ಮೈಸೂರು (ಫೆ.07):  ಪಾಪ್‌ ಗಾಯಕಿ ರಿಹಾನಾ ಎಂದಾದರೂ ಭತ್ತದ ಗದ್ದೆ ನೋಡಿದ್ದಾರಾ?

ಹೀಗೆಂದು ಪ್ರಶ್ನೆ ಮಾಡಿ​ದ​ವರು ರಾಸಾಯನಿಕ ಮತ್ತು ಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ.

ಅಂತಾ​ರಾ​ಷ್ಟ್ರೀಯ ಪಾಪ್‌ ಗಾಯಕಿ ರಿಹಾನಾ ಅವ​ರು ಭಾರ​ತದ ರೈತ ಪ್ರತಿ​ಭ​ಟನೆಗೆ ಬೆಂಬಲ ನೀಡಿ​ರು​ವ ಕುರಿತು ಶನಿವಾರ ಸುದ್ದಿ​ಗಾ​ರರ ಪ್ರಶ್ನೆಗೆ ಉತ್ತರಿಸಿ, ರೈತರ ಕಷ್ಟದ ಬಗ್ಗೆ ರಿಹಾನಾ ಏನು ಮಾತನಾಡುತ್ತಾರೆ? ರಿಹಾನಾ ಎಂದಾದರೂ ಭತ್ತದ ಗದ್ದೆ ನೋಡಿದ್ದಾರಾ? ಬಹುಶಃ ಅವರು ಭತ್ತದ ಗದ್ದೆ ಮುಂದೆ ನಿಂತು ಫೋಟೋ ತೆಗೆಸಿಕೊಂಡು ಹೋಗಿರಬಹುದು. ರಿಹಾನಾಗೆ ರೈತರ ಶ್ರಮದ ಬಗ್ಗೆ ಏನು ಗೊತ್ತಿದೆ? ರೈತರು ತಮ್ಮ ಉತ್ಪನ್ನಗಳನ್ನು ಹೇಗೆ ಮಾರಾಟ ಮಾಡುತ್ತಾರೆ ಅಂತ ಅವರಿಗೆ ಗೊತ್ತೆ? ವಿದೇಶಿ ಕೈಗೊಂಬೆಯಾಗಿ ಅವರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.

ತನ್ನನ್ನು ತಾನು ಬ್ಯಾಡ್ ಗರ್ಲ್ ಅನ್ನೋ ರಿಹಾನಾ ಸೆಕ್ಸ್ ಬಗ್ಗೆ ಸಿಕ್ಕಾಪಟ್ಟೆ ಬೋಲ್ಡ್ ...

ರೈತ​ರಿಗೆ ಸ್ವಾತಂತ್ರ್ಯ ಬಂದಿ​ಲ್ಲ:  ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಆದರೆ ರೈತನಿಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ. ರೈತ ಬೆಳೆದ ಬೆಳೆಯನ್ನು ಮುಕ್ತವಾಗಿ ಮಾರಲು ನಾವು ಸ್ವಾತಂತ್ರ್ಯ ನೀಡುತ್ತಿದ್ದೇವೆ. ರೈತರು ಈಗ ಸರ್ಕಾರದ ಕೈಗೊಂಬೆ ಆಗಿದ್ದಾರೆ. ಬೇಕಾದವರಿಗೆ ಬೆಳೆ ಮಾರಾಟ ಮಾಡಲು ಸ್ವಾತಂತ್ರ್ಯ ಇಲ್ಲವಾಗಿದೆ. ತನ್ನ ಬೆಳೆಗೆ ಯಾರಾದರೂ ಹೆಚ್ಚು ಬೆಲೆ ಕೊಡುತ್ತಾರೆ ಅಂದರೆ ಕೊಡಲಿ ಬಿಡಿ. ಸುಮ್ಮನೆ ಯಾಕೆ ಹಠ ಮಾಡುತ್ತಾರೆ? ರೈತರಿಗೆ ಬೆಂಬಲ ನೀಡಿದ್ದು ಮೋದಿ ಸರ್ಕಾರ. ರೈತರು ಎಪಿಎಂಸಿ ಕೈಗೊಂಬೆಯಾಗಿ ಇರೋದು ಬೇಡ. ಸ್ವತಂತ್ರವಾಗಿ ಬೆಳೆ ಮಾರಾಟ ಮಾಡಲು ಅವಕಾಶ ಕೊಟ್ಟಿದ್ದೇವೆ. ಈ ಕಾಯ್ದೆಯಿಂದ ರೈತರು ಬಂಡವಾಳಶಾಹಿಗಳ ಕೈಗೊಂಬೆಯಾಗುತ್ತಾ​ರೆ ಅನ್ನೋದು ಸುಳ್ಳು ಎಂದು ತಿಳಿಸಿದರು.

ಪಟ್ಟಭದ್ರ ಹಿತಾಸಕ್ತಿಯಿಂದ ಈ ಪ್ರತಿಭಟನೆ ನಡೆಯುತ್ತಿದೆ. ಕೃಪಾಪೋಷಿತ ಜನರ ಪ್ರೇರಣೆಯಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ನಾವು ಸಂಧಾನ ಹಾಗೂ ಮಾತುಕತೆ ಎರ​ಡ​ಕ್ಕೂ ಸಿದ್ಧರಿದ್ದೇವೆ. ಆದರೆ ರೈತರೇ ಹಠ ಮಾಡುತ್ತಿದ್ದಾರೆ ಎಂದರು.