದ ಬರ್ಕಿ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿರುವ ಯುನೈಟೆಡ್ ಥಿಯೋಲಾಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದೆ.
 

United Theological Research Institute honoured Sumalatha Ambareesh to Honorary Doctorate for Social Service ckm
Author
First Published Jan 21, 2024, 5:21 PM IST

ಹೈದರಾಬಾದ್(ಜ.21) ಸಿನಿಮಾದ ಮೂಲಕ ಮಿಂಚಿ ರಾಜಕೀಯದಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಲತಾ ಅಂಬರೀಶ್‌ ಮುಡಿಗೆ ಪ್ರಶಸ್ತಿ ಸೇರಿಕೊಂಡಿದೆ. ಸಮಾಜ ಸೇವೆ, ರಾಜಕೀಯ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಸೇವೆಗಾಗಿ ಅಮೆರಿಕ ಕ್ಯಾಲಿಫೋರ್ನಿಯಾ ಬರ್ಕಿ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿರುವ ಹೈದರಾಬಾದ್‌ನ ಯುನೈಟೆಡ್ ಥಿಯೋಲಾಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಸುಮಲತಾ ಅಂಬರೀಶ್‌ಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಿದೆ. 

ಈ ಕುರಿತು ಸಂತಸ ಹಂಚಿಕೊಂಡಿರುವ ಸುಮಲತಾ ಅಂಬರೀಶ್ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ. ಗೌರವ ಡಾಕ್ಟರೇಟ್ ಪಡೆದಿರುವುದಕ್ಕೆ ಅತ್ಯಂತ ವಿನಮ್ರ ಮತ್ತು ಗೌರವ ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುವೆ.ಈ ಗೌರವ ನನ್ನ ಮುಂದಿನ ಹಾದಿಯಲ್ಲಿ ನನ್ನನ್ನು ಪ್ರೇರೇಪಿಸಲು ಇದು ಸ್ಫೂರ್ತಿಯಾಗಲಿದೆ. ನಾನು ಈ ಗೌರವವನ್ನು ನನ್ನ ಪತಿ ಅಂಬರೀಶ್, ನನ್ನ ಹೆತ್ತವರು ಮತ್ತು ನನ್ನ ಹಿತೈಷಿಗಳು ಮತ್ತು ಚಲನಚಿತ್ರ ಮತ್ತು ರಾಜಕೀಯ ಉದ್ಯಮದ ಬೆಂಬಲಿಗರಿಗೆ ಅರ್ಪಿಸುತ್ತೇನೆ. ಇಂಥದ್ದೊಂದು ಗೌರವ ಸಿಕ್ಕಿರುವುದು ನನ್ನ ಮೇಲಿನ ನಂಬಿಕೆ ಮತ್ತು ನಿಮ್ಮೆಲ್ಲರ ಆಶೀರ್ವಾದ ಕಾರಣ.  ನನ್ನನ್ನು  ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ. 

ಮಂಡ್ಯ ಲೋಕಸಭೆ ಜೆಡಿಎಸ್ ಪಾಲು? ಬಿಜೆಪಿ ನಿರ್ಧಾರಕ್ಕೆ ಸುಮಲತಾ ಕಂಗಾಲು!

ನಟ, ಪತಿ ಅಂಬರೀಶ್ ನಿಧನದ ಬಳಿಕ ರಾಜಕೀಯ ಕ್ಷೇತ್ರಕ್ಕೆ ಧುಮುಕಿದ ಸುಮಲತಾ ಅಂಬರೀಶ್ 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದಾರೆ. ಸಂಸದರ ನಿಧಿ ಬಳಕೆ, ಸಂಸದೆಯಾಗಿ ಮಂಡ್ಯ ಕ್ಷೇತ್ರದ ಅಭಿವೃದ್ಧಿ ಸೇರಿದಂತೆ ಹಲವು ವಿಚಾರಗಳಲ್ಲಿ ಸುಮಲತಾ ಇತರ ನಾಯಕರಿಗಿಂತ ಭಿನ್ನವಾಗಿ ಕೆಲಸ ಮಾಡಿದ ಹೆಗ್ಗಳಿಗೆ ಪಾತ್ರರಾಗಿದ್ದಾರೆ. ರಾಜಕೀಯ ಜೀವನದಲ್ಲಿ ಇದೀಗ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಿರುವ ಸುಮಲತಾ ಸಿನಿಮಾ ಕ್ಷೇತ್ರದಲ್ಲಿ ಹಲವು ಪ್ರಶಸ್ತಿ ಸ್ವೀಕರಿಸಿದ ಸಾಧನೆ ಮಾಡಿದ್ದಾರೆ.

ಸಿನಿಮಾ ಕ್ಷೇತ್ರದಲ್ಲಿ ಹತ್ತು ಹಲವು ಪ್ರಶಸ್ತಿ, ಗೌರವ ಸಮ್ಮಾನಗಳನ್ನು ಪಡೆದಿರುವ ಸುಮಲತಾ ಅಂಬರೀಶ್ ಇದೀಗ ರಾಜಕೀಯ ಜೀವನಕ್ಕೆ ಕಾಲಿಟ್ಟು ಪ್ರತಿಷ್ಠಿತ ಗೌರವ್ ಡಾಕ್ಟರೇಟ್ ಸನ್ಮಾನ ಸ್ವೀಕರಿಸಿದ್ದಾರೆ. 1979ರಲ್ಲಿ ತಿಸೈ ಮಾರಿಯಾ ಪರವೈಗಳ್ ಅನ್ನೋ ತಮಿಳು ಚಿತ್ರದಲ್ಲಿ ಅಭಿನಯಿಸಿದ ಸುಮಲತಾಗೆ ಅತ್ಯುತ್ತಮ ಹೊಸ ಮುಖ ಪ್ರಶಸ್ತಿ ಲಭಿಸಿತ್ತು. ಶ್ರುತಿಲಯಲು ತೆಲುಗು ಚಿತ್ರಕ್ಕಾಗಿ 1987ರಲ್ಲಿ ವಿಶೇಷ ಜ್ಯೂರಿ ಅತ್ಯುತ್ತಮ ನಟಿಗಾಗಿ ನೀಡುವ ನಂದಿ ಪ್ರಶಸ್ತಿ ಪಡೆದಿದ್ದಾರೆ. ಇದೇ ಚಿತ್ರಕ್ಕಾಗಿ ಅತ್ಯುತ್ತಮ ನಟಿಗಾಗಿ ಅಭಿಮಾನಿಗಳ ಚಲನಚಿತ್ರ ಪ್ರಶಸ್ತಿ,  ಕೇರಳ ಚಲನಚಿತ್ರ ವಿಮರ್ಶಕರ ಪ್ರಶಸ್ತಿ, ತ್ಯುತ್ತಮ ನಟಿಗಾಗಿ ಲಕ್ಸ್ ಪ್ರಶಸ್ತಿ, ಅತ್ಯುತ್ತಮ ನಟಿಗಾಗಿ ಕೇರಳ ಚಲನಚಿತ್ರ ವಿಮರ್ಶಕರ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿದೆ.

ಅಗತ್ಯ ಬಿದ್ದರೆ ಸುಮಲತಾ ಜತೆಗೂ ಭೇಟಿ: ಕುಮಾರಸ್ವಾಮಿ
 

Follow Us:
Download App:
  • android
  • ios